More

    ನ್ಯಾಕ್ ಮಾನ್ಯತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ

    ನಿಪ್ಪಾಣಿ: ಯುಜಿಸಿ ನಿಯಮಾವಳಿಗಳಡಿ ನಡೆಯಬೇಕಾದ ನ್ಯಾಕ್ ಪ್ರಕ್ರಿಯೆಯಲ್ಲಿ ಎಲ್ಲ ವಿಶ್ವವಿದ್ಯಾಲಯ, ಮಹಾವಿದ್ಯಾಲಯಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು.ಇದಕ್ಕೆ ಬೇಕಾದ ಅಗತ್ಯ ತರಬೇತಿ ಹಾಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ನ್ಯಾಕ್ ಮೌಲ್ಯಾಂಕನ ಸಮಿತಿ ಸಹಾಯಕ ಸಲಹೆಗಾರ ಡಾ.ಡಿ.ಕೆ.ಕಾಂಬಳೆ ಹೇಳಿದ್ದಾರೆ.

    ಕೆಎಲ್‌ಇ ಸಂಸ್ಥೆಯ ಸ್ಥಳೀಯ ಜಿ.ಐ.ಬಾಗೇವಾಡಿ ಮಹಾ ವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರೇರಿತ, ಯುಜಿಸಿ ಪ್ರಾಯೋಜಿತ ಪರಾಮರ್ಶ ಯೋಜನೆಯಡಿ ಪರಿಷ್ಕೃತ ಯುಜಿಸಿ ಮಾರ್ಗಸೂಚಿಗಳು ವಿಷಯದ ಕುರಿತು ಹಮ್ಮಿಕೊಂಡ ಒಂದು ದಿನದ ಕಾರ್ಯಾ ಗಾರದಲ್ಲಿ ಮಾತನಾಡಿ, ವಿವಿ ಹಾಗೂ ಮಹಾವಿದ್ಯಾಲಯಗಳು ನ್ಯಾಕ್ ಮಾನ್ಯತೆಗೆ ಒಳಪಡುವುದರಿಂದ ಹೆಚ್ಚಿನ ಅನುಕೂಲಗಳಿವೆ. ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸೌಲಭ್ಯಗಳು ನ್ಯಾಕ್‌ನಿಂದ ಸಿಗುತ್ತವೆ ಎಂದರು.

    ಬದಲಾದ ಮೌಲ್ಯಾಂಕನ ಮತ್ತು ಮಾನ್ಯತಾ ಪ್ರಕ್ರಿಯೆಗಳ ವ್ಯವಸ್ಥಿತ ಮಾಹಿತಿಯನ್ನು ನೀಡಲು ಯುಜಿಸಿ ಈಗಾಗಲೇ ಎ ಶ್ರೇಣಿ ಮಹಾವಿದ್ಯಾಲಯಗಳಿಗೆ ತರಬೇತಿ ಜವಾಬ್ದಾರಿ ನೀಡಿದೆ. ಸ್ಥಳೀಯ ಮಹಾವಿದ್ಯಾಲಯಗಳ ನುರಿತ ಅಧ್ಯಾಪಕರ ತಂಡದ ನೆರವು ಹಾಗೂ ಸಲಹೆ ಅಳವಡಿಸಿಕೊಂಡು ಶೈಕ್ಷಣಿಕ ಔನ್ನತ್ಯ ಸಾಧಿಸುವಂತೆ ಉಪನ್ಯಾಸಕರಿಗೆ ಕರೆ ನೀಡಿದರು.

    ಕಾರ್ಯಾಗಾರದಲ್ಲಿ ಮೂರು ತಾಂತ್ರಿಕ ಗೋಷ್ಠಿಗಳು ಜರುಗಿದವು. ಮೊದಲನೇ ತಾಂತ್ರಿಕ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಡಾ.ಡಿ.ಕೆ. ಕಾಂಬಳೆ ಪರಿಷ್ಕೃತ ನ್ಯಾಕ್ ಮಾರ್ಗಸೂಚಿಗಳ ಕುರಿತು ವಿವರಿಸಿ, ಪ್ರತಿನಿಧಿಗಳ ಸಂದೇಹ ನಿವಾರಿಸಿದರು. ದ್ವಿತೀಯ ತಾಂತ್ರಿಕ ಗೋಷ್ಠಿಯ ಸಂಪನ್ಮೂಲ ವ್ಯಕ್ತಿ ಎಸ್.ಜಿ.ಮಹಾರಾಜಾ ಮಹಾವಿದ್ಯಾಲಯದ ನಿಕಾಯ ಮುಖ್ಯಸ್ಥ ಡಾ.ಗಿರೀಶ ಕಲ್ಯಾಣಶೆಟ್ಟಿ, ಪರಾಮರ್ಶೆ ಯೋಜನೆಯ ಉದ್ದೇಶ, ವ್ಯಾಪ್ತಿ ಕುರಿತು ತಿಳಿಸಿದರು. ನ್ಯಾಕ್ ಮೌಲ್ಯಾಂಕನ ಸಮಿತಿ ಸದಸ್ಯ ಡಾ.ಎಂ.ಬಿ.ಕೋಥಳೆ ಸ್ವ ಅಧ್ಯಯನ ವರದಿ (ಎಸ್‌ಎಸ್‌ಆರ್) ಸಿದ್ಧಪಡಿಸುವ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

    ಪ್ರಾಚಾರ್ಯ ಡಾ.ಸಿ.ವಿ.ಕೊಪ್ಪದ, ಕೆಎಲ್‌ಇ ಸಂಸ್ಥೆ ನಿರ್ದೇಶಕ ಪ್ರವೀಣ ಬಾಗೇವಾಡಿ, ಡಾ.ಎಸ್.ಬಿ.ಸೊಲಬಣ್ಣವರ, ಪ್ರೊ.ಕೆ.ಎನ್.ಶ ಂಕರಮೂರ್ತಿ, ಡಾ.ಬಿ.ಎಂ.ಹಿರೇಮಠ, ಡಾ.ವಿ.ಡಿ.ಮಾಳಗೆ, ಡಾ.ಎಂ.ಎಂ.ಶಂಕರಿಕೊಪ್ಪ, ಪ್ರೊ.ವಿ.ಬಿ.ಧಾರವಾಡ ವಿವಿಧ ಮಹಾವಿದ್ಯಾಲಯಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು. ಪ್ರೊ.ಶಿವಲಿಂಗ ನಾಯಿಕ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕ, ಉಪಪ್ರಾಚಾರ್ಯ ಡಾ.ಆರ್.ಜಿ.ಖರಾಬೆ ಪರಿಚಯಿಸಿದರು. ಪ್ರೊ.ರಶೀದ್ ಮುಲ್ಲಾ, ಪ್ರೊ.ಸಲ್ಮಾನ್ ಮನೇರ, ಪ್ರೊ.ಭಕ್ತಿ ಕಮತೆ, ಪ್ರೊ.ಗಿರಿಜಾ ಮದನಳ್ಳಿ ನಿರೂಪಿಸಿದರು. ಡಾ.ಎ.ಎಸ್.ಜಾಗನೂರೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts