More

    PHOTOS| ಬಿಕಿನಿಯಲ್ಲಿ ಭಾವಿ ಪತಿ ಹಾರ್ದಿಕ್​ರೊಂದಿಗಿರೋ ಫೋಟೋ ಶೇರ್​ ಮಾಡಿದ ನತಾಶಾ: ಪಾಂಡ್ಯ ಪ್ರತಿಕ್ರಿಯೆ ಹೀಗಿತ್ತು…

    ನವದೆಹಲಿ: ಹೊಸ ವರ್ಷದ ಆರಂಭದಲ್ಲೇ ಸರ್ಬಿಯಾ ಮೂಲದ ನಟಿ ನತಾಶಾ ಸ್ಟಾಂಕೋವಿಕ್​ರೊಂದಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡು ಅಭಿಮಾನಿಗಳಿಗೆ ಮಾತ್ರವಲ್ಲದೇ ಕುಟುಂಬದವರಿಗೂ ಟೀಮ್​ ಇಂಡಿಯಾ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಸರ್ಪೈಸ್​ ನೀಡಿದ್ದರು. ಇದೀಗ ಭಾವಿ ಪತ್ನಿ ನತಾಶಾ ಅವರು ಹಾರ್ದಿಕ್​ರೊಂದಿಗೆ ಕಳೆದಂತಹ ಮಧುರ ಕ್ಷಣಗಳ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಬೀಚ್​ ಒಂದರಲ್ಲಿ ತೆಗೆದಿರುವ ಫೋಟೋ ಇದಾಗಿದ್ದು, ಭಾವಿ ಪತ್ನಿ ನತಾಶಾ ಅವರು ಕಪ್ಪು-ಬಿಳುಪು ಬಣ್ಣದ ಬಿಕಿನಿ ಧರಿಸಿದ್ದರೆ, ಹಾರ್ದಿಕ್​, ಶಾರ್ಟ್ಸ್​ ಧರಿಸಿ ಅರೆಬೆತ್ತಲೆ ಪೋಸ್​​ ನೀಡಿದ್ದಾರೆ. ನವ ತಾರಾಜೋಡಿಯ ಫೋಟೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಮಂದಿ ಫೋಟೋವನ್ನು ಲೈಕ್ಸ್​ ಮಾಡಿದ್ದಾರೆ. ಫೋಟೋ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಶೇಷವೆಂದರೆ ಹಾರ್ದಿಕ್​ ಕೂಡ ಕಮೆಂಟ್​ ಸೆಕ್ಸನ್​ನಲ್ಲಿ ಹೃದಯದ ಎಮೋಜಿಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ‘ಮೈ ತೆರಾ, ತು ಮೇರಿ, ಜಾನೇ ಸಾರಾ ಹಿಂದುಸ್ತಾನ್. 01.01.2020, ಎಂಗೇಜ್ಡ್​’ ಎಂದು ಬರೆದು ಹಾರ್ದಿಕ್ ಪಾಂಡ್ಯ ಬುಧವಾರ ಸಂಜೆ(ವರ್ಷದ ಮೊದಲ ದಿನ) ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ನಿಶ್ಚಿತಾರ್ಥವನ್ನು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು.

    ದುಬೈನಲ್ಲಿ ವಿಹಾರ ದೋಣಿಯೊಂದರಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಪಾಂಡ್ಯ-ನತಾಶಾ ಆಪ್ತರು ಮಾತ್ರ ಸಮಾರಂಭದಲ್ಲಿದ್ದರು. ಇದರ ಬೆನ್ನಲ್ಲೇ, ದೋಣಿಯಲ್ಲಿ ಪಾಂಡ್ಯ ಮೊಣಕಾಲೂರಿ ಪ್ರಪೋಸ್ ಮಾಡಿರುವ ಮತ್ತು ಪಾಂಡ್ಯ ತುಟಿಗೆ ಮುತ್ತಿಟ್ಟು ನತಾಶಾ ಒಪ್ಪಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪಾಂಡ್ಯ ತೊಡಿಸಿದ ಉಂಗುರದ ಜತೆಗೆ ನತಾಶಾ ಸೆಲ್ಪಿ ಕೂಡ ಕ್ಲಿಕ್ಕಿಸಿಕೊಂಡು ಶೇರ್​ ಮಾಡಿಕೊಂಡಿದ್ದರು.

    ಹಾರ್ದಿಕ್​ ಪಾಂಡ್ಯಾ ಎಂಗೇಜ್​ಮೆಂಟ್​ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಅವರ ಕುಟುಂಬದವರಲ್ಲೂ ಅಚ್ಚರಿ ಮೂಡಿಸಿತ್ತು. ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಅವರ ತಂದೆಗೇ ಗೊತ್ತಿರಲಿಲ್ಲವಂತೆ. ಈ ಬಗ್ಗೆ ಹಾರ್ದಿಕ್​ ಪಾಂಡ್ಯಾ ತಂದೆ ಹಿಮಾಂಶು ಅವರೇ ಮಾಧ್ಯಮಗಳಿಗೆ ತಿಳಿಸಿದ್ದರು. ನತಾಶಾ ಒಳ್ಳೆಯ ಹುಡುಗಿ. ನಾವು ಆಕೆಯನ್ನು ಮುಂಬೈನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಹಾರ್ದಿಕ್​ ಹಾಗೂ ನತಾಶಾ ದುಬೈಗೆ ಪ್ರವಾಸಕ್ಕೆ ಹೋಗಿದ್ದಾರೆಂದು ಗೊತ್ತಿತ್ತು. ಆದರೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನಮಗೂ ಆಶ್ಚರ್ಯವಾಗಿದೆ ಎಂದಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts