More

    ಶೌಚಗೃಹದ ಡಿಸೈನ್‌ ಕಳಿಸಿ- 26 ಲಕ್ಷ ರೂಪಾಯಿ ಗೆಲ್ಲಿ- ನಾಸಾದಿಂದ ಭಾರಿ ಆಫರ್‌!

    ವಾಷಿಂಗ್ಟನ್‌: ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಇದೀಗ ಹೊಸ ಚಾಲೆಂಜ್‌ ಒಂದನ್ನು ಜನರ ಮುಂದಿಟ್ಟಿದೆ.

    ಅದೇನೆಂದರೆ ಶೌಚಗೃಹದ ಡಿಸೈನ್‌ ಕಳಿಸುವ ಮೂಲಕ 26 ಲಕ್ಷ ರೂಪಾಯಿ ಬಹುಮಾನವನ್ನು ಗೆಲ್ಲುವ ಅವಕಾಶವಿದು!

    ಹಾಗಿದ್ದರೆ ಏನಿದು ಶೌಚಗೃಹ ಇಲ್ಲಿದೆ ನೋಡಿ ವಿವರ: ಇದು ಭೂಮಿಯ ಮೇಲಿನ ಸಾಮಾನ್ಯ ಶೌಚಗೃಹವಲ್ಲ. ಬದಲಿಗೆ ಮೈಕ್ರೊಗ್ರಾವಿಟಿ ಮತ್ತು ಚಂದ್ರನ ಗುರುತ್ವ ಎರಡರಲ್ಲೂ ಕಾರ್ಯನಿರ್ವಹಿಸಬಲ್ಲ ಕಾಂಪ್ಯಾಕ್ಟ್ ಶೌಚಾಲಯಗಳಿಗೆ ಹೊಸ ವಿನ್ಯಾಸ ಪರಿಕಲ್ಪನೆಗಳನ್ನು ಕಳುಹಿಸಲು ಜನರನ್ನು ನಾಸಾ ಆಹ್ವಾನಿಸಿದೆ.

    ಇದನ್ನೂ ಓದಿ: ಫೇಸ್‌ಬುಕ್‌ ಸಿರಿವಂತಿಕೆಯನ್ನೇ ಅಲ್ಲಾಡಿಸಿದ ಕಪ್ಪು ವರ್ಣೀಯರ ಹತ್ಯೆ! ಯಾಕೆ ಗೊತ್ತಾ?


    ಭವಿಷ್ಯದ ಗಗನಯಾತ್ರಿಗಳನ್ನು ಚಂದ್ರನತ್ತ ಕಳುಹಿಸಲು ಸಜ್ಜುಗೊಳಿಸುವ ಸಂಬಂಧ ಇಂಥದ್ದೊಂದು ಹೊಸ ಪರಿಕಲ್ಪನೆಯನ್ನು ನಾಸಾ ಜನರ ಮುಂದಿಟ್ಟಿದೆ. ಗಗನಯಾತ್ರಿಗಳು ಆಗಸದಲ್ಲಿ ಕುಡಿಯುವುದು, ತಿನ್ನುವುದು ಮಾಡಿದ ನಂತರ ಅವರಿಗಾಗಿಯೇ ವಿಶೇಷ ರೀತಿಯಲ್ಲಿ ಮೂತ್ರ ಮತ್ತು ಮಲ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇದೀಗ ಹೊಸ ವಿನ್ಯಾಸವನ್ನು ನಾಸಾ ಬಯಸಿದೆ.

    “ಬಾಹ್ಯಾಕಾಶ ಶೌಚಾಲಯಗಳು ಈಗಾಗಲೇ ಅಸ್ತಿತ್ವದಲ್ಲಿವೆ ಮತ್ತು ಬಳಕೆಯಲ್ಲಿದ್ದರೂ ಅವುಗಳನ್ನು ಮೈಕ್ರೊಗ್ರಾವಿಟಿಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ” ಎಂದಿರುವ ನಾಸಾ ಈಗ ಹೊಸಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿಯುವವರಿಗಾಗಿ ಆಹ್ವಾನಿಸಿದೆ.

    ನಾಸಾದ ಆರ್ಟೆಮಿಸ್ ಮೂನ್ ಮಿಷನ್ 2024 ರ ವೇಳೆಗೆ ಪ್ರಪ್ರಥಮ ಮಹಿಳೆ ಚಂದ್ರನ ಮೇಲೆ ಇಳಿಯಲಿದ್ದಾಳೆ. ಆ ಸಮಯದೊಳಗೆ ಇಂಥದ್ದೊಂದು ಹೊಸ ತಂತ್ರಜ್ಞಾನವನ್ನು ನಾಸಾ ಕಂಡುಹಿಡಿಯಬಯಡಿದೆ. ವಿನ್ಯಾಸಗಳನ್ನು ಕಳುಹಿಸುವ ಕೊನೆಯ ದಿನಾಂಕ ಆಗಸ್ಟ್ 17. ಹೆಚ್ಚಿನ ಮಾಹಿತಿಗೆ ನಾಸಾ ವೆಬ್‌ಸೈಟ್‌ ನೋಡಬಹುದು. (ಏಜೆನ್ಸೀಸ್‌)

    ವಿದೇಶಿ SHAREit ಬದಲು ಸ್ವದೇಶಿ Z share: ಕನ್ನಡಿಗನಿಂದ ತಯಾರಾಗಿದೆ ಹೊಸ ಆ್ಯಪ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts