More

    ಜಮುರಾ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ

    ಚಿತ್ರದುರ್ಗ: ರಾಜ್ಯದ ಉಳಿದೆಲ್ಲ ಪೀಠಗಳಿಗಿಂತ ಮುರುಘಾ ಮಠ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದ್ದು, ಆ ಮೂಲಕ ಜನ ಸಾಮಾನ್ಯರಿಗೆ ಬಹು ದೊಡ್ಡ ಕೊಡುಗೆ ನೀಡುತ್ತಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

    ಮುರುಘಾ ಮಠದಲ್ಲಿ ಶನಿವಾರ ರಾತ್ರಿ ಜಮುರಾ ಕಲಾ ಲೋಕದ ನಾಲ್ಕು ದಿನಗಳ ರಾಷ್ಟ್ರೀಯ ನಾಟಕೋತ್ಸವ ಉದ್ಘಾಟನೆ ಹಾಗೂ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

    ಬಸವಕಲ್ಯಾಣದ ಜನರು ಇಂದಿಗೂ ಬಸವಣ್ಣ ಜೀವಂತವಿದ್ದಾರೆಂದು ಭಾವಿಸಿದ್ದಾರೆ. ಬಸವಣ್ಣನ ಆಶಯಗಳನ್ನು ಹತ್ತಾರು ಪೀಳಿಗೆಗೆ ತಲುಪಿಸುವ ಕೆಲಸವನ್ನು ಶರಣರು ಮಾಡುತ್ತಿದ್ದಾರೆ. ಮೈಸೂರು ಮಹಾರಾಜರಿಗೆ ಸಾಲ-ದೇಣಿಗೆ ನೀಡಿದ ಇತಿಹಾಸ ಶ್ರೀಮಠಕ್ಕೆ ಇದೆ ಎಂದರು.

    ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ನಾಟಕ ಅಕಾಡೆಮಿ ಅಧ್ಯಕ್ಷ ಆರ್.ಭೀಮಸೇನ, ಭೂತ, ವರ್ತಮಾನ ಮತ್ತು ಭವಿಷ್ಯದ ಸಂಗಮವೆ ರಂಗಭೂಮಿ. ನಾನು ಕೂಡ ಹತ್ತಾರು ವರ್ಷಗಳ ಹಿಂದೆ ಜಮುರಾ ಕಲಾಲೋಕದಲ್ಲಿ ಕಲಾವಿದನಾಗಿದ್ದೆ ಎಂದು ನೆನಪು ಮಾಡಿಕೊಂಡರು.

    ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಬ್ರಹ್ಮಾಂಡದಲ್ಲಿ ಸಂಭವಿಸುವಂತೆ ಸೃಷ್ಟಿ, ಸ್ಥಿತಿ ಮತ್ತು ಲಯ ನಮ್ಮಲ್ಲೂ ನಡೆಯುತ್ತದೆ. ಒಪ್ಪಿದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಶ್ರೀಮಠವನ್ನು ನೋಡಿ ಇವತ್ತು ಎಲ್ಲರೂ ಶ್ಲಾಘಿಸುತ್ತಿದ್ದಾರೆ ಎಂದು ಹೇಳಿದರು.

    ಒಂದು ಲಕ್ಷ ರೂ. ಚೆಕ್ ಹಾಗೂ ಆಕರ್ಷಕ ಫಲಕವನ್ನೊಳಗೊಂಡ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಹಿರಿಯ ನಟಿ ತಾರಾ ಅನುರಾಧಾ ಅವರಿಗೆ ಶ್ರೀಗಳು ಹಾಗೂ ಗಣ್ಯರು ಪ್ರದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts