More

    ಗ್ರಾಮೀಣರ ಬದುಕಿಗೆ ನರೇಗಾ ಯೋಜನೆ ಸಹಕಾರಿ

    ಶಿರಹಟ್ಟಿ: ‘ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ’ ಅಭಿಯಾನದಡಿ ಪ್ರತಿ ಮನೆಗೆ ನರೇಗಾ ಯೋಜನೆಯ ಮಾಹಿತಿ ತಲುಪಿಸುವ ನಿಟ್ಟಿನಲ್ಲಿ ಪ್ರಚಾರ ವಾಹಿನಿ ರಥಯಾತ್ರೆ ಆರಂಭಿಸಿದ್ದು, ಗ್ರಾಮೀಣ ಪ್ರದೇಶದ ಜನತೆ ನರೇಗಾ ಯೋಜನೆ ಪ್ರಯೋಜನ ಪಡೆಯುವ ಮೂಲಕ ಕೌಟುಂಬಿಕ ಸುಸ್ಥಿರತೆ ಹೊಂದಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

    ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಮನೆಗೆ ನರೇಗಾ ಯೋಜನೆ ಮಾಹಿತಿ ನೀಡುವ ಪ್ರಚಾರ ವಾಹಿನಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ಶಿರಹಟ್ಟಿ, ಲಕ್ಷೆ್ಮೕಶ್ವರ ಬರಪೀಡಿತ ತಾಲೂಕುಗಳೆಂದು ಘೊಷಣೆ ಮಾಡಿದ್ದರಿಂದ ಮಳೆ, ಬೆಳೆ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬದ ಯಾರೊಬ್ಬರೂ ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಪ್ರತಿಯೊಬ್ಬರಿಗೂ ನರೇಗಾ ಯೋಜನೆಯಡಿ ಉದ್ಯೋಗ ನೀಡಲು ಸರ್ಕಾರ ನಿರ್ದೇಶನ ನೀಡಿದೆ. ಅದಕ್ಕಾಗಿ ನರೇಗಾ ಯೋಜನೆಗೆ ಸಂಬಂಧಿಸಿದ ಮಾಹಿತಿಯ ಭಿತ್ತಿಪತ್ರಗಳನ್ನು ಪ್ರತಿ ಹಳ್ಳಿಯಲ್ಲಿ ಸಂಚರಿಸಿ ಒಂದು ತಿಂಗಳು ಪ್ರಚಾರ ಮಾಡಲಾಗುತ್ತದೆ ಎಂದರು.

    ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ಬರಗಾಲ ಘೊಷಣೆ ಹಿನ್ನೆಲೆಯಲ್ಲಿ ಪ್ರತಿ ಕುಟುಂಬಕ್ಕೆ ಹೆಚ್ಚುವರಿಯಾಗಿ 150 ದಿನಗಳ ಕೆಲಸ ನೀಡುವ ಜತೆಗೆ ಗಂಡು ಮತ್ತು ಹೆಣ್ಣಿಗೆ 316 ರೂ. ಸಮಾನ ಕೂಲಿ ನೀಡಲಾಗುತ್ತದೆ. ರೈತರಿಗೆ ನೆರವು ನೀಡಬಲ್ಲ ಕಾಮಗಾರಿಗಳನ್ನು ರೂಪಿಸಲು ಸೂಚನೆ ನೀಡಲಾಗಿದೆ. ಯೋಜನೆ ಅನುಷ್ಠಾನಕ್ಕೆ ಕಾರ್ವಿುಕ ಆಯವ್ಯಯ ರೂಪಿಸಲಾಗುತ್ತಿದೆ. ನರೇಗಾ ಮೂಲಕ ಗ್ರಾಮೀಣ ಪ್ರದೇಶದ ಕುಟುಂಬಗಳ ಜೀವನೋಪಾಯದ ಸುಸ್ಥಿರತೆ ಕಾಪಾಡುವ ಗುರಿ ಹೊಂದಲಾಗಿದೆ ಎಂದರು.

    ತಹಸೀಲ್ದಾರ್ ಅನಿಲ ಬಡಿಗೇರ, ನರೇಗಾ ಸಹಾಯಕ ನಿರ್ದೇಶಕ ಶಿವಕುಮಾರ ವಾಲಿ, ಐಇಸಿ ಸಂಯೋಜಕ ಮಂಜುನಾಥಸ್ವಾಮಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts