More

    ನಬಾರ್ಡ್ ಸಂಸ್ಥೆಯ 42ನೇ ಸಂಸ್ಥಾಪನಾ ದಿನ; ಸಿರಿಧಾನ್ಯ ವಲಯದಲ್ಲಿ ಸೇವೆ ಸಲ್ಲಿಸಿದ ರೈತರಿಗೆ ಸನ್ಮಾನ

    ಬೆಂಗಳೂರು: ಹವಾಮಾನ ವೈಪರೀತ್ಯ, ವಲಸೆ ಹಾಗೂ ಡಿಜಿಟಲ್ ಅಸಮಾನತೆಯಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ನಬಾರ್ಡ್ ಮುಂದಾಗಬೇಕು ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಈ.ವಿ.ರಮಣ ರೆಡ್ಡಿ ಸಲಹೆ ನೀಡಿದರು.

    ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ನಬಾರ್ಡ್)ನ ಕಚೇರಿಯಲ್ಲಿ ಸೋಮವಾರ ನಡೆದ 42ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಿರಿಧಾನ್ಯ ವಲಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮೂರು ರೈತ ಸಂಸ್ಥೆಗಳು ಮತ್ತು ಮೂವರು ರೈತರನ್ನು ಸನ್ಮಾನಿಸಿ ಮಾತನಾಡಿದರು. ನಬಾರ್ಡ್ ಸಿರಿಧಾನ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದು, ಮುಖ್ಯ ಆಹಾರವಾಗಿ ಪರಿವರ್ತಿಸಲು ಸರ್ಕಾರದ ಕ್ರಮಗಳಿಗೆ ನೆರವು ನೀಡುತ್ತಿದೆ. ಇದಕ್ಕಾಗಿ 38 ರೈತ ಉತ್ಪಾದನಾ ಸಂಸ್ಥೆಗಳನ್ನು ಸ್ಥಾಪಿಸಿರುವುದರಿಂದ ಆಹಾರ ಭದ್ರತೆ ಸಾಧ್ಯವಾಗಿದೆ ಎಂದರು.

    ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಕಥೆ ಬಿಚ್ಚಿಟ್ಟ ಮಾಜಿ ಸಿಎಂ ಎಚ್‌ಡಿಕೆ!

    ನಬಾರ್ಡ್ ಸಂಸ್ಥೆಯ 42ನೇ ಸಂಸ್ಥಾಪನಾ ದಿನ; ಸಿರಿಧಾನ್ಯ ವಲಯದಲ್ಲಿ ಸೇವೆ ಸಲ್ಲಿಸಿದ ರೈತರಿಗೆ ಸನ್ಮಾನ

    ನಬಾರ್ಡ್ ಗ್ರಾಮೀಣ ಭಾರತದ ಪರಿವರ್ತನೆಗೆ ಕಾರಣವಾಗಿದ್ದು, ಸಮೃದ್ಧ ಭಾರತದ ಕಲ್ಪನೆಯನ್ನು ನನಸು ಮಾಡುತ್ತಿದೆ. ಮುಖ್ಯವಾಗಿ ಗ್ರಾಮೀಣ ಹಣಕಾಸು ಸಂಸ್ಥೆಗಳು ಹಾಗೂ ಸಹಕಾರ ಸಂಸ್ಥೆಗಳ ಬಲವರ್ಧನೆಗೆ ನೆರವಾಗುವುದರೊಂದಿಗೆ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿರುವುದು ಶ್ಲಾಘನೀಯ. ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಬಾರ್ಡ್‌ನೊಂದಿಗೆ ಕೈಜೋಡಿಸಿದೆ ಎಂದು ತಿಳಿಸಿದರು.

    ನಬಾರ್ಡ್‌ನ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್ ಮಾತನಾಡಿ, 1982ರಲ್ಲಿ 4,519 ಕೋಟಿ ರೂ. ಇದ್ದ ನಬಾರ್ಡ್‌ನ ಆಯವ್ಯಯ ಗಾತ್ರ, ಪ್ರಸ್ತುತ 8 ಲಕ್ಷ ಕೋಟಿ ರೂ. ತಲುಪಿದೆ. ಸಂಚಿತ ಪುನರ್ಧನವಾಗಿ 20 ಲಕ್ಷ ಕೋಟಿ ರೂ. ನೀಡಲಾಗಿದ್ದು, ಇದರಲ್ಲಿ 8 ಲಕ್ಷ ಕೋಟಿ ರೂ. ಬಂಡವಾಳ ರಚನೆಗೆ ನಿಯೋಜಿಸಲಾಗಿದೆ. ಇದು ಕೃಷಿ ಮತ್ತು ಗ್ರಾಮೀಣ ವಲಯದ ಸಮೃದ್ಧಿಗೆ ಪೂರಕವಾಗಿದೆ. ಕಳೆದ ಮೂರು ವರ್ಷಗಳಲ್ಲಿ 35 ಸಾವಿರ ಪ್ರಾಥಮಿಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳನ್ನು ಬಹು ಸೇವಾ ಕೇಂದ್ರವಾಗಿ ಪರಿವರ್ತಿಸಲಾಗಿದೆ ಎಂದರು.

    ಆರ್‌ಬಿಐ ಮುಖ್ಯ ಮಹಾ ವ್ಯವಸ್ಥಾಪಕ ಪಿ.ಎನ್. ರಘುನಾಥ್ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ, ಉತ್ಪಾದನೆ ಮತ್ತು ಆದಾಯ ಹೆಚ್ಚಳಕ್ಕೆ ನಬಾರ್ಡ್ ನೆರವಾಗಿದೆ. ಕೃಷಿ ಸಾಲ ಸೌಲಭ್ಯ ನೀಡಲು ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ಒಟ್ಟಾಗಿ ಕಾರ್ಯನಿರ್ವಹಿಸಿದ್ದು, ಆರ್ಥಿಕ ಸಾಕ್ಷರತೆ ಸಾಧಿಸುವ ಗುರಿ ಹೊಂದಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆರ್‌ಐಡಿಎ ಮೂಲಕ ರಾಜ್ಯದಲ್ಲಿ ನಬಾರ್ಡ್‌ನ ಮಧ್ಯಸ್ಥಿಕೆಗಳ ಕುರಿತ ಕಾಫಿ ಟೇಬಲ್ ಪುಸ್ತಕ ಮತ್ತು ಬಹುಸೇವಾ ಸಂಸ್ಥೆಗಳಾಗಿ ಪರಿವರ್ತನೆಗೊಂಡ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಯಶೋಗಾಥೆಗಳ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರು ವಿವಿ ಕುಲಪತಿ ಡಾ.ವಿ.ಎಸ್. ಸರೇಶ್, ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಯ ಸಂಚಾಲಕ ಎ. ಮುರಳಿ ಕೃಷ್ಣ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts