More

    ಆತ್ಮಾವಲೋಕನದಿಂದ ಪ್ರಗತಿ – ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್

    ಚಿತ್ರದುರ್ಗ: ಆತ್ಮಾವಲೋಕನ ವತ್ತಿಯ ಪ್ರಗತಿಗೆ ಕಾರಣವಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಸ್.ಕೆ.ಬಿ.ಪ್ರಸಾದ್ ಹೇಳಿದರು. ನಗರದ ಡಯಟ್‌ನಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಲಿಕಲಿ(ಸಮಗ್ರ) ತರಬೇತಿಯಲ್ಲಿ ಮಾತನಾಡಿ,ಪ್ರತಿ ಮಗುವಿಗೆ ಕಲಿಯುವ ಹಕ್ಕಿದೆ.

    ಶಿಕ್ಷಕರು ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ ತಂತ್ರಜ್ಞಾನ ಅವಶ್ಯವಿದ್ದು ಪ್ರತಿ ಶಿಕ್ಷಕನಿಗೂ ತಂತ್ರಜ್ಞಾನದ ಅರಿವು ಇರಬೇಕಾಗುತ್ತದೆ ಎಂದರು. ನೋಡೆಲ್ ಅಧಿಕಾರಿ ಜಿ.ಎಸ್.ನಾಗರಾಜು ಮಾತನಾಡಿ,ಶಿಕ್ಷಣ ಕ್ಷೇತ್ರದಲಿ ಕಾಣುತ್ತಿ ರುವ ಬದಲಾವಣೆಗಳಿಗೆ ಪೂರಕವಾಗಿ ಬೋಧನಾ ಪ್ರಕ್ರಿಯೆಗಳನ್ನೂ ಬದಲಾಯಿಸಿಕೊಳ್ಳ ಬೇಕಾಗಿದೆ.

    ತರಬೇತಿ ಅವಧಿ ಶಿಕ್ಷಕರು ತಮ್ಮ ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಬೋಧನೆ-ಕಲಿಕಾ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳ ಬೇಕೆಂದರು. ಹಿರಿಯ ಉಪನ್ಯಾಸಕ ಇ.ಹಾಲಮೂರ್ತಿ,ನಿವತ್ತ ಹಿರಿಯ ಉಪನ್ಯಾಸಕ ಗಂಗಯ್ಯ,ಉಪನ್ಯಾಸಕರಾದ ಕೆ.ಜಿ.ಪ್ರಶಾಂ ತ್,ಎಸ್.ಬಸವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts