More

    ವಿಜಯವಾಣಿ ಕೃಷಿ ಮೇಳದಲ್ಲಿ ನಗೆನಾಟಕ ಸ್ಪರ್ಧೆ

    ಮೈಸೂರು: ರಂಗಭೂಮಿಯು ವಿಶೇಷವಾಗಿ ಬದುಕಿನ ಮತ್ತು ಸಮಾಜದ ಎಲ್ಲ ವಲಯಗಳನ್ನು ಮುಟ್ಟುತ್ತದೆ. ರಂಗಭೂಮಿಯ ಅನೇಕ ವಲಯಗಳಲ್ಲಿ ಹಾಸ್ಯ ಪ್ರಕಾರ ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆದಿರುವುದು ಅತ್ಯಂತ ಗಮನ ಸೆಳೆಯá-ವ ವಿಷಯ. ಬದುಕಿನಲ್ಲಿ ಹಾಸ್ಯ ನಿರಂತರವಾಗಿ ಹೊಸ ಹೊಸ ವೇಷ ತೊಟ್ಟು ವಿವಿಧ ಸಂದರ್ಭ, ವಿವಿಧ ವ್ಯಕ್ತಿತ್ವಗಳಲ್ಲಿ ನಿರಂತರವಾಗಿ ಅನಾವರಣಗೊಳ್ಳು ತ್ತಲೇ ಇದೆ. ಜಗತ್ತಿನ ಮಹಾನ್ ನಾಟಕಕಾರ ಶೇಕ್ಸ್​ಪಿಯರ್ ತನ್ನ ನಾಟಕಗಳಲ್ಲಿ ಹಾಸ್ಯ ರಸದೌತಣಕ್ಕೆ ಸಿದ್ಧನೂ, ಪ್ರಸಿದ್ಧನೂ ಹೌದು. 400 ವರ್ಷಗಳ ನಂತರವೂ ಶೇಕ್ಸ್​ಪಿಯರ್​ನ ಅನೇಕ ನಾಟಕಗಳು ಇಂದಿಗೂ ಪ್ರೇಕ್ಷಕರನ್ನು ಕಚಗುಳಿ ಇಡುತ್ತಲೇ ಇವೆ.

    ಈ ಹಿನ್ನೆಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆ.21ರಿಂದ 23ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ‘ಕೃಷಿ ಮೇಳ’ದ ಮೊದಲ ದಿನ ‘ನಗೆ ನಾಟಕ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಆ ಮೂಲಕ ಹಾಸ್ಯ ನಾಟಕ ಪ್ರಕಾರವನ್ನು ಹೆಚ್ಚು ಅನ್ವೇಷಣೆ ಮಾಡುವುದಕ್ಕೆ ಹಾಗೂ ಅನಾವರಣಗೊಳಿಸುವುದಕ್ಕೆ ಮುಂದಾಗಿದೆ. ಕನ್ನಡ ರಂಗಭೂಮಿ ಕೂಡ ಹಾಸ್ಯ ಪ್ರಕಾರದ ನಾಟಕಗಳಿಗೆ ಪ್ರಸಿದ್ಧ ಕೊಡುಗೆಗಳನ್ನು, ನಾಟಕ ಕೃತಿಗಳನ್ನು ನೀಡಿದೆ. ಖ್ಯಾತ ನಾಟಕಕಾರರಾದ ಕೈಲಾಸಂ ಆಗಲಿ, ಶ್ರೀರಂಗ ಆಗಲಿ ಅಥವಾ ಪರ್ವತವಾಣಿ ಮತ್ತಿತರರು ಕನ್ನಡದ ರಂಗಭೂಮಿಯ ಹಾಸ್ಯ ಪ್ರಕಾರಕ್ಕೆ ನೀಡಿದ ಕೊಡುಗೆ ಅನನ್ಯ. ಈ ಸಂದರ್ಭ ಕನ್ನಡ ಸಾಹಿತ್ಯಕ್ಕೆ ಹಾಸ್ಯ ಬರಹ ನೀಡಿರುವ ಸಾಹಿತಿಗಳ ಸ್ಮರಣೆ ಅಗತ್ಯ. ಈ ಹಿನ್ನೆಲೆಯಲ್ಲಿ ‘ನಗೆ ನಾಟಕ’ ಸ್ಪರ್ಧೆ ನಡೆಯಲಿದೆ.

    ಯುಗಾಂತರವಾದಾಗೆಲ್ಲ ಹಾಸ್ಯವೂ ಹೊಸ ತಲೆಮಾರಿನೊಂದಿದೆ ಹೊಸ ವೇಷ ತೊಟ್ಟು ನಿಲ್ಲುತ್ತದೆ. ಹೀಗಾಗಿ, ಹಳೇ ಪ್ರಕಾರದ ಹೊಸತನದ ಆವಿಷ್ಕಾರಕ್ಕೆ ಈ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡ ರಂಗಭೂಮಿ ಹಾಗೂ ಕರ್ನಾಟಕ ಸಮಸ್ತ ರಂಗ ತಂಡಗಳು ಉತ್ಸಾಹದಿಂದ ಹಾಗೂ ಸೃಜನಶೀಲದಿಂದ ಸ್ಪಂದಿಸುತ್ತವೆ ಎಂಬ ನಂಬಿಕೆ ಇದೆ.

    ‘ನಗೆ ನಾಟಕ’ ಸ್ಪರ್ಧೆಯಲ್ಲಿ ಭಾಗವಹಿಸಲು ಕೆಲ ನಿಬಂಧನೆಗಳನ್ನು ನೀಡಲಾಗಿದೆ. ಸೃಜನಶೀಲ ಹಾಗೂ ಹೊಸತನದ ನಾಟಕಗಳಿಗೆ ಮೊದಲ ಅವಕಾಶ ನೀಡಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಕನ್ನಡ ರಂಗಭೂಮಿಯ ಹೆಸರಾಂತ ರಂಗಕರ್ವಿುಗಳು, ನಟರು, ನಿರ್ದೇಶಕರು ಹಾಗೂ ವಿನ್ಯಾಸಕಾರರು ಇರುತ್ತಾರೆ. ಸ್ಪರ್ಧೆಗೆ ಆಯ್ಕೆಯ ಅಂತಿಮ ಅಧಿಕಾರ ಆಯ್ಕೆ ಸಮಿತಿಯದೇ ಆಗಿರುತ್ತದೆ. ಪ್ರಥಮ, ದ್ವಿತೀಯ, ತೃತೀಯ ಹಾಗೂ ಆಯ್ಕೆ ಸಮಿತಿಯ ವಿಶೇಷ ಬಹುಮಾನ ನೀಡಲಾಗುತ್ತದೆ. ತಾಂತ್ರಿಕ ಹಾಗೂ ನಟವರ್ಗ ಸೇರಿ ಒಂದು ತಂಡದಲ್ಲಿ 25 ಜನ ಮೀರಬಾರದು. ನಮ್ಮ ವೇದಿಕೆಯಲ್ಲಿ ಲಭ್ಯವಿರುವ ಬೆಳಕಿನ ಉಪಕರಣಗಳನ್ನೇ ಬಳಸಿಕೊಂಡು ನಾಟಕ ಪ್ರದರ್ಶಿಸಬೇಕು. ರಂಗ ಪರಿಕರ, ವಸ್ತ್ರ, ಪ್ರಸಾದನ ಹಾಗೂ ರಂಗ ಸಜ್ಜಿಕೆಗಳನ್ನು ಆಯಾ ತಂಡಗಳೇ ಮಾಡಿಕೊಳ್ಳಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದ ಅವಧಿಯಿಂದ ಹೋಗುವವರೆಗೆ ಊಟದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಯಾವುದೇ ಧರ್ಮ, ರಾಜಕೀಯ, ವ್ಯಕ್ತಿಗಳಿಗೆ ಅವಹೇಳನಕಾರಿ ನಾಟಕಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

    ಸ್ಪರ್ಧೆಯಲ್ಲಿ ಭಾಗವಹಿಸುವ ನಾಟಕ ತಂಡಗಳು, ತಮ್ಮ ನಾಟಕಗಳ ವಿಡಿಯೋ ಚಿತ್ರೀಕರಣವನ್ನು (ವಿಳಾಸ: ಸ್ಥಾನಿಕ ಸಂಪಾದಕರು, ವಿಜಯವಾಣಿ, ಕನ್ನಡ ದಿನಪತ್ರಿಕೆ, ನಂ. 2954, ಆರ್​ಆರ್ ಪ್ಲಾಜಾ, ಚಾಮುಂಡಿಪುರಂ, ಮೈಸೂರು- 570004, ವಾಟ್ಸ್​ಆಪ್ ನಂ.9738886003) ಡಿವಿಡಿ, ಸಿಡಿ, ಯೂಟ್ಯೂಬ್ ಲಿಂಕ್ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ. 8884432049, 8884432030 ಸಂರ್ಪಸಬಹುದು.

    ಸಾಂಪ್ರದಾಯಿಕ ಉಡುಗೆ ಸ್ಪರ್ಧೆ

    ರಾಜ್ಯ ಮಟ್ಟದ ‘ಕೃಷಿ ಮೇಳ’ ಅಂಗವಾಗಿ ಯುವಕ-ಯುವತಿಯರಿಗೆ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಕೊಡವ, ಕರಾವಳಿ, ಮಂಡ್ಯ, ಮೈಸೂರು, ಲಂಬಾಣಿ, ಉತ್ತರ ಕನ್ನಡ ಸೇರಿ ರಾಜ್ಯದ ವಿವಿಧ ಸಂಸ್ಕೃತಿ ಬಿಂಬಿಸುವ ಉಡುಗೆ ತೊಟ್ಟು ಭಾಗವಹಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts