More

    VIDEO| ಮಳೆ ಸುರಿಯುತ್ತಿದ್ದರೂ ನಂದಿಬೆಟ್ಟಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

    ಚಿಕ್ಕಬಳ್ಳಾಪುರ: ಇಂದು ಬೆಳ್ಳಂಬೆಳಗ್ಗೆ ಮಳೆ ನಡುವೆಯೂ ಪ್ರವಾಸಿತಾಣ ನಂದಿಬೆಟ್ಟಕ್ಕೆ ಸಾವಿರಾರು ಜನ ಲಗ್ಗೆ ಇಟ್ಟಿದ್ದಾರೆ.

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ರಾತ್ರಿ ಮತ್ತು ಭಾನುವಾರ ನಸುಕಿನಲ್ಲಿ ಧಾರಾಕಾರ ಮಳೆಯಾಗಿದೆ. ಮೋಡಮುಸುಕಿದ ವಾತಾವರಣ, ಜಿಟಿಜಿಟಿ ಮಳೆಯ ಸಿಂಚನ ಇದ್ದರೂ ಲೆಕ್ಕಿಸದೆ ವಿಕೇಂಡ್ ಹಿನ್ನೆಲೆ ಸಹಸ್ರಾರು ಸಂಖ್ಯೆಯ ಪ್ರವಾಸಿಗರು ಕಾರು-ಬೈಕ್​ಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಮುಂಜಾನೆಯೇ ಭೇಟಿ ನೀಡಿದ್ದಾರೆ. ನಂದಿಗಿರಿಧಾಮದ ಮುಖ್ಯದ್ವಾರದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್​ ಉಂಟಾಗಿತ್ತು.

    ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸುಮಾರು 6 ತಿಂಗಳ ಕಾಲ ನಂದಿಬೆಟ್ಟ ಬಂದ್​ ಆಗಿತ್ತು. ಇತ್ತೀಚಿಗಷ್ಟೇ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಕಳೆದ ಭಾನುವಾರ ನಂದಿಗಿರಿಧಾಮ ಪ್ರವೇಶಕ್ಕೆ ಬೆಳಗ್ಗೆ 8ಕ್ಕೆ ಸಮಯ ನಿಗದಿ ಮಾಡಲಾಗಿತ್ತು.

    ಇದೀಗ ಈ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದಲೇ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. 2 ತಾಸು ಮುಂಚಿತವಾಗಿಯೇ ಪ್ರವೇಶಕ್ಕೆ ಅವಕಾಶ ನೀಡಿದ್ದರೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಹುತೇಕ ಪ್ರವಾರಿಗಳು ಬೆಂಗಳೂರಿಗರೇ ಆಗಿದ್ದಾರೆ.

    ಭೀಕರ ಅಪಘಾತ: ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು, ತಲೆ-ದೇಹ ಇಬ್ಭಾಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts