More

    ಬ್ಲ್ಯಾಕ್​ಸ್ಪಾಟ್ ಕಾಮಗಾರಿ ಬೇಗ ಪೂರ್ಣಗೊಳಿಸಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಿಡಬ್ಲ್ಯುಡಿ ಗುರುತಿಸಿರುವ ಬ್ಲ್ಯಾಕ್​ಸ್ಪಾಟ್ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬ್ಲ್ಯಾಕ್​ಸ್ಪಾಟ್​ಗಳಲ್ಲಿ ಶಾಲಾ ಪ್ರದೇಶವನ್ನು ಸೂಚಿಸುವ ಸೂಚನಾ ಫಲಕ, ಅಪಘಾತ ಸ್ಥಳಗಳನ್ನು ಸೂಚಿಸುವ ಸೂಚನಾ ಫಲಕ ಅಳವಡಿಸಿ ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಬೇಕು. ಮೂಡಿಗೆರೆ-ಕಡೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ 16 ಬ್ಲ್ಯಾಕ್​ಸ್ಪಾಟ್​ಗಳಿದ್ದು ಅದರಲ್ಲಿ 10 ಕಾಮಗಾರಿ ಮುಗಿದಿದೆ. ಉಳಿದ ಆರು ಬ್ಲ್ಯಾಕ್​ಸ್ಪಾಟ್ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

    ಜಿಪಂ ಕಚೇರಿಯಿಂದ ಡಿಸಿ ಕಚೇರಿ ಸಂರ್ಪಸುವ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಸಿಎಂ ಹಾಗೂ ಸಚಿವರು ನಗರಕ್ಕೆ ಭೇಟಿ ನೀಡಿದಾಗ ಈ ರಸ್ತೆ ಮೂಲಕ ಸಂಚರಿಸುವುದು ಸಾಮಾನ್ಯವಾದ್ದರಿಂದ ಏಪ್ರಿಲ್​ನೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

    ಕಡೂರು-ಶಿವಮೊಗ್ಗ ಸಂರ್ಪಸುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ 21 ಬ್ಲ್ಯಾಕ್​ಸ್ಪಾಟ್ ಕಾಮಗಾರಿ ಪೂರ್ಣಗೊಳಿಸಬೇಕು. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಮೊದಲು ಕಾಮಗಾರಿ ಮುಗಿಸಬೇಕು ಹಾಗೂ ಮುಖ್ಯ ರಸ್ತೆಗಳಿಗೆ ಹಳ್ಳಿಗಳು ಸಂರ್ಪಸುವ ಕಡೆಗಳಲ್ಲಿ ಹಂಪ್ಸ್ ಹಾಕಿ ಎಂದು ತಿಳಿಸಿದರು.

    ಪೊಲೀಸ್ ಇಲಾಖೆ ಬೈಕ್ ಆಂಬುಲೆನ್ಸ್ ಖರೀದಿಗಾಗಿ ಸರ್ಕಾರ 8.33 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಅಗತ್ಯವಿರುವಷ್ಟು ಬೈಕ್ ಆಂಬುಲೆನ್ಸ್​ಗಳನ್ನು ಮಾತ್ರ ಬಳಸಿಕೊಳ್ಳುವಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಶ್ರುತಿ ಅವರಿಗೆ ತಿಳಿಸಿದರು.

    ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾ ರಸ್ತೆಗಳಲ್ಲಿರುವ ಬ್ಲ್ಯಾಕ್​ಸ್ಪಾಟ್​ಗಳು ಮತ್ತು ಅವುಗಳ ಕಾಮಗಾರಿಗಳ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ. ಶಿರೋಳ್ಕರ್ ಮಾಹಿತಿ ನೀಡಿದರು.

    ಇದೇ ಸಂದರ್ಭದಲ್ಲಿ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts