More

    ಕರೊನಾ ಸೋಂಕಿತರಿಗಾಗಿ ನಾಸಾದಿಂದ ತಯಾರಾಯ್ತು ‘ವಿಟಲ್​’

    ವಾಷಿಂಗ್ಟನ್​: ಕರೊನಾ ಸೋಂಕಿತರಿಗೆ ವಿಶೇಷ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಚಿಕಿತ್ಸೆ ನೀಡುವಂಥ ವೆಂಟಿಲೇಟರ್​ ಅನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಅಭಿವೃದ್ಧಿ ಪಡಿಸಿದೆ.

    ಇದು ಕರೊನಾ ಸೋಂಕಿತರಿಗೆ ಅಗತ್ಯವಾಗಿ ಬೇಕಾಗಿರುವಂಥ ಅಧಿಕ ಒತ್ತಡದ ವೆಂಟಿಲೇಟರ್​ ಆಗಿದ್ದು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಇದರಿಂದ ಸಾಧ್ಯ ಎಂದು ನಾಸಾ ಹೇಳಿದೆ. ಇದಕ್ಕೆ “ವಿಟಲ್​ (ವೆಂಟಿಲೇಟರ್ ಇಂಟರ್​ವೆನ್​ಷನ್​ ಟೆಕ್ನಾಲಜಿ) ಎಂದು ಹೆಸರಿಸಲಾಗಿದೆ. ಇದನ್ನು ಈಗಾಗಲೇ ನ್ಯೂಯಾರ್ಕ್‌ನ ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಲ್ಲಿ ಪಾಸಾಗಿ ಬಂದಿದೆ.

    ಆರಂಭಿಕ ಹಂತದಲ್ಲಿ ಸೋಂಕಿತರಾದವರ ಪತ್ತೆಗೆ ಹಾಗೂ ಚಿಕಿತ್ಸೆಗೆ ಇದರ ಬಳಕೆ ಸಾಧ್ಯವಾಗಿದೆ. ಕರೊನಾ ಅಂತಿಮ ಹಂತದ ಪರೀಕ್ಷೆಗೆ ಅಗತ್ಯವಾಗಿರುವ ವೆಂಟಿಲೇಟರ್​ಗಳು ಈಗ ಲಭ್ಯ ಇವೆ.ಆದರೆ ಆರಂಭಿಕ ಹಂತದ ಬಾಧಿತರಿಗೆ ಇದರ ಅಗತ್ಯತೆ ಇರುವುದನ್ನು ಕಂಡು ಅದರಂತೆ ವಿನ್ಯಾಸಗೊಳಿಸಲಾಗಿದೆ ಎಂದು ನಾಸಾ ಹೇಳಿದೆ.

    ನಾವು ಬಾಹ್ಯಾಕಾಶ ನೌಕೆಯಲ್ಲಿ ಪರಿಣತಿ ಹೊಂದಿದ್ದೇವೆ, ವೈದ್ಯಕೀಯ-ಸಾಧನ ತಯಾರಿಕೆಯಲ್ಲಿ ಅಲ್ಲ. ಆದರೂ ಅತ್ಯುತ್ತಮ ವೈದ್ಯಕೀಯ ತಂಡದ ಜತೆ ಸೇರಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (ಜೆಪಿಎಲ್) ನಿರ್ದೇಶಕ ಮೈಕೆಲ್ ವಾಟ್ಕಿನ್ಸ್ ಹೇಳಿದರು.

    ಈ ಸಾಧನವನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ. ಇದಕ್ಕಾಗಿ ನುರಿತ ವೈದ್ಯಕೀಯ ತಂಡಗಳನ್ನು ಬಳಸಿಕೊಳ್ಳಲಾಗಿದೆ. ಉನ್ನತ ಮಟ್ಟದಲ್ಲಿ ವಿಶ್ವಾಸಾರ್ಹತೆ ಕಾಪಾಡಿಕೊಂಡಿರುವ ಸಿಮ್ಯುಲೇಶನ್ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲೆಡೆ ಪಾಸ್​ಆದ ನಂತರವಷ್ಟೇ ಇದನ್ನು ಬಿಡುಗಡೆ ಮಾಡಲಾಗಿದೆ ಎಂದು ಇಕಾನ್ ಸ್ಕೂಲ್ ಆಫ್ ಮೆಡಿಸಿನ್‌ನ ಸಹಾಯಕ ಪ್ರಾಧ್ಯಾಪಕ ಮ್ಯಾಥ್ಯೂ ಲೆವಿನ್ ಹೇಳಿದರು.

    ಸಾಂಪ್ರದಾಯಿಕ ವೆಂಟಿಲೇಟರ್‌ಗಿಂತ ವಿಟಲ್ ಅತ್ಯಂತ ವೇಗ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಅತ್ಯಂತ ಕಡಿಮೆ ಭಾಗಗಳಿಂದ ತಯಾರು ಮಾಡಲಾಗಿರುವ ಕಾರಣ, ಬಹು ಬೇಗನೆ ಇದನ್ನು ಸಿದ್ಧಪಡಿಸಲು ಸಾಧ್ಯವಿದೆ. ಅಗತ್ಯಕ್ಕೆ ತಕ್ಕಂತೆ ಇದನ್ನು ರೂಪಿಸಬಹುದಾಗಿದೆ. ಇದರ ಹೊರತಾಗಿಯೂ ಸಾಮಾನ್ಯ ವೆಂಟಿಲೇಟರ್​ನಲ್ಲಿ ಇರುವ ಎಲ್ಲ ರೀತಿಯ ಸೌಲಭ್ಯಗಳೂ ಇದರಲ್ಲಿ ಇವೆ ಎಂದು ನಾಸಾ ಹೇಳಿದೆ. ಇದರ ಬಳಕೆಯಿಂದ ರೋಗಿಯು ಶೀಘ್ರದಲ್ಲಿ ವಾಸಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts