More

  ನಾರಿ ನಿನಗೊಂದು ಸ್ಯಾರಿ-ಕಾರವಾರ ಅದೃಷ್ಟಶಾಲಿಗಳ ಆಯ್ಕೆ

  ಕಾರವಾರ: ಕನ್ನಡದ ನಂ೧ ದಿನಪತ್ರಿಕೆ ವಿಜಯವಾಣಿ' ಆಯೋಜಿಸಿದ್ದನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ವಿಜೇತರ ಆಯ್ಕೆ ಪ್ರಕ್ರಿಯು ಶುಕ್ರವಾರ ನಗರದ ಸೇಂಟ್‌ ಮಿಲಾಗ್ರಿಸ್‌ ಸೌಹಾರ್ದ ಸಹಕಾರಿಯ ಸೋನಾರವಾಡದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
  ಸ್ಪರ್ಧಾರ್ಥಿಗಳು ಭರ್ತಿ ಮಾಡಿದ ಉತ್ತರದ ಚೀಟಿಗಳಲ್ಲಿ ಐದು ಚೀಟಿಗಳನ್ನು ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಯ ಮಹಿಳಾ ನಿರ್ದೇಶಕರು ಹಾಗೂ ಅಧಿಕಾರಿಗಳು ಆಯ್ಕೆ ಮಾಡಿದರು. ಆಯ್ಕೆ ಪ್ರಕ್ರಿಯೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಪಾರದರ್ಶಕವಾಗಿ ನಡೆಸಲಾಯಿತು.
  ವಿಜೇತರ ಘೋಷಣೆಗೂ ಪೂರ್ವದಲ್ಲಿ ಮಾತನಾಡಿದ ಸೇಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ನಿರ್ದೇಶಕಿ ರೋಸಲಿನ್ ಫರ್ನಾಂಡಿಸ್ ವಿಜಯವಾಣಿ' ಮಹಿಳೆಯರಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ಸಂಗತಿ ಎಂದರು. ಸೌಹಾರ್ದ ಸಹಕಾರಿಯ ಜಿಎಂ ರಾಜೇಶ್ವರಿ ರಾಯ್ಕರ್, ವಿಜಯವಾಣಿ ಪತ್ರಿಕೆಯ ಕಾಯಂ ಓದುಗಳಾಗಿದ್ದು, ಈ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದೆ. ಸೌಹಾರ್ದ ಸಹಕಾರಿಯ ಮಹಿಳಾ ಅಧಿಕಾರಿ, ಸಿಬ್ಬಂದಿಯಿಂದ ಅದೃಷ್ಟಶಾಲಿಗಳ ಆಯ್ಕೆ ನಡೆದಿರುವುದು ಖುಷಿ ಕೊಟ್ಟಿದೆ ಎಂದರು.

  ಉತ್ತಮ ಸ್ಪಂದನೆ

  ಆಗಸ್ಟ್ 1ರಿಂದ ಸೆಪ್ಟೆಂಬರ್ ೧೫ ರವರೆಗೆ ಜರುಗಿದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗುವ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿತ್ತು. ಓದುಗರು ಪ್ರತಿ ದಿನ ಉತ್ತರಗಳನ್ನು ಭರ್ತಿ ಮಾಡಿವಿಜಯವಾಣಿ’ ಕಚೇರಿಗೆ ತಲುಪಿಸಿದ್ದರು. ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ೧೦ ಸಾವಿರಕ್ಕೂ ಅಽಕ ಸ್ಪಽðಗಳು ಪಾಲ್ಗೊಂಡಿದ್ದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಿಜೇತರಿಗೆ ಕರೆ ಮಾಡಿ ಸೀರೆಗಳನ್ನು ತಲುಪಿಸಲಾಗುವುದು.
  ವಿಜೇತರಿವರು
  *ವಿಜಯಲಕ್ಷ್ಮೀ ಶೇಣ್ವಿ, ಆನಂದ ಆರ್ಕೆಡ್ ಗ್ರೀನ್ ಸ್ಟ್ರೀಟ್‌ ಕಾರವಾರ
  *ಪುಷ್ಪಾ ಜಿ.ಗುನಗಿ ಕಡವಾಡ, ಮಾರುತಿ ದೇವಸ್ಥಾನ ಹತ್ತಿರ ಕಾರವಾರ
  *ರಮಾಬಾಯಿ ಶಾನಬಾಗ ಕಾಜುಬಾಗ, ಕಾರವಾರ
  *ವನಿತಾ ನಾಯ್ಕ, ಬೊಬ್ರುವಾಡ ಅಂಕೋಲಾ
  *ಸಂಧ್ಯಾ ಪ್ರಕಾಶ ಕಾಕರಮಠ, ಅಂಕೋಲಾ,

  ಇದನ್ನೂ ಓದಿ: ನಾರಿ ನಿನಗೊಂದು ಸ್ಯಾರಿ ಕುಮಟಾ ಕ್ಷೇತ್ರದ ವಿಜೇತರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts