More

    ಕಾಸರಕೋಡು ಬಂದರು ರಸ್ತೆಗೆ ರಾಷ್ಟ್ರೀಯ ಹಸಿರು ಪೀಠ ತಡೆ

    ಕಾರವಾರ: ಹೊನ್ನಾವರ ಕಾಸರಕೋಡಿನಲ್ಲಿ ನಿರ್ವಣವಾಗುತ್ತಿರುವ ಖಾಸಗಿ ಬಂದರಿಗೆ ತೆರಳಲು ರಸ್ತೆ ನಿರ್ವಣಕ್ಕೆ ಚೆನ್ನೈನ ದಕ್ಷಿಣ ವಲಯ ರಾಷ್ಟ್ರೀಯ ಹಸಿರು ಪೀಠ (ಎನ್​ಜಿಟಿ)ತಡೆ ನೀಡಿದೆ.

    ಹೊನ್ನಾವರದ ದಮಯಂತಿ ಸುಬ್ರಾಯ ಮೇಸ್ತ ಎಂಬುವವರು ಎನ್​ಜಿಟಿ ಮೊರೆ ಹೋಗಿದ್ದರು. ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪುಷ್ಪಾ ಸತ್ಯನಾರಾಯಣ ಹಾಗೂ ನ್ಯಾಯಾಧೀಶ ಸತ್ಯಗೋಪಾಲ ಕೊರಳಪಾಟಿ ಅವರ ಪೀಠ ಮುಂದಿನ ಆದೇಶದವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಬಂದರು ಇಲಾಖೆಗೆ ಸೂಚನೆ ನೀಡಿದ್ದು, ಆಗಸ್ಟ್ 22ಕ್ಕೆ ವಿಚಾರಣೆ ಮುಂದೂಡಿದೆ.

    ಸಿಆರ್​ಜಡ್ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿ ಕಡಲ ತೀರದ ಜೀವ ವೈವಿಧ್ಯಕ್ಕೆ ಹಾನಿ ಮಾಡಲಾಗುತ್ತಿದೆ. ಆಲಿವ್ ರೆಡ್ಲಿ ಕಡಲ ಆಮೆಗಳು ಮೊಟ್ಟೆ ಇಡುವ ಸ್ಥಳದಲ್ಲಿ ಕಲ್ಲು , ಮಣ್ಣು ಸುರಿಯಲಾಗುತ್ತಿದೆ. ಇದರಿಂದ ಕಡಲ ಆಮೆಗಳು ಸಾವನ್ನಪ್ಪಿವೆ ಎಂದು ಅರ್ಜಿದಾರರ ಪರವಾಗಿ ಶ್ರೀಜಾ ಚಕ್ರಬೊರ್ತಿ ವಾದ ಮಂಡಿಸಿದ್ದರು.

    ಕೇಂದ್ರ ಪರಿಸರ ಮಂತ್ರಾಲಯ, ರಾಜ್ಯ ಸರ್ಕಾರ, ಕಾರವಾರ ಬಂದರು ಇಲಾಖೆಯ ಪರ ವಕೀಲರು ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ರಸ್ತೆ ನಿರ್ವಣಕ್ಕೆ ಸಿಆರ್​ಜಡ್ ಅಥವಾ ಪರಿಸರ ಇಲಾಖೆಯಿಂದ ಯಾವುದೇ ಅನುಮತಿ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ವಾದ ಆಲಿಸಿದ ಪೀಠವು ಪರಿಸರ ಅನುಮತಿಯ ಬಗ್ಗೆ ರಾಜ್ಯ ಸರ್ಕಾರ ಹೇಳಿಕೆ ನೀಡಬೇಕು ಎಂದು ಆದೇಶಿಸಿದೆ.

    ಬಂದರು ಜಾಗಕ್ಕೆ ರಸ್ತೆ ನಿರ್ಮಾಣ ವಿರೋಧಿಸಿ ಸ್ಥಳೀಯ ಮೀನುಗಾರರು ತೀವ್ರ ಪ್ರತಿಭಟನೆ ನಡೆಸಿದ್ದರು. ಆದರೆ, ಪೊಲೀಸ್ ಫೋರ್ಸ್ ಬಳಸಿ ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಈಗಾಗಲೇ ತನಿಖೆಗೆ ಆದೇಶ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts