More

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್-ಪವಿತ್ರಾ! ರಮ್ಯಾ ಸಂಬಂಧಕ್ಕೆ ಫುಲ್​ಸ್ಟಾಪ್ ಇಟ್ಟು ಹೊಸ ಜೀವನ ಆರಂಭ

    ಹೈದರಾಬಾದ್​: ಕಳೆದ ಕೆಲವು ತಿಂಗಳ ಹಿಂದೆ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪವಿತ್ರಾ ಲೋಕೇಶ್​ ಹಾಗೂ ನರೇಶ್​ ಜೋಡಿ ಇದೀಗ ಸದ್ದಿಲ್ಲದೇ ವಿವಾಹವಾಗಿದ್ದಾರೆ. ಈ ಜೋಡಿ ಹೊಸ ವರ್ಷದ ಸಂದರ್ಭದಲ್ಲಿ ವಿಡಿಯೋ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ವಿಡಿಯೋದಲ್ಲಿ ನರೇಶ್​ ಮತ್ತು ಪವಿತ್ರಾ ಪರಸ್ಪರ ಚುಂಬಿಸುವ ದೃಶ್ಯವಿತ್ತು. ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮತ್ತೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಇಬ್ಬರ ಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ.

    ಇದನ್ನೂ ಓದಿ: ತನಿಖಾ ತಂಡದ ಮುಂದೆ ಕೊನೆಗೂ ಕಳಚಿಬಿತ್ತು ಗ್ಲಾಮರಸ್​ ಕೃಷಿ ಅಧಿಕಾರಿಯ ಮುಖವಾಡ!

    ಕೆಲವೇ ಆಪ್ತರ ಸಮ್ಮುಖದಲ್ಲಿ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರ ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇಬ್ಬರ ಸಂಬಂಧ ಬಯಲಾಗಿದ್ದು ಹೇಗೆ?
    ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ ಬಳಿಕ ಇಬ್ಬರು ಸಂಬಂಧ ಹೊರ ಜಗತ್ತಿಗೆ ಬಯಲಾಯಿತು. ಇದಾದ ಬಳಿಕ ಇದಕ್ಕೆ ಪೂರಕವಾದ ಸಾಕಷ್ಟು ಘಟನೆಗಳು ನಡೆಯಿತು.

    ನರೇಶ್​ ತೆಲುಗು ಸೂಪರ್​ ಸ್ಟಾರ್​ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ತಂದೆ. ನರೇಶ್​ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್​ ವಿರುದ್ಧ ಆರೋಪ ಮಾಡಿದ್ದರು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ಜುಲೈ 2ರ ರಾತ್ರಿ ಮೈಸೂರಿನ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್​ ಮತ್ತು ಪವಿತ್ರ ಲೋಕೇಶ್​ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್​ಗೆ ಬಂದು ಜಗಳವಾಡಿದ್ದರು. ಅಲ್ಲದೆ, ಸ್ನೇಹಿತರು ಅಂತಾರೆ ಆದರೆ, ಒಂದೇ ಕೋಣೆಯಲ್ಲಿ ಇಬ್ಬರು ಒಂದು ರಾತ್ರಿ ಉಳಿದುಕೊಂಡಿದ್ದು ಏಕೆ? ಎಂದು ಪ್ರಶ್ನಿಸುವ ಮೂಲಕ ರಮ್ಯಾ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು. (ಏಜೆನ್ಸೀಸ್​)

    ಪವಿತ್ರಾ ಲೋಕೇಶ್ ಬಳಿಕ ಕೆಲ ಯೂಟ್ಯೂಬರ್ಸ್​ಗೆ ಶಾಕ್​ ಕೊಟ್ಟ ನಟ ನರೇಶ್! ಕೋರ್ಟ್​ನಿಂದ ಹೊರಬಿತ್ತು ಆದೇಶ​

    ಪವಿತ್ರಾ ಲೋಕೇಶ್​ ಮತ್ತು ನರೇಶ್​ ಇನ್ನು ಬೆಸ್ಟ್​ಫ್ರೆಂಡ್ಸ್​ ಅಲ್ಲ, ಗಂಡ-ಹೆಂಡ್ತಿ..!

    ನರೇಶ್​-ಪವಿತ್ರಾ ಲೋಕೇಶ್​ ಪ್ರಕರಣದಲ್ಲಿ ಸ್ಫೋಟಕ ಟ್ವಿಸ್ಟ್​: 3ನೇ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ ನರೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts