More

    ನಾರಿ ನಿನಗೊಂದು ಸ್ಯಾರಿ; ಲಕ್ಕಿ ಡ್ರಾ ಮೂಲಕ ಸೊರಬ ತಾಲೂಕಿನ ವಿಜೇತರ ಆಯ್ಕೆ

    ಸೊರಬ: ಮಹಿಳಾ ಓದುಗರನ್ನು ಕೇಂದ್ರೀಕರಿಸಿಕೊಳ್ಳುವುದರ ಜತೆಗೆ ಮಹಿಳೆಯರಲ್ಲಿ ಓದುವ ಆಸಕ್ತಿಯನ್ನು ಮೂಡಿಸುವಲ್ಲಿ ‘ವಿಜಯವಾಣಿ’ ಪತ್ರಿಕೆಯ ‘ನಾರಿ ನಿನಗೊಂದು ಸ್ಯಾರಿ’ ಕಾರ್ಯಕ್ರಮ ವಿಶಿಷ್ಟ ಪ್ರಯತ್ನವಾಗಿದೆ ಎಂದು ಅಕ್ಕನ ಬಳಗದ ಸದಸ್ಯೆ ಜಯಮಾಲಾ ಅಣ್ಣಾಜಿ ಗೌಡ ಹೇಳಿದರು.

    ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ನಾರಿ ನಿನಗೊಂದು ಸ್ಯಾರಿ’ ರಸಪ್ರಶ್ನೆಯ ತಾಲೂಕಿನ ವಿಜೇತರನ್ನು ಲಕ್ಕಿ ಡ್ರಾ ಮಾಲಕ ಆಯ್ಕೆ ಮಾಡಿ ಮಾತನಾಡಿದರು.
    ಕಾರ್ಯಕ್ರಮದಿಂದ ಮಹಿಳೆಯರ ಸಾಮಾನ್ಯ ಜ್ಞಾನ ಹೆಚ್ಚಾಗುವುದರ ಜತೆಗೆ ಪತ್ರಿಕೆ ಓದುವ ಹವ್ಯಾಸ ವೃದ್ಧಿಯಾಗಿ ಹಲವರು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆಂಬ ವಿಶ್ವಾಸ ಅವರಲ್ಲಿ ಬರುತ್ತದೆ. ಪತ್ರಿಕೆಯಲ್ಲಿ ಬರುವ ಹೊಸತನದ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು. ಅಲ್ಲದೆ ಎಲ್ಲರನ್ನೂ ಜಾಗೃತಿಗೊಳಿಸಿದ ‘ವಿಜಯವಾಣಿ’ಯ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.
    ರೋಟರಿ ಕ್ಲಬ್ ಅಧ್ಯಕ್ಷ ಡಾ. ನಾಗರಾಜ ಮಾತನಾಡಿ ಪತ್ರಿಕೆಯಲ್ಲಿ ಕೇವಲ ಹೆಡ್‌ಲೈನ್ ಓದುವ ಬದಲು ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ತಿಳಿದುಕೊಳ್ಳಲು ‘ವಿಜಯವಾಣಿ’ ರಸಪ್ರಶ್ನೆ ಕಾರ್ಯಕ್ರಮ ಪೂರಕವಾಗಿದೆ ಎಂದು ತಿಳಿಸಿದರು.
    ಅತಿಥಿಗಳಾದ ಉದ್ಯಮಿ ನಾಗರಾಜ ಗುತ್ತಿ, ಶ್ರೀಮತಿ, ಸುನೀತಾ, ಕೃಷ್ಣಪ್ಪ ವಿಜೇತರ ಆಯ್ಕೆಗೆ ಸಹಕರಿಸಿದರು.

    ಸೀರೆ ವಿಜೇತರು
    ಕೆ.ಎನ್.ಸರೋಜ, ಕಂತನಹಳ್ಳಿ (3960) 
    ಸಾವಿತ್ರಮ್ಮ ಶಾಂತಪ್ಪ ನಾಯ್ಕ, ಹಿರಿಯಾವಲಿ (0653) 
    ಹೇಮಾವತಿ ಮಂಜಪ್ಪ, ಕಾನುಕೇರಿ (0088) 
    ಸಾವಿತ್ರಿ ಗುಂಡಿ, ಮಳಲಗದ್ದೆ (5058) 
    ಸುನೀತಾ, ಹಿರೇಮಾಗಡಿ (2126)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts