More

    ‘ಕಾಮ್ ಚಲೌ ಪ್ರಧಾನಿ’: ಭೂತಾನ್‌ ಪ್ರವಾಸಕ್ಕೆ ಸುಬ್ರಮಣಿಯನ್​ ಸ್ವಾಮಿ ಅಸಮಾಧಾನ.. ನಿಮಗೇಕೆ ಇಷ್ಟು ದ್ವೇಷ ಎಂದ್ರು ನೆಟಿಜನ್‌ಗಳು?

    ನವದೆಹಲಿ: ಬಿಜೆಪಿ ನಾಯಕ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಸುಬ್ರಮಣಿಯನ್ ಸ್ವಾಮಿ ಶನಿವಾರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಅವರನ್ನು ‘ಕಾಮ್ ಚಲೌ ಪ್ರಧಾನಿ’ ಎಂದು ಕರೆದಿದ್ದಾರೆ. ಲೋಕಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಮೋದಿ ಅವರು ಮಾರ್ಚ್ 22 ರಿಂದ ಭೂತಾನ್‌ಗೆ ಎರಡು ದಿನಗಳ ಭೇಟಿಗೆ ತೆರಳಿರುವುದಕ್ಕೆ ಸುಬ್ರಮಣಿಯನ್ ಸ್ವಾಮಿ ಟೀಕಿದಸಿದ್ದಾರೆ.

    ಇದನ್ನೂ ಓದಿ: ‘ಕೇಜ್ರಿವಾಲ್ ಪ್ರಮುಖ ಸಂಚುಕೋರ..10 ದಿನ ಕಸ್ಟಡಿಗೆ ನೀಡಿ’: ನ್ಯಾಯಾಲಯಕ್ಕೆ ಇಡಿ ಮನವಿ

    ಸುಬ್ರಮಣಿಯನ್ ಸ್ವಾಮಿ ಅವರು ಎಕ್ಸ್‌(ಟ್ವಿಟರ್) ಪೋಸ್ಟ್‌ನಲ್ಲಿ, ” ಚುನಾವಣೆ ಘೋಷಣೆಯಾದಾಗ ಪ್ರಧಾನಿ ವಿದೇಶಕ್ಕೆ ಹೋಗಲು ಬಯಸುವುದು ಮೂರ್ಖತನವಾಗಿದೆ. ಮೋದಿ ಪ್ರಧಾನಿ ಅಲ್ಲ, ತಾತ್ಕಾಲಿಕ ಪಿಎಂ. ಇತಹ ಕಾಮ್ ಚಲೌ ಪ್ರಧಾನಿ ವಿದೇಶಕ್ಕೆ ಹೋಗಿ ಭಾರತವನ್ನು ಪ್ರತಿನಿಧಿಸಬಾರದು ಎಂದು ಬರೆದುಕೊಂಡಿದ್ದಾರೆ.

    ಮೋದಿ ಅವರಿಗೆ ಭೂತಾನ್‌ನ ಅತ್ಯುನ್ನತ ನಾಗರಿಕ ಗೌರವ ಆರ್ಡರ್ ಆಫ್ ಡ್ರುಕ್ ಗ್ಯಾಲ್ಪೋ ನೀಡಲಾಯಿತು, ಈ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ರಾಷ್ಟ್ರದ ಮುಖ್ಯಸ್ಥರಾದರು.

    ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಪ್ರಸ್ತುತಪಡಿಸಿದ್ದಕ್ಕಾಗಿ ಭೂತಾನ್ ರಾಜನಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ಮೋದಿ ಹೇಳಿದರು. ನಾನು ಇದನ್ನು ಭಾರತದ 140 ಕೋಟಿ ಜನರಿಗೆ ಅರ್ಪಿಸುತ್ತೇನೆ. ಭಾರತ-ಭೂತಾನ್ ಸಂಬಂಧಗಳು ಬೆಳೆಯುತ್ತಲೇ ಇರುತ್ತವೆ. ಇದು ನಮ್ಮ ನಾಗರಿಕರಿಗೆ ಪ್ರಯೋಜನಕಾರಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದರು.

    ಇನ್ನು ಸ್ವಾಮಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬಳಕೆದಾರ ಡಾ ಮದನ್ ಮೋಹನ್, ಚುನಾವಣೆ ಘೋಷಣೆಗೆ ಮುನ್ನ ಭೇಟಿಯನ್ನು ಮುಂಚಿತವಾಗಿ ಯೋಜಿಸಿರಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.

    ಈ ಪ್ರದೇಶದಲ್ಲಿ ಚೀನೀ ಯೋಜನೆಗಳನ್ನು ತಡೆಯಲು ಈ ಭೇಟಿಯು ಸಂಬಂಧಿಸಿದೆ ಎಂದು ಮತ್ತೊಬ್ಬ ಬಳಕೆದಾರ ಸುಮಿಟ್ವಾ ಹೇಳಿದ್ದಾರೆ.

    ಮತ್ತೊಬ್ಬ ಬಳಕೆದಾರ ಶುಭಂ ದ್ವಿವೇದಿ “ಯಾಕೆ ಸ್ವಾಮಿ ಪ್ರಧಾನಿಯನ್ನು ಇಷ್ಟು ದ್ವೇಷಿಸುತ್ತಿದ್ದಾರೆ” ಎಂದು ಕೇಳಿದ್ದಾರೆ.

    ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು ಇದು ಮೊದಲಲ್ಲ. ಮೋದಿ ಮತ್ತು ಅವರ ಸರ್ಕಾರವನ್ನು ನಿಂದಿಸುತ್ತಿರುತ್ತಾರೆ.

    ‘ನಿತ್ಯ ಹಾಗೆ ಮಾಡುವವನನ್ನೇ ಮದುವೆಯಾಗ್ತೇನೆ’.. ಹಿಟ್-2 ನಾಯಕಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts