More

  ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸೌದಿಯಿಂದ ಬಂದು ಹರಕೆ ಸಲ್ಲಿಸಿದ ಅಭಿಮಾನಿ; ಚಿನ್ನಲೇಪಿತ ಬೆಳ್ಳಿಯ ನಾಗಾಭರಣ ಅರ್ಪಣೆ

  ಮೈಸೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಸೌದಿ ಅರೇಬಿಯಾದಿಂದ ಬಂದು ಸಿದ್ದರಾಮಯ್ಯ ಅವರ ಮನೆದೇವರಿಗೆ ಹರಕೆ ಸಲ್ಲಿಸಿದ್ದಾರೆ. ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಈ ಹರಕೆ ಸಲ್ಲಿಕೆ ಮಾಡಲಾಗಿದೆ.

  ಅನಿವಾಸಿ ಭಾರತೀಯ ರವಿಮಹಾದೇವ ಎಂಬವರು ಈ ಹರಕೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರ ಮನೆದೇವರಾದ ಸಿದ್ದರಾಮನಹುಂಡಿ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಚಿನ್ನಲೇಪಿತ ಬೆಳ್ಳಿಯ ನಾಗಾಭರಣವನ್ನು ಹರಕೆಯಾಗಿ ಅರ್ಪಿಸಿದ್ದಾರೆ. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಈ ಹರಕೆ ಸಲ್ಲಿಸಿದರು.

  ಇದನ್ನೂ ಓದಿ: ಮುಂದಿನ ಚುನಾವಣೆಗೆ ಮಹಾಘಟಬಂಧನ್: ರಾಜಧಾನಿ ಬೆಂಗಳೂರಲ್ಲಿ ಯುಪಿಎ ಅಂಗಪಕ್ಷಗಳ ನಾಯಕರ ದಂಡು!

  ದೇವೇಗೌಡನಹುಂಡಿಯ ಮಹಾದೇವರ ಎಂಬವರ ಪುತ್ರರಾಗಿರು ರವಿ, ಸೌದಿ ಅರೇಬಿಯಾದಲ್ಲಿ ನೆಲೆಸಿದ್ದಾರೆ. ಅಲ್ಲಿ ಸಾಗರೋತ್ತರ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಹಾಗೂ ಜಂಟಿ ಕಾರ್ಯದರ್ಶಿ ಆಗಿರುವ ಇವರು ಸಿದ್ದರಾಮಯ್ಯ ಅವರ ಅಭಿಮಾನಿ. ಚುನಾವಣೆ ಸಂದರ್ಭದಲ್ಲಿ ಹರಕೆ ಹೇಳಿಕೊಂಡಿದ್ದ ಇವರು, ಇಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಮುಂತಾದವರ ಸಮ್ಮುಖದಲ್ಲಿ ಹರಕೆ ಸಲ್ಲಿಸಿದ್ದಾರೆ.

  ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

  ಸ್ಪೆಷಲ್​ ಮಸಾಲೆ ದೋಸೆ ಜತೆ ಸಾಂಬಾರ್ ನೀಡದ್ದಕ್ಕೆ ಹೋಟೆಲ್ ಮಾಲೀಕರಿಗೆ 3,500 ರೂ. ದಂಡ!

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts