More

    ಇಂದಿನಿಂದ ನಂದಿಬೆಟ್ಟ ಅನ್‌ಲಾಕ್, ಆದ್ರೆ ಪ್ರವಾಸಿಗರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ

    ಚಿಕ್ಕಬಳ್ಳಾಪುರ: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಬರೋಬ್ಬರಿ ಐದೂವರೆ ತಿಂಗಳಿಂದ ಕಂಪ್ಲೀಟ್​ ಲಾಕ್‌ ಆಗಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮ ಇಂದಿನಿಂದ (ಸೆ.7) ಅನ್​ಲಾಕ್ ಆಗಿದೆ.

    ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಮಾ.14ರಿಂದಲೇ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶಿಸಿತ್ತು. ಹೀಗಾಗಿ ಸರಿಸುಮಾರು ಐದೂವರೆ ತಿಂಗಳ ಬಳಿಕ ನಂದಿಬೆಟ್ಟ ಪ್ರವೇಶಿಸಲು ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ನಂದಿಗಿರಿಧಾಮದ ಚೆಕ್‌ಪೋಸ್ಟ್ ತೆಗೆದಿದ್ದೇ ತಡ ಮುಂಜಾನೆಯಿಂದಲೇ ಕಾತುರದಿಂದ ಕಾಯುತ್ತಿದ್ದ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಟ್ಟರು. ಆದರೆ, ಮಾಸ್ಕ್ ಮರೆತು ಬಂದ ಪ್ರವಾಸಿಗರಿಗೆ ದಂಡದ ಪೆಟ್ಟು ಬಿತ್ತು!

    ಇದನ್ನೂ ಓದಿರಿ ಓಪನ್ ಏರ್ ಥಿಯೇಟರ್ ಪಾರ್ಟಿಯಲ್ಲೂ ಡ್ರಗ್ಸ್ ನಶೆ!

    ಇಂದಿನಿಂದ ನಂದಿಬೆಟ್ಟ ಅನ್‌ಲಾಕ್, ಆದ್ರೆ ಪ್ರವಾಸಿಗರ ಪ್ರವೇಶಕ್ಕೆ ಮಾಸ್ಕ್ ಕಡ್ಡಾಯನಂದಿಗಿರಿಧಾಮಕ್ಕೆ ಪ್ರವಾಸಿಗರು ಬರಲು ಮುಕ್ತ ಅವಕಾಶ ನೀಡಲಾಗಿದೆಯಾದರೂ ಕರೊನಾ ಆತಂಕ ಮಾತ್ರ ಇನ್ನೂ ದೂರ ಆಗಿಲ್ಲ. ಹೀಗಾಗಿ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್​ ಧರಿಸಿಯೇ ನಂದಿಗಿರಿಧಾಮಕ್ಕೆ ಬರುವಂತೆ ಜಿಲ್ಲಾಡಳಿತ ನಿಯಮ ರೂಪಿಸಿದೆ. ಆದರೂ ಬಹುತೇಕರು ಮಾಸ್ಕ್​ ಧರಿಸದೆ ಗಿರಿಧಾಮಕ್ಕೆ ಬಂದಿದ್ದರು. ಅವರನ್ನು ಮಾರ್ಗದಲ್ಲೇ ತಡೆದ ಅಧಿಕಾರಿಗಳು ವಾಪಸ್​ ಕಳುಹಿಸುತ್ತಿದ್ದ, ತಲಾ 100 ರೂಪಾಯಿ ದಂಡ ವಸೂಲಿ ಮಾಡುತ್ತಿದ್ದ, ಹಲವರು ವಾಪಸ್​ ಹೋಗಿ ಮಾಸ್ಕ್ ಖರೀದಿಸಿಕೊಂಡು ಮತ್ತೆ ನಂದಿಬೆಟ್ಟಕ್ಕೆ ಬರುತ್ತಿದ್ದ ದೃಶ್ಯ ಕಂಡುಬಂತು. ನೀವೂ ನಂದಿಬೆಟ್ಟಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ದರೆ ಮಾಸ್ಕ್ ಮರೆಯದಿರಿ.

    ಒಟ್ಟಾರೆ ಹಲವು ತಿಂಗಳ ಬಳಿಕ ಸ್ನೇಹಿತರು, ಕುಟುಂಬಸ್ಥರೊಂದಿಗೆ ನಂದಿಬೆಟ್ಟಕ್ಕೆ ಬಂದ ಪ್ರವಾಸಿಗರು ಪ್ರಕೃತಿಯ ಸೊಬಗು ಸವಿದು ಖುಷಿಪಟ್ಟರು.

    ಡ್ರಗ್ಸ್ ಮಾಫಿಯಾ ಕಾರಣಕ್ಕೆ ಬೆಂಗಳೂರು ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ಟೆನ್ಷನ್!

    ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts