More

    ನಮ್ಮ ಮೆಟ್ರೋ ಯೋಜನೆ: ಮರ ಹನನಕ್ಕೆ ಕೋರ್ಟ್ ತಡೆ

    ಬೆಂಗಳೂರು: ಮೆಟ್ರೊ ರೈಲು ಯೋಜನೆಗಾಗಿ ನಗರದ ವಿವಿಧೆಡೆ ಮರಗಳನ್ನು ಕಡಿಯುವ ಮತ್ತು ಸ್ಥಳಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

    ನಗರದಲ್ಲಿ ಮೆಟ್ರೋ ಯೋಜನೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳನ್ನು ಕಡಿಯುವುದನ್ನು ಪ್ರಶ್ನಿಸಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಹಾಗೂ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ನಗರದ ವಿವಿಧೆಡೆ 105 ಮರಗಳನ್ನು ಸ್ಥಳಾಂತ ರಿಸಲು ಹಾಗೂ 165 ಮರಗಳನ್ನು ಕಡಿಯಲು ಮರ ಅಧಿಕಾರಿ (ಟ್ರೀ ಆಫೀಸರ್) ಮೇ 21ರಂದು ನೀಡಿದ್ದ ಅನುಮತಿ ಆದೇಶವನ್ನಾಧರಿಸಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮಧ್ಯಂತರ ಆದೇಶ ನೀಡಿದೆ.

    ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!

    ಬನ್ನೇರುಘಟ್ಟ ರಸ್ತೆ ಸೇರಿ ನಗರದ ಆರು ಕಡೆ 165 ಮರ ಕಡಿಯಲು ಬಿಎಂಆರ್​ಸಿಎಲ್ ಉದ್ದೇಶಿಸಿದ್ದು, ಅವುಗಳಲ್ಲಿ ಕೆಲವನ್ನು ಬುಧವಾರ ಕಡಿಯಲಾಗಿದೆ. ಆದರೆ, ಉಳಿದ ಮರಗಳನ್ನು ಕಡಿಯದಂತೆ ಕೋರ್ಟ್ ಸೂಚಿಸಿದೆ.

    ಮಾ.4ರಂದು ನ್ಯಾಯಾಲಯ ನೀಡಿದ್ದ ಆದೇಶದ ಅನುಸಾರ ಮಾ.16 ಹಾಗೂ ಏ.28ರಂದು ವಿಶೇಷ ಸಮಿತಿಯು ಸಭೆ ನಡೆಸಿದೆ. ಸಭೆಯ ನಡಾವಳಿಗಳನ್ನು ಗಮನಿಸಿದರೆ ವಿಶೇಷ ಸಮಿತಿ ಕಾಟಾಚಾರಕ್ಕೆ ಕೆಲಸ ಮಾಡಿದಂತೆ ಕಾಣುತ್ತಿದೆ. ಮಾ.4ರಂದು ಕೋರ್ಟ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನೂ ದಾಖಲಿಸಿಲ್ಲ. ಮರ ಅಧಿಕಾರಿ ಕೂಡ ಮರಗಳನ್ನು ಸ್ಥಳಾಂತರಿಸಲು ಹಾಗೂ ಕಡಿಯಲು ಅನುಮತಿ ನೀಡುವಾಗ ತನ್ನ ವಿವೇಚನೆಯನ್ನು ಬಳಸಿಲ್ಲ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಮರ ಪ್ರಾಧಿಕಾರದ ಅಧಿಕಾರಿ ನಿಗದಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಮರಗಳ ಸ್ಥಳಾಂತರ ಕಾರ್ಯ ಅರಣ್ಯ ಅಧಿಕಾರಿಗಳ ತಾಂತ್ರಿಕ ಮೇಲುಸ್ತುವಾರಿಯಲ್ಲಿ ನಡೆದಿದೆಯೇ ಎಂಬುದರ ಬಗ್ಗೆ ವರದಿ ನೀಡಬೇಕು ಎಂದು ಸೂಚಿಸಿದ ಪೀಠ, ಮುಂದಿನ ಆದೇಶದವರೆಗೆ ಮರಗಳನ್ನು ಕಡಿಯದಂತೆ ಬಿಎಂಆರ್​ಸಿಎಲ್​ಗೆ ನಿರ್ದೇಶಿಸಿ ವಿಚಾರಣೆಯನ್ನು ಜೂ. 19ಕ್ಕೆ ಮುಂದೂಡಿತು.

    ಸಂವಿಧಾನದ ದ್ವಿಭಾಷಾ ಆವೃತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts