ಲೈನ್‌ಮನ್ ವರ್ಗಾವಣೆ ರದ್ದುಪಡಿಸಿ

blank
blank

ನಾಲತವಾಡ: ನಾಗರಬೆಟ್ಟ ಗ್ರಾಮದ ಲೈನ್‌ಮನ್ ಮಹ್ಮದ ರಫೀಕ ಅವರ ವರ್ಗಾವಣೆ ತಡೆ ಹಿಡೆಯಬೇಕು ಎಂದು ಒತ್ತಾಯಿಸಿ ನಾಗರಬೆಟ್ಟ ಗ್ರಾಮದ ದಸಂಸ (ಭೀಮವಾದ) ಘಟಕದ ಸಂಘಟಕರು ಸ್ಥಳೀಯ ಹೆಸ್ಕಾಂ ಶಾಖಾಧಿಕಾರಿ ಎಂ.ಎಸ್. ತೆಗ್ಗಿನಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಾಗರಬೆಟ್ಟ ಗ್ರಾಮದಲ್ಲಿ ಸಹಾಯಕ ಲೈನ್‌ಮನ್ ಮಹ್ಮದ ರಫೀಕ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಸೇವೆ ಸಲ್ಲಿಸಿದ್ದಾರೆ. ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸಮಪರ್ಕವಾಗಿ ಸ್ಪಂದಿಸಿದ್ದಾರೆ. ಅವರನ್ನು ಇಂಗಳೇಶ್ವರ ಗ್ರಾಮಕ್ಕೆ ವರ್ಗಾವಣೆ ಮಾಡಿದ್ದು, ಕೂಡಲೇ ಮೇಲಧಿಕಾರಿಗಳು ಅವರ ವರ್ಗಾವಣೆ ರದ್ದುಗೊಳಿಸಿ ಮತ್ತೆ ಗ್ರಾಮದಲ್ಲಿ ಸೇವೆ ಸಲ್ಲಿಸುವಂತೆ ಆದೇಶ ಹೊರಡಿಸಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಂಘಟನೆ ಪದಾಧಿಕಾರಿಗಳಾದ ಉಮೇಶ ಆಲಕೊಪ್ಪರ, ಮಲ್ಲು ತಳವಾರ, ಗ್ರಾಮ ಘಟಕ ಅಧ್ಯಕ್ಷ ಹುಲಗಪ್ಪ ಮಾದರ, ಗ್ರಾಮಸ್ಥರಾದ ಸುಭಾಷ ಗುರಿಕಾರ, ರಡ್ಡೆಪ್ಪ ಗುರಿಕಾರ, ದ್ಯಾಮಪ್ಪ ಮುರಾಳ, ಸಿದ್ದಪ್ಪ ವಳಕಲದಿನ್ನಿ, ಸೋಮಪ್ಪ ಚಲವಾದಿ, ಆರ್.ಎಂ. ಪಾಟೀಲ, ಮಾಂತೇಶ ಹಗರಗುಂಡ ಇತರರು ಇದ್ದರು.

Share This Article

ಪರ್ಫ್ಯೂಮ್ ಬಳಸುವುದರಿಂದ ಉಸಿರಾಟ ಸಮಸ್ಯೆ ಉಂಟಾಗುತ್ತದೆ ಹುಷಾರ್​​!..Perfume Harmful Effects

ಬೆಂಗಳೂರು: ( Perfume Harmful Effects ) ಸುಗಂಧ ದ್ರವ್ಯ ಎಂದರೆ ಹಲವರಿಗೆ ತುಂಬಾ ಇಷ್ಟ.…

ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ರೀಲ್ಸ್​ ನೋಡ್ಬೇಡಿ… ಗಂಭೀರ ಕಾಯಿಲೆ ಬರುತ್ತೆ ಎಚ್ಚರ! Reels

Reels : ಈ ಮೊದಲು ಜನರ ನೆಚ್ಚಿನ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಆಗಿತ್ತು, ಈಗ ಇನ್​ಸ್ಟಾಗ್ರಾಂ…

Onion Oil: ನಿಮ್ಮ ಕೂದಲು ದಟ್ಟವಾಗಿ ಬೆಳೆಯಬೇಕೆ? ಈರುಳ್ಳಿ ರಸದಿಂದ ಹೀಗೆ ಮಾಡಿ ನೋಡಿ…

Onion Oil : ಇತ್ತೀಚಿನ ದಿನಗಳಲ್ಲಿ ತಲೆ ಕೂದಲು ಉದುರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೆಲಸದ…