More

    ನಮೀಬಿಯಾ ಚೀತಾಗೆ ಆನೆಗಳೇ ಸೆಕ್ಯುರಿಟಿ ಗಾರ್ಡ್​! ಶಾಂತ ‘ಲಕ್ಷ್ಮೀ’, ಉಗ್ರ ‘ಸಿದ್ಧಾಂತ್’

    ಮಧ್ಯಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದಂದು ಭಾರತ ಪ್ರವೇಶಿಸಿದ್ದ ನಮೀಬಿಯಾ ಚೀತಾಗಳಿಗೆ ಇದೀಗ ಆನೆಗಳು ಭದ್ರತೆಯನ್ನು ಒದಗಿಸುತ್ತಿವೆ. ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದ್ದ ಎಂಟು ಚೀತಾಗಳ ರಕ್ಷಣೆಯ ಜವಾಬ್ದಾರಿಯನ್ನು ಎರಡು ಆನೆಗಳು ವಹಿಸಿಕೊಂಡಿವೆ.

    ನರ್ಮದಾಪುರಂನಲ್ಲಿರುವ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿದ್ದ ಲಕ್ಮೀ ಮತ್ತು ಸಿದ್ಧಾಂತ್​ ಎಂಬ ಎರಡು ಆನೆಗಳು ಕುನೋ ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸಿದೆ. ನಮೀಬಿಯಾ ವಾತಾವರಣಕ್ಕೂ, ಭಾರತದ ವಾತಾವರಣಕ್ಕೂ ವ್ಯತ್ಯಾಸವಿದೆ. ಇಲ್ಲಿನ ವಾತಾವರಣಕ್ಕೆ ಚೀತಾಗಳು ಹೊಂದಿಕೊಳ್ಳಬೇಕಿವೆ. ಹೀಗಾಗಿ ಆರೋಗ್ಯದ ಹಿತದೃಷ್ಟಿಯಿಂದ ಒಂದು ತಿಂಗಳ ಕಾಲ ಎರಡು ಆನೆಗಳು ಚೀತಾಗಳ ಭಧ್ರತೆ ನೋಡಿಕೊಳ್ಳಲಿವೆ.

    ಭದ್ರತೆಗೆ ನಿಯೋಜನೆಯಾಗಿರುವ ಲಕ್ಷ್ಮೀ ಮತ್ತು ಸಿದ್ಧಾಂತ್​ ಆನೆಗಳು ಈಗಾಗಲೇ 5 ಚಿರತೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಅನುಭವದ ದೃಷ್ಟಿಯಿಂದ ಎರಡು ಆನೆಗಳನ್ನು ಚೀತಾಗಳ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಇದೀಗ ಈ ಎರಡು ಆನೆಗಳು ಚೀತಾಗಳ ಮೇಲೆ ನಿಗಾ ಇಡುವುದರ ಜತೆಗೆ ಕುನೋ ರಾಷ್ಟ್ರೀಯ ಉದ್ಯಾನವನದ ಭದ್ರತಾ ತಂಡಗಳೊಂದಿಗೆ ಗಸ್ತು ಕಾರ್ಯ ನಡೆಸುತ್ತಿದೆ ಎಂದು ವರದಿಯಾಗಿದೆ.

    ಶಾಂತ ಸ್ವಭಾವದ ಲಕ್ಷ್ಮೀ, ಬೇಗನೆ ಕೆರಳುವ ಸಿದ್ಧಾಂತ..!

    ಭದ್ರತೆಗೆ ನಿಯೋಜನೆಯಾಗಿರುವ ಎರಡು ಆನೆಗಳ ಸ್ವಭಾವ ತದ್ವಿರುದ್ಧವಾದ್ದು. 30 ವರ್ಷ ವಯಸ್ಸಿನ ಸಿದ್ಧಾಂತ ಆನೆ 2011ರಲ್ಲಿ ರಾಜ್ಯದಲ್ಲಿ ಹುಲಿ ಕಾಣಿಸಿಕೊಂಡಾಗ ಅದನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೇಗನೆ ಕೆರಳಿ ಬಿಡುವ ಸ್ವಭಾವ ಸಿದ್ಧಾಂತ ಆನೆಗಿದೆ. 2010 ಎರಡು ಮಾವುತರ ಸಾವಿಗೆ ಕಾರಣವಾಗಿತ್ತು.

    ಲಕ್ಷ್ಮೀ ಆನೆಯ ಸ್ವಭಾವ ಸಿದ್ಧಾಂತ ಆನೆಗೆ ತದ್ವಿರುದ್ಧವಾದ್ದು. 25 ವರ್ಷದ ಲಕ್ಷ್ಮೀ ಶಾಂತ ಸ್ವಭಾವದ್ದು. ರಕ್ಷಣಾ ಕಾರ್ಯಾಚರಣೆ, ಸಫಾರಿ, ಕಾಡಿನಲ್ಲಿ ಗಸ್ತು ತಿರುಗುವುದರಲ್ಲಿ ಪರಿಣತಿ ಹೊಂದಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನದ ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.

    ಕ್ವಾರಂಟೈನ್​ಲ್ಲಿ ಚೀತಾಗಳು:

    ನಮೀಬಿಯಾದಿಂದ ಕರೆತಂದಿರುವ ಚೀತಾಗಳನ್ನು ಒಂದು ತಿಂಗಳ ಕಾಲ ಕ್ವಾರಂಟೈನ್ ಮಾಡಲಾಗಿದೆ. ಈ ವೇಳೆ ಸಿದ್ಧಾಂತ ಮತ್ತು ಲಕ್ಷ್ಮೀ ಆನೆಗಳು ಚೀತಾಗಳ ಚಲನವಲನ ಗಮನಿಸುವ ಕಾರ್ಯ ಮಾಡುತ್ತಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts