More

    ಟ್ರಂಪ್​ ಟ್ವಿಟ್ವರ್​ನಿಂದ ಔಟ್​; ಈಗ ಮೋದಿಯೇ ನಂಬರ್​ ಒನ್​

    ನವದೆಹಲಿ: ಅಮೆರಿಕದ ಸಂಸತ್​ ಭವನದ ಮೇಲೆ ಡೊನಾಲ್ಡ್​ ಟ್ರಂಪ್​ ಅವರ ಅನುಯಾಯಿಗಳು ಮುತ್ತಿಗೆ ಹಾಕಿರುವ ಬೆನ್ನಲ್ಲೇ ಟ್ರಂಪ್​ ಅವರ ಟ್ವಿಟ್ಟರ್​ ಖಾತೆಯನ್ನು ಟ್ವಿಟ್ಟರ್​ ಶಾಶ್ವತವಾಗಿ ತೆಗೆದುಹಾಕಿದೆ. ಟ್ರಂಪ್​ ಎಕ್ಸಿಟ್​ ಆಗುತ್ತಿದ್ದಂತೆಯೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರು, ಟ್ವಿಟ್ಟರ್​ನಲ್ಲಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸಕ್ರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.

    ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

    ಟ್ರಂಪ್​ ಅವರು ಟ್ವಿಟ್ಟರ್​ನಲ್ಲಿ 88.7 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದರು. ನರೇಂದ್ರ ಮೋದಿಯವರು 64.7 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. ಇದೀಗ ಟ್ರಂಪ್​ ಖಾತೆಯನ್ನು ಟ್ವಿಟ್ಟರ್​ನಿಂದ ತೆಗೆದುಹಾಕಿರುವ ಕಾರಣದಿಂದಾಗಿ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಸಕ್ರಿಯ ರಾಜಕಾರಣಿಯಲ್ಲಿ ಮೋದಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಅದಾಗ್ಯೂ ಅಮೆರಿಕದ ಮಾಜಿ ಅಧ್ಯಕ್ಷ ಬರಕ್​ ಒಬಾಮಾ ಅವರು 127.9 ಮಿಲಿಯನ್​ ಫಾಲೋವರ್ಸ್​ನೊಂದಿಗೆ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲಲ್ಲಿದ್ದಾರೆ. ಈಗಿನ ಅಧ್ಯಕ್ಷ ಜೋ ಬೈಡೆನ್​ ಅವರಿಗೆ 23.3 ಮಿಲಿಯನ್​ ಫಾಲೋವರ್ಸ್​ ಇದ್ದಾರೆ.

    ಇದನ್ನೂ ಓದಿ: ಹೆಚ್ಚಿನ ಅಂಕ ಪಡೆಯಲು ವಿದ್ಯಾರ್ಥಿ, ಶಿಕ್ಷಕಿಗೆ ಮಾಡಿದ ಬ್ಲ್ಯಾಕ್‌ಮೇಲ್ ಏನು ಗೊತ್ತಾ..?

    ಭಾರತದಲ್ಲಿ ಮೋದಿಯವರ ನಂತರ ಗೃಹ ಸಚಿವ ಅಮಿತ್​ ಶಾ ಅವರು 24.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದರೆ, ದೆಹಲಿ ಮುಖ್ಯಮಂತ್ರಿ ಮತ್ತು ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರು 21.2 ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ. (ಏಜೆನ್ಸೀಸ್​)

    ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಕಾರು: ಓರ್ವ ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

    ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts