More

    ಮೋದಿ ನಾಯಕತ್ವದಲ್ಲಿ ಚೀನಾ ವಿರುದ್ಧ ಪ್ರತೀಕಾರ ನಿಶ್ಚಿತ ಎಂದ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್​

    ನವದೆಹಲಿ: ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯ ಬಳಿ ಚೀನಾ ನಡೆಸಿದ ದುಷ್ಕೃತ್ಯದ ವಿರುದ್ಧ ಭಾರತ ದೇಶಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ಸೇನೆಯ 20 ಯೋಧರನ್ನು ಹತ್ಯೆಗೈದ ಚೀನಾ ಕೃತ್ಯವನ್ನು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಖಂಡಿಸಿದ್ದಾರೆ.

    ಶಿವಸೇನೆ ಮಖಂಡ ಸಂಜಯ್​ ರಾವತ್​ ಅವರು ಕೂಡ ದಾಳಿಯನ್ನು ವಿರೋಧಿಸಿದ್ದು, ಚೀನಾಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.

    ಈಗ ಭಾರತ-ಚೀನಾ ಗಡಿಯಲ್ಲಿ ಆಗಿರುವ ಸಂಘರ್ಷಕ್ಕೆ ಜವಾಹರ್​ ಲಾಲ್​ ನೆಹರು, ಇಂದಿರಾ ಗಾಂಧಿ ಅಥವಾ ರಾಹುಲ್​ ಗಾಂಧಿಯವರನ್ನು ಹೊಣೆಮಾಡುವುದರಲ್ಲಿ ಅರ್ಥವಿಲ್ಲ. ನಮ್ಮ ದೇಶದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ದುರಂತಕ್ಕೆ ನಾವೆಲ್ಲರೂ ಜವಾಬ್ದಾರರು. ಚೀನಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ನಿರ್ಧಾರ ಕೈಗೊಂಡರೂ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡುತ್ತವೆ. ಆದರೆ ಗಡಿ ಪ್ರದೇಶದಲ್ಲಿ ಹೀಗೆ ಬಿಕ್ಕಟ್ಟು ಉಂಟಾಗಲು ಕಾರಣವೇನು? ಎಲ್ಲಿ ತಪ್ಪು ನಡೆದಿದೆ ಎಂಬುದನ್ನು ಮೋದಿಯವರು ಈ ದೇಶದ ಜನರಿಗೆ ತಿಳಿಸಬೇಕು ಎಂದು ಸಂಜಯ್​ ರಾವತ್​ ಹೇಳಿದ್ದಾರೆ. ಇದನ್ನೂ ಓದಿ: ಚೀನಾದ ಕಮಾಂಡಿಂಗ್​ ಅಧಿಕಾರಿಯನ್ನೂ ಹತ್ಯೆ ಮಾಡಿದೆ ಭಾರತ ಸೇನೆ

    ಚೀನಾ ದಾಳಿಗೆ ತಕ್ಕ ಉತ್ತರ ಕೊಡುವುದು ಯಾವಾಗ? ಒಂದೇ ಒಂದು ಗುಂಡು ಹಾರಿಸದೆ ಚೀನಾ ಸೈನಿಕರು ನಮ್ಮ 20 ಯೋಧರ ಪ್ರಾಣ ತೆಗೆದಿದ್ದಾರೆ. ಅದಕ್ಕೆ ಪ್ರತಿಯಾಗಿ ನಾವೇನು ಮಾಡಿದ್ದೇವೆ? ಚೀನಾದ ಎಷ್ಟು ಸೈನಿಕರನ್ನು ಕೊಲ್ಲಲಾಗಿದೆ? ನಮ್ಮ ಭೂಪ್ರದೇಶವನ್ನು ಚೀತಾ ಅತಿಕ್ರಮಿಸಿಕೊಂಡಿದೆಯಾ? ಎಂದು ಪ್ರಶ್ನಿಸಿರುವ ಸಂಜಯ್​ ರಾವತ್, ಪ್ರಧಾನಿಯವರೇ..ಈ ಹೋರಾಟದಲ್ಲಿ ಇಡೀ ದೇಶ ನಿಮ್ಮೊಂದಿಗೆ ಇದೆ. ಆದರೆ ಸತ್ಯವನ್ನು ಹೇಳಿ.

    ಮಾತನಾಡಿ..ಏನಾದರೂ ಮಾತನಾಡಿ. ಈಗ ನಡೆಯುತ್ತಿರುವ ಸಂಘರ್ಷದ ಹಿಂದಿರುವ ಸತ್ಯವೇನೆಂದು ತಿಳಿಯಲು ಇಡೀ ದೇಶ ಬಯಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿಯವೇ ನಿಮ್ಮಲ್ಲಿ ಶೌರ್ಯವಿದೆ. ನೀವೊಬ್ಬ ಹೋರಾಟಗಾರರು. ನಿಮ್ಮ ನಾಯಕತ್ವದಡಿ ಖಂಡಿತ ಭಾರತೀಯ ಸೇನೆ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ ಎಂದೂ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts