More

    ಪ್ರಜಾಪ್ರಭುತ್ವದ ದೊಡಣ್ಣ ನಮ್ಮ ಭಾರತ : ಕಡ್ಡಾಯ ಮತದಾನ ಮಾಡಲು ರವಿ. ಎ.ಎನ್ ಕರೆ

    ರೋಣ : ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರಗಳಲ್ಲಿ ನಮ್ಮ ದೇಶ ಅಗ್ರ ಸ್ಥಾನ ಪಡೆದಿದೆ. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಯಾಗಿಸಲು ನಿಮ್ಮೆಲ್ಲರ ಸಹಕಾರ ಅಗತ್ಯ ಹಾಗಾಗಿ ತಾವೆಲ್ಲರೂ ತಪ್ಪದೇ ಕಡ್ಡಾಯವಾಗಿ ಮಾತದಾನ ಮಾಡಿ, ಹಾಗೂ ಮಾಡಿಸಿ ಅಂತಾ ರೋಣ ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎ.ಎನ್.ರವಿ ಕರೆ ನೀಡಿದರು..

    ರೋಣ ತಾಲೂಕಿನ ಹೊಳೆಮಣ್ಣೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಡೆದ ಸಮುದಾಯ ಕಾಮಗಾರಿಯ ಬದು ನಿರ್ಮಾಣ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಭೇಟಿ ನೀಡಿದ ಅವರು ಮಾತನಾಡಿ ಮೇ 10 ರಂದು ನಮ್ಮ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ ಈ ಸಂದರ್ಭದಲ್ಲಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ, ನಿಮ್ಮ ಮಕ್ಕಳ ಭವಿಷ್ಯವನ್ನು ದೃಷ್ಟಿಕೋನ ದಲ್ಲಿ ಇಟ್ಟುಕೊಂಡು ಮತದಾನ ಮಾಡಿ ಅಂದರೆ ಮಾತ್ರ ನಿಮ್ಮ ಮಕ್ಕಳ ಜೀವನ ಮುಂದಿನ ದಿನಗಳಲ್ಲಿ ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದರು

    *ಚುನಾವಣಾ ಆಯೋಗ ಯಾಕೆ 100% ಮತದಾನ ಮಾಡಿಸಲು ಯಾಕೆ ಕಷ್ಟ ಪಡುತ್ತದೆ ಗೊತ್ತಾ?*

    ಭಾರತದಲ್ಲಿ ಚುನಾವಣಾ ಆಯೋಗವು ಯಾರ ಹಂಗಿಲ್ಲದೇ ಯಾರ ಆಡಳಿತಕ್ಕೆ ಒಳಪಡದೇ ಕೆಲಸ ಮಾಡುತ್ತದೆ ಅದಕ್ಕೆ ಕಾರಣ ಚುನಾವಣೆಯಲ್ಲಿ ಯಾರ ಹಸ್ತಕ್ಷೇಪ ಇರಬಾರದು ಅಂದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಹೆಚ್ಚಾಗುತ್ತದೆ. ಮತ್ತು ಜನಪರ ಸರ್ಕಾರ ಆಡಳಿತಕ್ಕೆ ಬರಲು ಸಾದ್ಯ ಅಂತಾ ಹೇಳಿದ ಅವರು ಈ ಚುನಾವಣೆ ಯಲ್ಲಿ ಎಂಭತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ದಿವ್ಯಾಂಗ ವ್ಯಕ್ತಿಗಳಿಗೆ

    ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗವು ಅವಕಾಶ ಮಾಡಿಕೊಟ್ಟಿದೆ. ಚುನಾವಣಾ ಆಯೋಗ ಕಲ್ಪಿಸಿರುವ ಮನೆಯಲ್ಲಿಯೇ ಮತದಾನ ಮಾಡುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು. 

    *ಮತದಾನದ ಜಾತ್ರೆಗೆ ಎಲ್ಲರನ್ನೂ ಸೇರಿಸಿ*

     ನಿಮ್ಮ ಗ್ರಾಮದಲ್ಲಿ ಜಾತ್ರ ನಡೆದರೇ ಹೇಗೆ ಜನರನ್ನು ಕರಿಸಿಕೊಂಡು ಸಿಹಿಯಾದ ಅಡುಗೆ ಮಾಡಿ ಹೇಗೆ ಜಾತ್ರೆ ಮಾಡುತ್ತಿರೊ ಹಾಗೆಯ ನಿಮ್ಮ ಅಕ್ಕ ಪಕ್ಕದ ಮನೆಯವರು ನಿಮ್ಮ ಮನೆಯವರು ದುಡಿಯಲು ಅಥವಾ ಗುಳೆ ಹೋಗಿದ್ದರೆ ಅವರನ್ನು ಕರೆಸಿ ಮತದಾನ ಮಾಡಿಸಿ ಅಂದಾಗ ಮಾತ್ರ 100% ಮತದಾನ ಆಗಲು ಸಾಧ್ಯ ಯಾವಾಗ ಪ್ರಜಾಪ್ರಭುತ್ವದಲ್ಲಿ ಶೇ 100% ಮತದಾನ ಅಗುತ್ತದೆಯೊ ಅವಾಗ ಯೋಗ್ಯ ವ್ಯಕ್ತಿಯ ಆಯ್ಕೆ ಆಗುತ್ತದೆ ಅಂದರು

    *ನರೇಗಾ ಯೋಜನೆಯಿಂದಾಗಿ ನಮ್ಮ ಜನ ಗುಳೆ ಹೋಗುವದು ತಪ್ಪಿದೇ*

    ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣ ಹಿಡುವಳಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಅವರು ಬಹುತೇಕ ಮಳೆ ಆಶ್ರಿತ ಕೃಷಿಯನ್ನು ಅವಲಂಬಿಸಿದ್ದಾರೆ. ಸಕಾಲಕ್ಕೆ ಮಳೆ ಆಗದ ಹಿನ್ನೆಲೆ ಇಲ್ಲಿ ಕೆಲಸ ಇಲ್ಲದೇ ಗೋವಾ,ಮಂಗಳೂರು,ಬೆಂಗಳೂರು ಸೇರಿದಂತೆ ಅನೇಕ ನಗರಗಳಿಗೆ ದುಡಿಯಲು ಗುಳೆ ಹೋಗುತ್ತಿದ್ದರು. ಅದರೆ ಇತ್ತಿಚಿನ ದಿನಗಳಲ್ಲಿ ನರೇಗಾ ಯೋಜನೆಯ ಮಾಹಿತಿ ಸಿಕ್ಕ ಹಿನ್ನಲೆ ಅಲ್ಲಿ ಕೊಡುವ ಕೂಲಿಯನ್ನು ನರೇಗಾ ಯೋಜನೆಯು ನಿಮ್ಮ ಗ್ರಾಮದಲ್ಲಿ ಕೊಡವದರಿಂದ ಇಲ್ಲೆ ನೀವು ದುಡಿಯಲು ಬರುತ್ತಿರಿ. ಮುಂಗಾರು ಮಳೆ ಆರಂಭವಾಗುವ ಮುನ್ನ ಆದಷ್ಟು ಹೆಚ್ಚು ಕೆಲಸ ಕೊಡುತೇವೆ ಎಂದು ಹೇಳಿದರು..

    ಈ ಸಂದರ್ಭದಲ್ಲಿ ಹೊಳೆ ಅಲೂರು ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ, ತಾಂತ್ರಿಕ ಸಂಯೋಜಕರಾದ ಪ್ರವೀಣ ಸೂಡಿ, ಐಇಸಿ ಸಂಯೋಜಕರಾದ ಮಂಜುನಾಥ, ಬಿ ಎಫ್ ಟಿ ಈರಣ್ಣ ದಳವಾಯಿ ಸೇರಿದಂತೆ ಹೊಳೆ ಅಲೂರು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts