More

    ದುಡಿಯುವ ಕೈಗಳಿಗೆ ನರೇಗಾ ವರದಾನ – ಮತದಾನ ಮಹತ್ವ ಕುರಿತು ಮಾಹಿತಿ

    ಇಂಡಿ: ದುಡಿಯುವ ಕೈಗಳಿಗೆ ಕೆಲಸ ಬೇರೆಡೆ ಗುಳೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ ಎಂದು ತಾ.ಪಂ. ಐಇಸಿ ಸಂಯೋಜಕಿ ಡಾ. ಜ್ಞಾನಜ್ಯೋತಿ ಚಾಂದಕವಠೆ ಹೇಳಿದರು. ತಾಲೂಕಿನ ಲಾಳಸಂಗಿ ಗ್ರಾಪಂ ವ್ಯಾಪ್ತಿಯಲ್ಲಿನ ಶಿವಪುರ ಗ್ರಾಮದ ಸರ್ಕಾರಿ ಹಳ್ಳದಲ್ಲಿ ನರೇಗಾ ಕಾರ್ಮಿಕರು ಹೂಳೆತ್ತುವ ಸಂದರ್ಭದಲ್ಲಿ ಬುಧವಾರ ಕಾರ್ಮಿಕರಿಗೆ ಮತದಾನ ಮಹತ್ವದ ಕುರಿತು ಮಾಹಿತಿ ನೀಡಿದರು.

    ಕಾರ್ಮಿಕರಿಗೆ ಏ. 1ರಿಂದ 309 ರೂ. ಗಳಿಂದ 316 ರೂ. ಗಳಿಗೆ ಕೂಲಿ ದರ ಹೆಚ್ಚಿಸಲಾಗಿದೆ. ಆದುದರಿಂದ ಪ್ರತಿಯೊಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷಕ್ಕೆ 100 ದಿನಗಳ ಕೆಲಸ ನೀಡಲಾಗುತ್ತಿದೆ. ಸದರಿ ಯೋಜನೆಯಡಿ ಕೃಷಿಹೊಂಡ, ದನದ ಶೆಡ್, ಕುರಿ, ಮೇಕೆ ಸಾಕಾಣಿಕೆಗೆ ಶೆಡ್ ನಿರ್ಮಾಣ ಸೇರಿ ಹಲವಾರು ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅವಕಾಶವಿದೆ ಎಂದರು.

    ಇದೇ ವೇಳೆ ಚುನಾವಣೆ ಹಿನ್ನೆಲೆಯಲ್ಲಿ ಮಾನವ ಸರಪಳಿ ರಚಿಸಿ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಗ್ರಾಪಂ ಪಿಡಿಒ ಪ್ರಭಾವತಿ ಕುಂಬಾರ ಮಾತನಾಡಿದರು.
    ಗ್ರಾಪಂ ಕಾಯಕಮಿತ್ರ ಶ್ರೀದೇವಿ ಕಷಕಿ, ತುಕಾರಾಮ್ ಮರ್ನುರ, ಮಹಾದೇವ ಸೊನ್ನ ಸೇರಿ 26 ಜನ ನರೇಗಾ ಕಾರ್ಮಿಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts