More

    ಗೂಡು ಸೇರಿದ ಕಾಂಗ್ರೆಸ್‌ ಹುಲಿಯಾ: ನಳಿನ್‌ ಲೇವಡಿ

    ಮಂಗಳೂರು: ಉಪಚುನಾವಣೆಯ ಫಲಿತಾಂಶದಿಂದ ಬಂಡೆ ಪುಡಿಯಾಗಿದೆ, ಕಾಂಗ್ರೆಸ್‌ನ ಹುಲಿಯ ಗೂಡು ಸೇರಿದೆ, ಚುನಾವಣಾ ಪೂರ್ವದಲ್ಲಿ ಬಿಜೆಪಿ ಅಲೆ ಎಲ್ಲಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರು, ಈಗ ಹುಲಿಯಾ ಗೂಡು ಸೇರಿದೆ ಅಂತಾ ಜನ ಹೇಳುತ್ತಿದ್ದಾರೆ, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಕನಸನ್ನು ಬಿಡಬೇಕು, ಮುಂದಿನ ಹತ್ತು ವರ್ಷಗಳ ಕಾಲ ಕನಸನ್ನು ಬಿಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

    ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿಯಲ್ಲೂ ಜನ ನಿಮ್ಮನ್ನು ತಿರಸ್ಕಾರ ಮಾಡಲಿದ್ದಾರೆ, ನಿಮ್ಮ ರಾಜಕೀಯ ಭವಿಷ್ಯ ಎಲ್ಲಿ ಅಂತಾ ಮೊದಲು ಯೋಚನೆ ಮಾಡಿ ಎಂದು ನಳಿನ್‌ ಅವರನ್ನು ಲೇವಡಿ ಮಾಡಿದರು.
    ಉಪಚುನಾವಣೆಯಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಕೆಲಸ ಮಾಡಿದೆ, ಶಿರಾದಲ್ಲಿ ಎಲ್ಲರ ಪರಿಶ್ರಮದಿಂದ ಬಿಜೆಪಿ ಗೆಲುವು ಸಾಧಿಸಿದೆ, ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯಾಗಿಲ್ಲ, ಆದರೆ ಚುನಾವಣೆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡಿದರು, ಆರ್.ಆರ್.ನಗರ ಹಾಗೂ ಶಿರಾದಲ್ಲಿ ಜಾತಿ ರಾಜಕೀಯ ಮಾಡಿದ್ದರು, ಆದರೆ ಜನ ಇದನ್ನೆಲ್ಕಾ ತಿರಸ್ಕಾರ ಮಾಡಿದ್ದಾರೆ ಎಂದರು.

    ವಿಧಾನಪರಿಷತ್ ಚುನಾವಣೆಯಲ್ಲೂ ಮೂರು ಸ್ಥಾನಗಳನ್ನು ಬಿಜೆಪಿ ಪಡೆದಿದೆ, ನಾಲ್ಕರಲ್ಲಿ ನಾಲ್ಕೂ ಸ್ಥಾನ ಗೆಲ್ಲುವ ವಿಶ್ವಾಸವಿದೆ, ರಾಷ್ಟ್ರದಲ್ಲಿ ಬಿಜೆಪಿ ಪರವಾದ ಅಲೆಯಿದೆ, ಮೋದಿ ಆಡಳಿತದ ಸಾಧನೆಗಳು ಜನರನ್ನು ತಲುಪಿದೆ ಎಂದ ಅವರು, ಸಿಎಂ ಆದ ಬಳಿಕ ಯಡಿಯೂರಪ್ಪನವರಿಗೆ ಸಾಲು ಸಾಲು ಸವಾಲು ಎದುರಾದರೂ ಎಲ್ಲವನ್ನೂ ಮೀರಿ ನಿಂತಿದ್ದಲ್ಲದೆ ಕೋವಿಡ್‌ ನಿಯಂತ್ರಣದಲ್ಲೂ ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts