More

    ಕಬಡ್ಡಿ, ಕಿಕ್ ಬಾಕ್ಸಿಂಗ್ ಮತ್ತು ಆ್ಯಕ್ಟಿಂಗ್; ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮೈಸೂರಿನ ಮೋನಿಕಾ

    ಮೈಸೂರು ಮೂಲದ ಹುಡುಗಿ ಮೋನಿಕಾ. ಕಿಕ್‌ಬಾಕ್ಸಿಂಗ್ ಮತ್ತು ಕಬಡ್ಡಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿರುವ ಗಟ್ಟಿಗಿತ್ತಿ. ಇಂಜಿನಿಯರಿಂಗ್ ಓದಿಕೊಂಡಿರುವ ಈ ಹುಡುಗಿ ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಕೋಮಲ್ ಕುಮಾರ್, ಲೇಖಚಂದ್ರ, ವರುಣ್ ರವಿ ನಟಿಸುತ್ತಿರುವ, ಮುರಳಿ ಮಾಸ್ಟರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ನಮೋ ಭೂತಾತ್ಮ 2’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ‘ಡಾನ್ಸ್ ಮತ್ತು ನಟನೆ ಬಗ್ಗೆ ಶಾಲೆಯ ದಿನಗಳಿಂದಲೂ ಕುತೂಹಲವಿತ್ತು. ಹೀಗಾಗಿ ಇಂಜಿನಿಯರಿಂಗ್ ಓದು ಮುಗಿದ ಬಳಿಕ ಆಡಿಷನ್ಸ್ ಕೊಡುತ್ತಿದ್ದೆ. ಕೆಲ ಸಿನಿಮಾಗಳಲ್ಲಿ ಆಯ್ಕೆಯಾಗಿದ್ದೆನಾದರೂ, ಕಥೆ ಇಷ್ಟವಾಗದೇ ಒಪ್ಪಿಕೊಂಡಿರಲಿಲ್ಲ. ‘ನಮೋ ಭೂತಾತ್ಮ 2’ ಕಥೆ ಇಷ್ಟವಾಯಿತು. ಹೀಗಾಗಿ ಒಪ್ಪಿಕೊಂಡೆ’ ಎಂದು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕುರಿತು ಹೇಳಿಕೊಳ್ಳುತ್ತಾರೆ ಮೋನಿಕಾ.

    ದೆವ್ವ ನೋಡಬೇಕು ಅಂತಿಷ್ಟ!
    ‘ನಮೋ ಭೂತಾತ್ಮ 2’ ಕಾಮಿಡಿ ಹಾರರ್ ಚಿತ್ರವಾಗಿದ್ದು, ಖಾಸಗಿ ವಾಹನದಲ್ಲಿ ಕೆಲಸ ಮಾಡುವ ನಂದಿನಿ ಪಾತ್ರದಲ್ಲಿ ಮೋನಿಕಾ ನಟಿಸಿದ್ದಾರೆ. ‘ಹಾರರ್ ಜಾನರ್ ನನಗೆ ತುಂಬ ಇಷ್ಟ. ನಿಜ ಜೀವನದಲ್ಲಿ ಹಾರರ್ ಅನುಭವ ಇದುವರೆಗೂ ಆಗಿಲ್ಲ. ಆದರೆ, ಬೇರೆಯವರು ತಮ್ಮ ಅನುಭಗಳ ಬಗ್ಗೆ ಹೇಳಿರುವುದನ್ನು ಕೇಳಿದ್ದೇನೆ. ಆ ರೀತಿ ರಿಯಲ್ ಅನುಭವ ನನಗೂ ಆಗಬೇಕು ಅಂತಿಷ್ಟ. ದೆವ್ವ ಇದೆ ಅನ್ನೋ ಭಯವಿಲ್ಲ. ಧೈರ್ಯ ಜಾಸ್ತಿ’ ಎಂದು ನಗುತ್ತಾರೆ ಮೋನಿಕಾ.

    ಕಬಡ್ಡಿ, ಕಿಕ್ ಬಾಕ್ಸಿಂಗ್ ಮತ್ತು ಆ್ಯಕ್ಟಿಂಗ್; ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮೈಸೂರಿನ ಮೋನಿಕಾ

    ನಟಿಸುವ ಆಸೆ, ಕುಣಿಯುವ ಮಹದಾಸೆ
    ಶಾಲೆ, ಕಾಲೇಜು ದಿನಗಳಲ್ಲಿ ಕಬಡ್ಡಿ, ಕಿಕ್ ಬಾಕ್ಸಿಂಗ್ ಅಲ್ಲದೇ ಎನ್‌ಸಿಸಿ, ಎನ್‌ಎಸ್‌ಎಸ್ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಮೋನಿಕಾ ಅವರಿಗೆ, ನಟನೆಗಿಂತ ಡಾನ್ಸ್ ಅಂದರೆ ತುಂಬ ಇಷ್ಟವಿತ್ತಂತೆ. ‘ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕು ಅಂತಿದ್ದೆ. ಆದರೆ, ಕ್ರಮೇಣ ನಟನೆ ಬಗ್ಗೆ ಇಂಟರೆಸ್ಟ್ ಹೆಚ್ಚಾಯಿತು. ಹೀಗಾಗಿಯೇ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ, ಆಗಾಗ ರಜೆ ತೆಗೆದುಕೊಂಡು ಶೂಟಿಂಗ್‌ನಲ್ಲಿ ತೊಡಗುತ್ತಿದ್ದೆ. ಸಿನಿಮಾ ಶೂಟಿಂಗ್ ಅನುಭವ ತುಂಬ ಹೊಸತು. ಚಿತ್ರರಂಗದ ಬಗ್ಗೆ ಮೊದಲು ನೆಗಟಿವ್ ವಿಷಯಗಳನ್ನು ಕೇಳಿದ್ದೆ. ಆದರೆ, ಈಗ ಒಳ್ಳೆಯ ಟೀಮ್ ಜತೆ ಕೆಲಸ ಮಾಡಿದ ಖುಷಿಯಿದೆ. ಈಗಷ್ಟೇ ಸಿನಿಮಾ ಕರಿಯರ್ ಪ್ರಾರಂಭಿಸಿದ್ದೇನೆ. ಒಳ್ಳೆ ಕಲಾವಿದರ ಜತೆ ಕೆಲಸ ಮಾಡಬೇಕು, ಉತ್ತಮ ಪಾತ್ರಗಳಲ್ಲಿ ನಟಿಸಬೇಕು ಅಂತಾಸೆ. ಹೊಸ ಅವಕಾಶಗಳು ಬರುತ್ತಿವೆ. ‘ನಮೋ ಭೂತಾತ್ಮ 2’ ರಿಲೀಸ್‌ಗೆ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ಮೋನಿಕಾ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts