More

    ಆಸ್ಟ್ರೇಲಿಯನ್ ಓಪನ್ ಗೆದ್ದ ನಡಾಲ್; ಸ್ಪೇನ್ ದಿಗ್ಗಜನಿಗೆ 21ನೇ ಗ್ರಾಂಡ್ ಸ್ಲಾಂ ಕಿರೀಟ

    ಮೆಲ್ಬೋರ್ನ್: ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಗಳಲ್ಲಿ 21 ಪ್ರಶಸ್ತಿಗಳನ್ನು ಜಯಿಸಿದ ಮೊಟ್ಟಮೊದಲ ಆಟಗಾರ ಎನಿಸುವ ಮೂಲಕ ಸ್ಪೇನ್ ದಿಗ್ಗಜ ರಾಫೆಲ್ ನಡಾಲ್ ಹೊಸ ಇತಿಹಾಸ ಬರೆದಿದ್ದಾರೆ. ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ರಷ್ಯಾದ ಯುವ ಆಟಗಾರ ಡೆನಿಲ್ ಮೆಡ್ವೆಡೇವ್ ವಿರುದ್ಧ ಜಿದ್ದಾಜಿದ್ದಿನ ಹೋರಾಟದಲ್ಲಿ ಗೆಲುವು ದಾಖಲಿಸುವ ಮೂಲಕ ನಡಾಲ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ 13 ವರ್ಷಗಳ ಬಳಿಕ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. ಈ ಮೂಲಕ ತಲಾ 20 ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿರುವ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಮತ್ತು ವಿಶ್ವ ನಂ. 1 ಸೆರ್ಬಿಯಾ ಆಟಗಾರ ನೊವಾಕ್ ಜೋಕೊವಿಕ್ ಸಾಧನೆಯನ್ನು ಹಿಮ್ಮೆಟ್ಟಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದರು. 2020ರ ಫ್ರೆಂಚ್ ಓಪನ್ ಬಳಿಕ ನಡಾಲ್‌ಗೆ ಇದು ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಾಗಿದೆ.

    35 ವರ್ಷದ ಎಡಗೈ ಆಟಗಾರ ನಡಾಲ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾನುವಾರ ನಡೆದ 5 ಸೆಟ್‌ಗಳ ಸುದೀರ್ಘ ಕಾದಾಟದಲ್ಲಿ 25 ವರ್ಷದ ಮೆಡ್ವೆಡೇವ್ ವಿರುದ್ಧ 2-6, 6-7 (5-7), 6-4, 6-4, 7-5ರಿಂದ ರೋಚಕ ಗೆಲುವು ದಾಖಲಿಸಿದರು. 5 ಗಂಟೆ 24 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ನಡಾಲ್ ಆರಂಭಿಕ 2 ಸೆಟ್‌ಗಳನ್ನು ಸೋತು ಆಘಾತದ ಭೀತಿ ಎದುರಿಸಿದ್ದರು. ಆದರೆ ನಂತರದ 3 ಸೆಟ್‌ಗಳಲ್ಲಿ ರಷ್ಯಾ ಆಟಗಾರನಿಗೆ ತಮ್ಮ ನೈಜ ಆಟದ ರುಚಿ ತೋರಿಸಿದರು. ನಿರ್ಣಾಯಕ ಸೆಟ್‌ನಲ್ಲಿ 5-4ರಿಂದ ಮುಂದಿದ್ದಾಗ ಅವರ ಚಾಂಪಿಯನ್‌ಷಿಪ್ ಸರ್ವ್ ಬ್ರೇಕ್ ಆದರೂ ಕುಗ್ಗದೆ ಗೆಲುವು ಒಲಿಸಿಕೊಂಡರು.

    2009ರಲ್ಲಿ 22ನೇ ವಯಸ್ಸಿನಲ್ಲೇ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ನಡಾಲ್, ಬಳಿಕ 4 ಬಾರಿ ಫೈನಲ್‌ಗೇರಿ (2012, 2014, 2017, 2019) ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಗ್ರಾಂಡ್ ಸ್ಲಾಂ ಫೈನಲ್‌ಗಳಲ್ಲಿ ಫೆಡರರ್, ಜೋಕೋಗಿಂತ ಹೆಚ್ಚಿನ ಯಶಸ್ಸು ಕಂಡ ಸಾಧನೆ ನಡಾಲ್ ಅವರದಾಗಿದೆ. ನಡಾಲ್ 29 ಫೈನಲ್‌ಗಳಲ್ಲಿ 21ರಲ್ಲಿ ಗೆದ್ದಿದ್ದರೆ,  ಫೆಡರರ್ ಮತ್ತು ಜೋಕೋ 31 ಫೈನಲ್‌ಗಳಲ್ಲಿ 20ರಲ್ಲಿ ಗೆದ್ದಿದ್ದರು.

    ನಡಾಲ್ ವೃತ್ತಿಜೀವನದಲ್ಲಿ 4ನೇ ಬಾರಿ 5 ಸೆಟ್‌ಗಳ ಹೋರಾಟದಲ್ಲಿ ಮೊದಲ 2 ಸೆಟ್ ಸೋತ ಬಳಿಕ ಪಂದ್ಯ ಜಯಿಸಿದರು. 2007ರ ವಿಂಬಲ್ಡನ್‌ನ 4ನೇ ಸುತ್ತಿನಲ್ಲಿ ಕೊನೆಯದಾಗಿ ಈ ಸಾಧನೆ ಮಾಡಿದ್ದರು. ರಾಫೆಲ್ ನಡಾಲ್ ಮುಕ್ತ ಟೆನಿಸ್ ಯುಗದಲ್ಲಿ ಎಲ್ಲ 4 ಗ್ರಾಂಡ್ ಸ್ಲಾಂಗಳನ್ನು ಕನಿಷ್ಠ 2 ಬಾರಿ ಜಯಿಸಿದ 2ನೇ ಆಟಗಾರ ಎನಿಸಿದರು. ಜೋಕೊವಿಕ್ ಮೊದಲಿಗ.

    2ನೇ ಸುದೀರ್ಘ ಫೈನಲ್
    ಆಸ್ಟ್ರೇಲಿಯನ್ ಓಪನ್‌ನಲ್ಲಿ ಇದು 2ನೇ ಸುದೀರ್ಘ ಫೈನಲ್ ಪಂದ್ಯವೆನಿಸಿತು. 2012ರಲ್ಲಿ ಜೋಕೊವಿಕ್-ನಡಾಲ್ ನಡುವಿನ 5 ಸೆಟ್‌ಗಳ ಫೈನಲ್ ಹೋರಾಟ 5 ಗಂಟೆ 53 ನಿಮಿಷಗಳ ಕಾಲ ಸಾಗಿತ್ತು.

    ಫೆಡ್, ಜೋಕೋ ಗೈರಿನ ಲಾಭ
    ಮೆಲ್ಬೋರ್ನ್‌ನಲ್ಲಿ 10ನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿದ್ದ ಜೋಕೋವಿಕ್ ಲಸಿಕೆ-ವೀಸಾ ವಿವಾದದಿಂದಾಗಿ ಟೂರ್ನಿಯಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದರೆ, ೆಡರರ್ ಗಾಯದಿಂದಾಗಿ ಹೊರಗುಳಿದಿದ್ದರು. ಇವರಿಬ್ಬರ ಗೈರಿನಲ್ಲಿ ನಡಾಲ್ ಗ್ರಾಂಡ್ ಗೆಲುವಿನ ಓಟ ಮುಂದುವರಿಸಿದರು. ಇನ್ನು ಅವರ ನೆಚ್ಚಿನ ್ರೆಂಚ್ ಓಪನ್ ಕ್ಲೇಕೋರ್ಟ್ ಟೂರ್ನಿಯಲ್ಲಿ ಗ್ರಾಂಡ್ ಸ್ಲಾಂ ಗೆಲುವನ್ನು 22ಕ್ಕೇರಿಸುವ ಅಪೂರ್ವ ಅವಕಾಶ ಹೊಂದಿದ್ದಾರೆ.

    ನಡಾಲ್ ಗ್ರಾಂಡ್ ಸ್ಲಾಂ ಗೆಲುವು:
    ಆಸ್ಟ್ರೇಲಿಯನ್ ಓಪನ್: 2 (2009, 2022)
    ್ರೆಂಚ್ ಓಪನ್: 13 (2005, 2006, 2007, 2008, 2010, 2011, 2012, 2013, 2014, 2017, 2018, 2019, 2020)
    ವಿಂಬಲ್ಡನ್: 2 (2008, 2010)
    ಯುಎಸ್ ಓಪನ್: 4 (2010, 2013, 2017, 2019)

    ಗರಿಷ್ಠ ಗ್ರಾಂಡ್ ಸ್ಲಾಂ ವಿಜೇತರು
    ರಾೆಲ್ ನಡಾಲ್ 21
    ರೋಜರ್ ೆಡರರ್ 20
    ಜೋಕೋವಿಕ್ 20
    ಪೀಟ್ ಸಾಂಪ್ರಾಸ್ 14

    ಕೋರ್ಟ್‌ಗೆ ನುಗ್ಗಿದ ಪ್ರೇಕ್ಷಕ
    ಫೈನಲ್ ನಡುವೆ ಪ್ರೇಕ್ಷಕನೊಬ್ಬ ಕೋರ್ಟ್ ನುಗ್ಗಿದ ಕಾರಣ ಕೆಲಕಾಲ ಆಟಕ್ಕೆ ಅಡಚಣೆಯಾಯಿತು. ಆಸ್ಟ್ರೇಲಿಯಾದಲ್ಲಿ ವಲಸಿಗರ ಬಂಧನದ ವಿರುದ್ಧ ಪ್ರತಿಭಟಿಸುವ ಬ್ಯಾನರ್ ಹಿಡಿದಿದ್ದ ಆಟನನ್ನು ಭದ್ರತಾ ಬಂಧಿಸಿದರು.

    ಮೆಡ್ವೆಡೇವ್‌ಗೆ ಮತ್ತೆ ನಿರಾಸೆ
    ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೋಕೊವಿಕ್ ವಿರುದ್ಧ ಸೋತಿದ್ದ ಮೆಡ್ವೆಡೇವ್ ಈ ಬಾರಿ ನಡಾಲ್ ವಿರುದ್ಧ ನಿರಾಸೆ ಅನುಭವಿಸಿದರು. ಕಳೆದ ವರ್ಷ ಯುಎಸ್ ಓಪನ್ ಜಯಿಸಿದ್ದ ಮೆಡ್ವೆಡೇವ್ ಸತತ 2ನೇ ಗ್ರಾಂಡ್ ಸ್ಲಾಂ ಗೆಲುವಿನ ನಿರೀಕ್ಷೆಯಲ್ಲಿದ್ದರು. ಮುಕ್ತ ಟೆನಿಸ್ ಇತಿಹಾಸದಲ್ಲಿ ವೃತ್ತಿಜೀವನದ ಮೊದಲ 2 ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಸತತ 2 ಟೂರ್ನಿಗಳಲ್ಲಿ ಗೆದ್ದ ಮೊದಲಿಗ ಎನಿಸುವಲ್ಲೂ ಎಡವಿದರು.

    U19 World Cup: ಬಾಂಗ್ಲಾ ಬಗ್ಗು ಬಡಿದ ಭಾರತ.. 2 ವರ್ಷದ ಹಿಂದಿನ ಸೇಡು ತೀರಿಸಿಕೊಂಡು ಸೆಮೀಸ್​ಗೆ ಲಗ್ಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts