More

    ರಸ್ತೆ ಅತಿಕ್ರಮಣ ತೆರವಿಗೆ ಆಗ್ರಹ

    ನಾಲತವಾಡ: ಪಟ್ಟಣದ ಬಸವೇಶ್ವರ ನಗರದಲ್ಲಿ ಕೆಲ ನಿವಾಸಿಗಳು ರಸ್ತೆಯನ್ನು ಅತಿಕ್ರಮಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಜಯ ಕರ್ನಾಟಕ ಸಂಘಟಕರು ಶುಕ್ರವಾರ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
    ಪಟ್ಟಣದ ಬಸವೇಶ್ವರನಗರ ಹಾಗೂ ಜಗದೇವನಗರದಲ್ಲಿರುವ ಎನ್‌ಎ ಪ್ಲಾಟ್‌ಗಳಲ್ಲಿ 9 ಮೀ. ರಸ್ತೆ ಇದೆ. ಆದರೆ, ಕೆಲ ನಿವಾಸಿಗಳು ರಸ್ತೆ ಅತಿಕ್ರಮಣ ಮಾಡಿದ್ದರಿಂದ ಜನ ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಈ ಕುರಿತು ಮೂರು ತಿಂಗಳ ಹಿಂದೆ ಅಧಿಕಾರಿಗಳ ಗಮನಕ್ಕೆ ತಂದರೂ ತೆರವಿಗೆ ಯಾರೂ ಮುಂದಾಗಿಲ್ಲ. ಆದ್ದರಿಂದ ಮುಖ್ಯಾಧಿಕಾರಿಗಳು ರಸ್ತೆ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಜರುಗಿಸಿ, 9 ಮೀ. ರಸ್ತೆ ನಿರ್ಮಾಣ ಮಾಡಬೇಕು. ಒಂದುವೇಳೆ ಯಾವುದೇ ಕ್ರಮ ಜರುಗಿಸದಿದ್ದರೇ ಸಂಘಟನೆಯಿಂದ ಪಪಂ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

    ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಎಂ.ಆರ್. ದಾಯಿ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಯ ಕರ್ನಾಟಕ ಸಂಘಟನೆ ವಲಯ ಘಟಕದ ಅಧ್ಯಕ್ಷ ಕಾಸಿಂ ಗಂಗೂರ, ತಾಲೂಕು ಉಪಾಧ್ಯಕ್ಷ ಅಪ್ಪಣ್ಣ ಬಂಡಿವಡ್ಡರ, ಶಿವು ಪಟ್ಟಣಶಟ್ಟಿ, ಸದಸ್ಯರಾದ ಮಲ್ಲು ಬಾಗೇವಾಡಿ, ಆನಂದ ಗಡೇದ, ಉಮೇಶ ಭೋವಿ, ಅಮರನಾಥ ದರ್ಶನಕರ, ಬಾಬು ಕಾನಿಕೇರಿ, ರಾಜೇಸಾಬ ಗಂಗೂರ, ದೊಡ್ಡಪ್ಪಗೌಡ್ರ ಜಾವೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

    ರಸ್ತೆ ಅತಿಕ್ರಮಣ ತೆರವಿಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts