More

    ಮುಂಬೈ, ಬಿಹಾರ್​ ಪೊಲೀಸ್​, ಇ.ಡಿ, ಸಿಬಿಐ ಆಯ್ತು; ಈಗ ಸುಶಾಂತ್​ ಕೇಸ್ ತನಿಖೆಗೆ ಮಾದಕ ವಸ್ತು ನಿಗ್ರಹ ದಳ…!

    ನವದೆಹಲಿ: ಬಹುಶಃ ದೇಶದ ಎಲ್ಲ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ತನಿಖೆಗೊಳಗಾತ್ತಿರುವ ಶ್ರೇಯ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್ ಸಾವಿನ ಪ್ರಕರಣದ್ದಾಗಲಿದೆಯೇನೋ?

    ಸುಶಾಂತ್​ ಸಾವಿನ ಪ್ರಕರಣವನ್ನು ಆರಂಭದಲ್ಲಿ ಮುಂಬೈ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಸುಶಾಂತ್​ ತಂದೆ ಕೆ.ಕೆ. ಸಿಂಗ್​ ಪಟನಾದಲ್ಲಿ ಕೇಸ್​ ದಾಖಲಿಸಿದ ಬಳಿಕ ಬಿಹಾರ್​ ಪೊಲೀಸರು ಇದರ ತನಿಖೆಗಿಳಿದರು.

    ಇದನ್ನೂ ಓದಿ; ‘ಒಂದಲ್ಲ…8 ಹಾರ್ಡ್​ ಡ್ರೈವ್​ಗಳು…!’; ಇನ್ನೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಸುಶಾಂತ್ ಸ್ನೇಹಿತ

    ಸುಶಾಂತ್​ಗೆ ಸೇರಿದ 15 ಕೋಟಿ ರೂ.ಗೂ ಹೆಚ್ಚು ಮೊತ್ತದ ಹಣ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ಅಕ್ರಮವಾಗಿ ಬಳಸಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ವಿರುದ್ಧ ಕೇಸ್​ ದಾಖಲಿಸಿದರು.

    ನಂತರ ಭಾರಿ ಒತ್ತಡ ಕೇಳಿ ಬಂದ ಕಾರಣ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಪರಿಣಾಮ, ಸದ್ಯ ಕೇಂದ್ರೀಯ ತನಿಖಾ ಸಂಸ್ಥೆ ಈ ಪ್ರಕರಣದ ತನಿಖೆ ನಡೆಸುತ್ತಿದೆ.

    ಇದನ್ನೂ ಓದಿ; ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…! 

    ಸುಶಾಂತ್​ ಹಾಗೂ ರಿಯಾಗೆ ಮಾದಕ ವಸ್ತು ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೊರೆತ ಕಾರಣ, ಇದನ್ನು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಗಮನಕ್ಕೆ ತರಲಾಗಿದೆ.

    ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾಗ ಸುಶಾಂತ್​ ಗಾಂಜಾ ಸುರುಳಿಗಳನ್ನು ಸುತ್ತಿಡುತ್ತಿದೆ ಎಂದು ಮನೆಗೆಲಸದ ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದ. ಜತೆಗೆ, ಸುಶಾಂತ್​ಗೆ ನಾಲ್ಕು ಹನಿಗಳನ್ನು ಚಹಾದಲ್ಲಿ ಸೇರಿಸಿ ನೀಡು ಎಂದು ರಿಯಾ ಹೇಳಿದ ಹೇಳಿಕೆ ಕೂಡ ವೈರಲ್​ ಆಗಿದೆ. ಇದು ಮಾದಕವಸ್ತುವೇ ಆಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
    ಹೀಗಾಗಿ ರಿಯಾ ಹಾಗೂ ಇತರರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವ ಎನ್​ಸಿಬಿ ತನಿಖೆ ಮುಂದುವರಿಸಿದಿದೆ.

    ನಟ ಸುಶಾಂತ್​ ಸಿಂಗ್​ ರಜಪೂತ್​ ತಿಂಗಳಿಗೆಷ್ಟು ಖರ್ಚು ಮಾಡುತ್ತಿದ್ದರು? ಹಳೇ ಮ್ಯಾನೇಜರ್​ ನೀಡಿದ್ದಾರೆ ಪೊಲೀಸರಿಗೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts