More

    ಮಹಿಳೆ ದೈವಿ ಸ್ವರೂಪಿ

    ನಾಲತವಾಡ: ಮಹಿಳೆ ದೈವಿ ಸ್ವರೂಪಿಯಾಗಿದ್ದು, ಗಟ್ಟಿ ಸಮಾಜ ಕಟ್ಟಲು ಅವಳ ಪಾತ್ರ ಬಹುಮುಖ್ಯವಾಗಿದೆ ಎಂದು ಶಿರೂರ ಮಹಾಂತ ತೀರ್ಥದ ಡಾ.ಬಸವಲಿಂಗ ಸ್ವಾಮೀಜಿ ಹೇಳಿದರು.

    ಪಟ್ಟಣದ ರತ್ನಸಂಗಮ ಕಲ್ಯಾಣ ಮಂಟಪದಲ್ಲಿ ಕವಿರತ್ನ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಮದರ್ ಥೇರೆಸಾ ಮಹಿಳಾ ಬಳಗದ ವತಿಯಿಂದ ಭಾನುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಮಹಿಳೆಯನ್ನು ಪ್ರಕೃತಿಗೆ ಹೋಲಿಸಲಾಗಿದ್ದು, ಆಕೆಗೆ ಬಾಲ್ಯದಿಂದಲೇ ಹೋರಾಟ ಶುರುವಾಗಿರುತ್ತದೆ. ಒಂದು ಗಟ್ಟಿ ಸಮಾಜ ಕಟ್ಟುವ ಶಕ್ತಿ ಅವಳಿಂದ ಮಾತ್ರ ಸಾಧ್ಯ ಎಂದರು.

    ಚಿತ್ತರಗಿ ಇಲಕಲ್ಲ ಸಂಸ್ಥಾನ ಮಠದ ಪೂಜ್ಯ ಗುರುಮಹಾಂತಪ್ಪ ಶ್ರೀಗಳು ಆಶೀರ್ವಚನ ನೀಡುತ್ತ, ಮನುಷ್ಯರನ್ನು ಕೀಳಾಗಿ ಕಾಣುವ ಕಾಲದಲ್ಲಿ ಎಲ್ಲರೂ ಸಮಾನರು ಎಂದು ಬಸಣ್ಣನವರು ಸಾರಿದ್ದಾರೆ ಎಂದು ಹೇಳಿದರು.

    ಗೋಷ್ಠಿ 1ರಲ್ಲಿ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯ ಪಾತ್ರದ ಕುರಿತು ಬಾಗಲಕೋಟೆ ಬಸವೇಶ್ವರ ಕಾಲೇಜಿನ ಉಪನ್ಯಾಸಕಿ ರೇಖಾ ಗೋಗಿ ಉಪನ್ಯಾಸ ನೀಡಿದರು. ಗೋಷ್ಠಿ 2ರಲ್ಲಿ ದಾಂಪತ್ಯದಲ್ಲಿ ಪ್ರೇಮಭಾವ ಕುರಿತು ಡಾ.ಡಿ.ಆರ್. ಮಳಖೇಡ ಉಪನ್ಯಾಸ ನೀಡಿದರು. ಕೊಡೇಕಲ್ಲ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಹಣಮಂತಿ ಗುತ್ತೇದಾರ, ಎಂ.ಎಚ್. ಹಾಲ್ಯಾಳ, ಸಾಹಿತಿ ಸಿದ್ದನಗೌಡ ಬಿಜ್ಜೂರ, ಎಸ್.ಕೆ. ಹರನಾಳ ಉಪನ್ಯಾಸ ನೀಡಿದರು.

    ರತ್ನಾಬಾಯಿ ಡಿಗ್ಗಿ, ಲತಾ ಕಟ್ಟಿಮನಿ, ಸಾಹಿತಿ ಅನ್ನಪೂರ್ಣ ಡೇರೇದ, ಶಂಕರರಾವ್ ದೇಶಮುಖ, ಗುರುಪ್ರಸಾದ ದೇಶಮುಖ, ಎಂ.ಎಸ್. ಪಾಟೀಲ, ಎಂ.ಬಿ. ಅಂಗಡಿ, ದ್ರಾಕ್ಷಾಯಿಣಿ ಪಾಟೀಲ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಾಂತಪ್ಪ ನಾವದಗಿ, ಎಸ್.ಜೆ. ಪಾಟೀಲ, ಬಸವಲಿಂಗಮ್ಮ ಮಸ್ಕಿ, ಡಾ. ಕಸ್ತೂರಿ ಪಾಟೀಲ, ಡಾ. ಗೀತಾ ಡಿಗ್ಗಿ, ಸಂಗಮ್ಮ ಗಂಗನಗೌಡ್ರ, ಶಿಕ್ಷಕಿ ಬಸಮ್ಮ ಅಮಾತಿಗೌಡ್ರ, ಭಾರತಿ ಚಿನಿವಾರ, ಶಿವಪ್ಪಗೌಡ ತಾತರೆಡ್ಡಿ, ಆರ್.ಜಿ. ಅಳ್ಳಗಿ, ಎಚ್.ಎಂ. ವಡಗೇರಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ನಾಲತವಾಡ, ಡಿ.ಸಿ. ಬಂಗಾರಿ, ಬಸವ ಕೇಂದ್ರದ ಸದಸ್ಯರು ಇದ್ದರು.

    ಲೊಟಗೇರಿಯ ಗುರುಮೂರ್ತಿ ದೇವರು ಕಣಕಾಲಮಠ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

    ರಾಘವೇಂದ್ರ ಗೂಳಿ, ಎಂ.ಡಿ. ಅಮರಾವದಗಿ, ನೀಲಮ್ಮ ಹಿರೇಮಠ, ಬಸಮ್ಮ ಪಟ್ಟಣಶೆಟ್ಟಿ, ಬಿ.ಜಿ. ಗದ್ದನಕೇರಿ, ಶರಣಮ್ಮ ಹಾದಿಮನಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts