More

    ಚಂದ್ರಯಾನ 2024: ಬಾಹ್ಯಾಕಾಶ ನೌಕೆಯಲ್ಲಿ ಶೌಚಾಲಯ ವಿನ್ಯಾಸ ಸ್ಪರ್ಧೆಗೆ ನಾಸಾ ಆಹ್ವಾನ

    ವಾಷಿಂಗ್ಟನ್: ಆರ್ಟೆಮಿಸ್ ಮಿಷನ್ ಅಡಿ 2024ರ ಹೊತ್ತಿಗೆ ಚಂದ್ರನ ಅಂಗಳಕ್ಕೆ ತೆರಳುವ ಯೋಜನೆ ಹೊಂದಿರುವ ನಾಸಾ, ಮೈಕ್ರೊಗ್ರ್ಯಾವಿಟಿಯಲ್ಲಿ ಮಾತ್ರವಲ್ಲದೆ ಭವಿಷ್ಯದ ಲೂನಾರ್ ಲ್ಯಾಂಡರ್ ಬಾಹ್ಯಾಕಾಶ ನೌಕೆಯಲ್ಲೂ ಉಪಯೋಗವಾಗಬಹುದಾದ ಶೌಚಾಲಯ ಅಭಿವೃದ್ಧಿಪಡಿಸಲು ಜಗತ್ತಿನ ಸಂಶೋಧಕರಿಗೆ ಕರೆ ನೀಡುತ್ತಿದೆ.

    ತಮ್ಮ ಅಗತ್ಯ ಕಾರ್ಯಗಳನ್ನು ಪೂರೈಸಿಕೊಳ್ಳಲು ಅಪೊಲೊ ಕಾರ್ಯಾಚರಣೆಯಿಂದ ತ್ಯಾಜ್ಯ ನಿರ್ವಹಣೆ (ನಾಸಾದ ಮಾತಿನಲ್ಲಿ ಹೇಳುವುದಾದರೆ ಮಲವನ್ನು ಹಿಡಿಯಲು ಪೃಷ್ಠಕ್ಕೆ ಟೇಪ್ ಮಾಡಿದ ಪ್ಲಾಸ್ಟಿಕ್ ಚೀಲ ಬಳಸುವುದು) ಯಿಂದ ಹಿಡಿದು “ಫ್ಯಾನ್-ಚಾಲಿತ ಹೀರುವ ವ್ಯವಸ್ಥೆಯನ್ನು ಬಳಸುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಹೆಚ್ಚು ಸುಧಾರಿತ ಶೌಚಾಲಯದವರೆಗಿನ ಹಲವು ಮಾರ್ಗಗಳನ್ನು ಆರಂಭಿಕ ಬಾಹ್ಯಾಕಾಶ ಯುಗದ ಖಗೋಳಯಾನಿಗಳೂ ಸೇರಿದಂತೆ ಎಲ್ಲರೂ ಕಂಡುಕೊಂಡಿದ್ದಾರೆ.

    ಇದನ್ನೂ ಓದಿ: ‘ಹಲೋ’ ಬದಲು ‘ಜೈ ಕಿಸಾನ್’ ಎನ್ನಲು ಕೃಷಿ ಇಲಾಖೆ ಸೂಚನೆ

    ಈಗ ಆರ್ಟೆಮಿಸ್ ಮಿಷನ್ ಅಡಿ 2024ರ ವೇಳೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ಚಂದ್ರನ ಅಂಗಳಕ್ಕೆ ತೆರಳುವ ಯೋಜನೆ ಹೊಂದಿದ್ದು, ಮೈಕ್ರೊಗ್ರಾವಿಟಿಯಲ್ಲಿ ಮಾತ್ರವಲ್ಲದೆ ಭವಿಷ್ಯದ ಲೂನಾರ್ ಲ್ಯಾಂಡರ್ ಬಾಹ್ಯಾಕಾಶ ನೌಕೆಯಲ್ಲಿ ಶೌಚಾಲಯ ಅಭಿವೃದ್ಧಿಪಡಿಸಲು ವಿಶ್ವದ ಸಂಶೋಧಕರಿಗೆ ಕರೆ ನೀಡುತ್ತಿದೆ.
    ವಿನ್ಯಾಸ ವಿಜೇತರಿಗೆ ಮೊದಲ ಬಹುಮಾನ 20 ಸಾವಿರ ಡಾಲರ್, ಎರಡನೇ ಸ್ಥಾನಕ್ಕೆ 10 ಸಾವಿರ ಡಾಲರ್ ಮತ್ತು ಮೂರನೇ ಸ್ಥಾನಕ್ಕೆ 5 ಸಾವಿರ ಡಾಲರ್ ನೀಡಲಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು “ಕಿರಿಯ” ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ, ಅದರಲ್ಲಿಯೂ ನಿಗದಿತ ಪ್ರೋತ್ಸಾಹದಾಯಕ ಬಹುಮಾನವಿರುತ್ತದೆ.

    “ಈ ಸವಾಲು ಮಾನವ ತ್ಯಾಜ್ಯ ಸೆರೆಹಿಡಿಯುವಿಕೆ ಮತ್ತು ನಿರ್ವಹಣೆ ಸಮಸ್ಯೆಗೆ ಆಮೂಲಾಗ್ರವಾಗಿ ನೂತನ ಮತ್ತು ವಿಭಿನ್ನ ವಿಧಾನಗಳನ್ನು ಆಕರ್ಷಿಸುವ ಆಶಯವನ್ನು ಹೊಂದಿದೆ” ಎಂದು ನಾಸಾ ಗುರುವಾರ ತಿಳಿಸಿದೆ.
    ಶೌಚಾಲಯವು ಚಂದ್ರನ ಗುರುತ್ವಾಕರ್ಷಣೆ ಪ್ರದೇಶದಲ್ಲೂ ಕೆಲಸ ಮಾಡಬೇಕು, ಭೂಮಿಗೆ ಹೋಲಿಸಿದರೆ ಆರನೇ ಒಂದು ಭಾಗದಷ್ಟು ಗುರುತ್ವಾಕರ್ಷಣ ಶಕ್ತಿ ಚಂದ್ರನಲ್ಲಿದೆ.

    ಇದನ್ನೂ ಓದಿ:  ಹೆಣ್ಣಾಗಿ ಮದುವೆಯಾದಳು… ಕ್ಯಾನ್ಸರ್​ಗೆ ತುತ್ತಾಗಿ ಗಂಡಾದಳು…!

    ಇದು ಗರಿಷ್ಠ 0.12 ಘನ ಮೀಟರ್ (4.2 ಘನ ಅಡಿ) ಜಾಗದಲ್ಲಿ ಇರಬೇಕು. ಮತ್ತು 60 ಡೆಸಿಬಲ್‌ಗಳಿಗಿಂತ ಕಡಿಮೆ ಶಬ್ದ ಮಟ್ಟದೊಂದಿಗೆ ಅಂದರೆ ಭೂಮಿ ಮೇಲಿರುವ ಸ್ನಾನಗೃಹದ ವೆಂಟಿಲೇಷನ್ ಫ್ಯಾನ್‌ಗೆ ಸಮಾನವಾಗಿ ಕಾರ್ಯನಿರ್ವಹಿಸುವಂತಿರಬೇಕು.

    ಎಲ್ಲಕ್ಕಿಂತ ಮುಖ್ಯವಾಗಿ, ಇದು ಏಕಕಾಲದಲ್ಲಿ ಮಲ, ಮೂತ್ರ, ರಕ್ತವನ್ನು ನಿಗದಿತ ಮಟ್ಟದಲ್ಲಿ ಸಂಗ್ರಹಿಸಲು ಸಾಧ್ಯವಾಗುವಂತಿರಬೇಕು.  ಸುಲಭ ನೈರ್ಮಲ್ಯ ಮತ್ತು ನಿರ್ವಹಣೆಗೆ ಅನುವು ಮಾಡಿಕೊಡುವಂತಿರಬೇಕು.
    ಈ ಶೌಚಾಲಯ ವ್ಯವಸ್ಥೆ ತ್ಯಾಜ್ಯವನ್ನು ಸಂಗ್ರಹಿಸಲು ಅಥವಾ ವಾಹನದ ಹೊರಗೆ ಎಸೆಯಲು ಸಹ ಶಕ್ತವಾಗಿರಬೇಕು.
    ಶೌಚಾಲಯದಲ್ಲಿ ಮತ್ತೊಬ್ಬ ಸಿಬ್ಬಂದಿ ಸದಸ್ಯನ ಸಹಾಯದ ಅಗತ್ಯವಿಲ್ಲದೇ ವಾಂತಿ ಸೆರೆಹಿಡಿಯಬಲ್ಲ ಶೌಚಾಲಯ ವಿನ್ಯಾಸಗಳಿಗೆ ಬೋನಸ್ ಅಂಕಗಳನ್ನು ನೀಡಲಾಗುತ್ತದೆ ಎಂದು ನಾಸಾ ತಿಳಿಸಿದೆ. ಸ್ಪರ್ಧೆ ಆಗಸ್ಟ್ 17 ಕೊನೆ ದಿನವಾಗಿರುತ್ತದೆ.

    ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts