More

    ಮಾಸ್ಕ್​ನಿಂದ ಮಾಡಿದ ಜಿ-ಸ್ಟ್ರಿಂಗ್​ ಧರಿಸಿ ವ್ಯಕ್ತಿಯ ಬೆತ್ತಲೆ ಓಡಾಟ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

    ಲಂಡನ್​: ಕರೊನಾ ವೈರಸ್​ ಮಹಾಮಾರಿ ಬಂದಾಗಿನಿಂದ ಅನೇಕ ದೇಶಗಳಲ್ಲಿ ಮಾಸ್ಕ್​ ಕಡ್ಡಾಯವಾಗಿದೆ. ಇದಕ್ಕೆ ಇಂಗ್ಲೆಂಡ್​ ಸಹ ಹೊರತಾಗಿಲ್ಲ. ಹಲವೆಡೆ ನಿಯಮ ಉಲ್ಲಂಘಿಸಿದರೆ ದಂಡವನ್ನು ವಿಧಿಸಲಾಗುತ್ತಿದೆ.

    ಪರಿಸ್ಥಿತಿ ಹೀಗಿರುವಾಗ ಲಂಡನ್​ನಲ್ಲಿ ವ್ಯಕ್ತಿಯೊಬ್ಬ ನೂತನ ನಿಯಮವನ್ನು ಅಣುಕಿಸಲು ಮಾಸ್ಕ್​ನಿಂದ ಮಾಡಲಾದ ಜಿ-ಸ್ಟ್ರಿಂಗ್​ ಧರಿಸಿ ಆಕ್ಸ್​ಫರ್ಡ್​ ಬೀದಿಯಲ್ಲಿ ಬೆತ್ತಲೆಯಾಗಿ ತಿರುಗಾಡಿದ್ದಾನೆ.

    ಇದನ್ನೂ ಓದಿ: ಸ್ಟೇವ್​ ಹಫ್​ ಯಾರು? ಸುಶಾಂತ್​ ಆತ್ಮದ ಜತೆ ಸಂಪರ್ಕ ಸಾಧಿಸಿದ್ಹೇಗೆ?: ಇಲ್ಲಿದೆ ಕುತೂಹಲಕರ ಸಂಗತಿ!

    ಲಂಡನ್​ನ ಪ್ರಮುಖ ಬೀದಿಯ ಸ್ಟೋರ್​ಗಳಲ್ಲಿ ಎಲ್ಲರೂ ಶಾಪಿಂಗ್​ನಲ್ಲಿ ಮಗ್ನರಾಗಿದ್ದರೆ, ಈ ವ್ಯಕ್ತಿ ಮಾತ್ರ ಮಾಸ್ಕ್​ನಿಂದ ಮಾಡಿದ್ದ ಜಿ-ಸ್ಟ್ರಿಂಗ್​ ಧರಿಸಿ, ಬೆನ್ನ ಹಿಂದೆ ಟ್ಯಾಟೋ ಒಂದನ್ನು ಹಾಕಿಸಿಕೊಂಡು ರಸ್ತೆಗಳಲ್ಲಿ ನಗ್ನವಾಗಿ ಸುತ್ತಾಡಿದ್ದಾನೆ. ಈತನನ್ನು ನೋಡಿದ ಅನೇಕರು ಮುಜುಗರ ಅನುಭವಿಸಿ ತಲೆ ತಗ್ಗಿಸಿದ್ದಾರೆ.

    ಇಂಗ್ಲೆಂಡ್​ನ ಸೂಪರ್​ ಮಾರ್ಕೆಟ್​ಗೆ ಭೇಟಿ ನೀಡುವವರು ಕಡ್ಡಾಯವಾಗಿ ಮಾಸ್ಕ್​ ಧರಿಸಿರಬೇಕೆಂದು ಅಲ್ಲಿನ ಪೊಲೀಸ್​ ಇಲಾಖೆ ಕಟ್ಟುನಿಟ್ಟಾಗಿ ತಿಳಿಸಿದೆ. ಅಲ್ಲದೆ, ಶಾಪ್​ ಓನರ್​ಗಳು ಸಹ ಮಾಸ್ಕ್​ ಧರಿಸಿ ಬರುವ ಗ್ರಾಹಕರನ್ನು ಮಾತ್ರ ಒಳಬಿಡಬೇಕೆಂದು ಹೇಳಿದೆ. ಹೀಗಾಗಿ ಇಂದು ಮಾಸ್ಕ್​ ಧರಿಸದೇ ಆಗಮಿಸಿದ ಗ್ರಾಹಕರು ಹಾಗೂ ಶಾಪರ್ಸ್​ ನಡುವೆ ಮಾತಿನ ಚಕಮಕಿ ನಡೆಯಿತು.

    ಇದಾದ ಕೆಲವೇ ಕ್ಷಣದಲ್ಲಿ ವ್ಯಕ್ತಿಯೊಬ್ಬ ಈ ರೀತಿಯಾಗಿ ಕಾಣಿಸಿಕೊಳ್ಳುವ ಮೂಲಕ ನೂತನ ನಿಯಮವನ್ನು ಅಣುಕಿಸಿದ್ದಾನೆ. ಈತನಿಂದಾಗಿ ಕೆಲಕಾಲ ಅನೇಕರು ಮುಜುಗರ ಅನುಭವಿಸುವಂತಾದರೆ, ಕೆಲವರು ಮಾಸ್ಕ್​ ತಂದ ಫಜೀತಿ ಎಂದು ಮಾಸ್ಕ್​ ವಿರುದ್ಧ ಗೊಣಗಿಕೊಂಡರು. (ಏಜೆನ್ಸೀಸ್​)

    ಇದನ್ನೂ ಓದಿ: ಹಿಂದುಳಿದ ಸಮುದಾಯಗಳಿಗೆ ಮೀಸಲು ಮುಂದುವರಿಸಲು ಒತ್ತಾಯಿಸಿ ಶಾಸಕ ರಾಜಾ ವೆಂಕಟಪ್ಪನಾಯಕಗೆ ಮನವಿ

    ಪಶ್ಚಾತಾಪ ಪಡೋ ಸಮಯ ಬಂದೇ ಬರುತ್ತೆ: ಡ್ರೋನ್​ ಪ್ರತಾಪ್​ ಚಾಲೆಂಜ್ ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts