More

    ನರಗುಂದ: ಪುರಸಭೆಯ 2023-24ನೇ ಸಾಲಿನ 4.51 ಲಕ್ಷ ರೂ. ನೀರಿಕ್ಷಿತ ಉಳಿತಾಯ ಆಯವ್ಯಯ

    ನರಗುಂದ: ಪುರಸಭೆಯ ಸನ್ 2023-24ನೇ ಸಾಲಿನ 4.51 ಲಕ್ಷ ರೂಪಾಯಿ ನೀರಿಕ್ಷಿತ ಉಳಿತಾಯ ಆಯವ್ಯಯವನ್ನು ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ ಗುರುವಾರ ಮಂಡಿಸಿದರು. ಪುರಸಭೆಗೆ ವಿವಿಧ ಮೂಲಗಳಿಂದ ಬರುವ ಒಟ್ಟು,1487.54 ಲಕ್ಷ ರೂಪಾಯಿ ಆದಾಯದಲ್ಲಿ 1483.03 ಲಕ್ಷ ರೂಪಾಯಿ ವೆಚ್ಚ ಅಳವಡಿಸಿಕೊಂಡು 4.51 ಲಕ್ಷ ರೂಪಾಯಿ ಮೊತ್ತದ ನಿರೀಕ್ಷಿತ ಉಳಿತಾಯ ಬಜೆಟ್ ಅನ್ನು ಮಂಡಿಸಲಾಯಿತು.

    ಪುರಸಭೆಗೆ ವಿವಿಧ ಸಂಪನ್ಮೂಲ, ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಯೋಜನೆ, ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನ ಕ್ರೋಡಿಕರಿಸಿ ಪಟ್ಟಣದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪಗಳ ನಿರ್ವಹಣೆ, ಪುರಸಭೆ ನೂತನ ಕಟ್ಟಡಕ್ಕೆ 1ಕೋಟಿ ರೂಪಾಯಿ ಅನುದಾನ ನೀಡುವುದು ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದರು.

    ಆಸ್ತಿ ತೆರಿಗೆಯಿಂದ 118 ಲಕ್ಷ, ಆಸ್ತಿ ತೆರಿಗೆ ದಂಡ 25ಲಕ್ಷ, ಮಳಿಗೆಗಳ ಬಾಡಿಗೆ 4.25 ಲಕ್ಷ, ನೀರಿನ ಕರ ವಸೂಲಾತಿ 70.56 ಲಕ್ಷ, ರಸ್ತೆ ಅಗೆತ, ನಳಗಳ ಜೋಡಣೆಯಿಂದ 4ಲಕ್ಷ, ಖಾತೆ ಬದಲಾವಣೆ 8ಲಕ್ಷ, ಉತಾರಗಳ ಶುಲ್ಕ, ಸಂತೆಕರ 5ಲಕ್ಷ, ಬ್ಯಾಂಕ್‍ನಲ್ಲಿರುವ ಪುರಸಭೆ ಠೇವಣೆ ಹಣಕ್ಕೆ ದೊರೆಯುವ 12 ಲಕ್ಷ ರೂಪಾಯಿ ಬಡ್ಡಿ ಸೇರಿ ವಿವಿಧ ಸರ್ಕಾರಿ ಯೋಜನೆಗಳಿಂದ ಒಟ್ಟು,1487.54 ಲಕ್ಷ ರೂಪಾಯಿ ನೀರಿಕ್ಷಿತ ಆದಾಯ ಮಂಡಿಸಲಾಯಿತು.

    ಪುರಸಭೆ ವಿರೋಧ ಪಕ್ಷದ ನಾಯಕ ಯಲ್ಲಪ್ಪಗೌಡ ನಾಯ್ಕರ ಮಾತನಾಡಿ, ನರಗುಂದದ ನಿರಂತರ ಕುಡಿಯುವ ನೀರಿನ ಯೋಜನೆ ಕೋಡಿಕೊಪ್ಪ ಹುಜ್ಜೀರಪ್ಪಜ್ಜನ ಜಾತ್ರೆಯಂತಾಗಿದೆ. ಬಹುತೇಕ ಜನರಿಗೆ ಇದುವರೆಗೆ ಸಮರ್ಪಕ ನೀರು ಪೊರೈಕೆ ಮಾಡಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. 2420 ಮನೆಗಳಿಗೆ ಮೀಟರ್ ಅಳವಡಿಸಿಲ್ಲ. ಪಟ್ಟಣದ ಏಲ್ಲೆಂದರಲ್ಲಿ ನೀರು ಸೋರಿಕೆಯಾಗುತ್ತಿದೆ. ಹೀಗಿದ್ದರೂ ಸಾರ್ವಜನಿಕರಿಂದ ನೀರಿನ ಕರ ವಸುಲಾತಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಮಾ.31ರೊಳಗೆ ವಾಣಿಜ್ಯ ಮಳಿಗೆಗಳ ಬಾಕಿ ಬಿಲ್ ಪಾವತಿಸಿಕೊಳ್ಳಬೇಕು. ಹಿಂದೂ ರುದ್ರಭೂಮಿ, ದಂಡಾಪೂರ ಬಡಾವಣೆಯಲ್ಲಿರುವ ಎರಡು ಬೋರವೆಲ್ ರಿಪೇರಿ ಮಾಡಬೇಕು. ಪ್ರತಿಯೊಂದು ಮನೆಗಳಿಗೆ ಮೀಟರ್ ಅಳವಡಿಸಿ, ಸಮರ್ಪಕ ನೀರು ಪೊರೈಕೆ ಮಾಡಿದ ನಂತರ ನೀರಿನ ಕರ ಪಾವತಿಸಿಕೊಳ್ಳಬೇಕು. ಇಲ್ಲದಿದ್ದರೆ ಮೈಕ್‍ನಲ್ಲಿ ಪಟ್ಟಣದಾಧ್ಯಂತ ನಾನೇ ಡಂಗುರ ಹಾಕಿಸಿ, ಯಾರೂ ಬಿಲ್ ಪಾವತಿ ಮಾಡದಂತೆ ಪ್ರಚಾರ ಕೈಗೊಳ್ಳುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಸರ್ಕಾರದ ವಿವಿಧ ಸ್ಕೀಂ, ಯೋಜನೆಗಳ ಮಾಹಿತಿ ಪ್ರತಿಗಳನ್ನು ಜನಪ್ರತಿನಿಧಿಗಳಿಗೆ ಕೊಡದಿದ್ದರೆ ಜನರಿಂದ ಆಯ್ಕೆಯಾದ ನಾವೆಲ್ಲರೂ ಕೇವಲ ಚಹಾ,ಕಾಫಿ ಕುಡಿಯಲು ಬಂದಂತಾಗುತ್ತದೆ. ಅರ್ಹ ಫಲಾನುಭವಿಗಳ ಆಯ್ಕೆ ಮಾಡಲು ಸಾಕಷ್ಟು ಸಮಸ್ಯೆ ಉಂಟಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಪುರಸಭೆ ಸದಸ್ಯೆ ಜಿ.ಬಿ.ಬಿದರಗಡ್ಡಿ, ಕವಿತಾ ಅರ್ಭಣದ ಮಾತನಾಡಿ, ಕಸದ ವಾಹನಗಳು ಮಧ್ಯಾಹ್ನ 1ಗಂಟೆಗೆ ಬರುತ್ತಿರುವುದರಿಂದ ನಗರದ ಸ್ವಚ್ಛತೆಗೆ ಹಿನ್ನೆಡೆಯಾಗುತ್ತಿದೆ. ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಪುರಸಭೆ ಪೌರ ಕಾರ್ಮಿಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗೆ ಮನವಿ ಮಾಡಿದರು. ಬಜೆಟ್ ಸಾಮಾನ್ಯ ಗಾಣಸಿರಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾತಿ, ವೈಯಕ್ತಿಕ ಸೌಲಭ್ಯ, ಹೊಸ ಬಡಾವಣೆಗಳ ವಿನ್ಯಾಸ, ತೆರಿಗೆ ಪರಿಷ್ಕರಣೆ ಸೇರಿದಂತೆ ವಿವಿಧ 12 ವಿಷಯಗಳಿಗೆ ಅನುಮೋದನೆ ನೀಡುವಂತೆ ಅಧ್ಯಕ್ಷರ ಪರವಾಗಿ ಪುರಸಭೆ ಮುಖ್ಯಾಧಿಕಾರಿ ಅಮಿತ್ ತಾರದಾಳೆ ಅನುಮೋದನೆ ಪಡೆದುಕೊಂಡರು.

    ಪುರಸಭೆ ಉಪಾಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಎಸ್.ಎಸ್.ಕುಷ್ಟಗಿ, ಸಿ.ಕೆ.ಪಾಟೀಲ, ಆರ್.ಹೆಚ್.ತಹಶೀಲ್ದಾರ, ಪ್ರಶಾಂತ ಜೋಶಿ, ಭಾವನಾ ಪಾಟೀಲ, ಮಹೇಶ ಬೋಳಶೆಟ್ಟಿ, ರಾಚನಗೌಡ್ರ ಪಾಟೀಲ, ಪ್ರಕಾಶ ಹಾದಿಮನಿ, ದೇವಣ್ಣ ಕಲಾಲ, ರಿಯಾಜ್ ಕೊಣ್ಣೂರ, ಕಾಶವ್ವ ಮಳಗಿ, ಹುಸೇನಸಾಬ ಗೋಟುರ, ರೇಣವ್ವ ಕಲಾರಿ, ಕವಿತಾ ಅರ್ಬಾಣದ, ಎನ್.ಪಿ.ವಡ್ಡಿಗೇರಿ, ಎಫ್.ಬಿ.ಸವದತ್ತಿ, ಡಿ.ಎಫ್.ಕಟ್ಟಿಮನಿ, ಶಂಕ್ರಪ್ಪ ಹೂಗಾರ, ಎಸ್.ಎಸ್.ಬ್ಯಾಳಿ, ಪುರಸಭೆಯ ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts