More

    ಪುರಾಣ ಆಲಿಕೆಯಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ

    ಕುರುಗೋಡು: ಮನಸ್ಸಿನ ನೆಮ್ಮದಿ, ಶಾಂತಿಗಾಗಿ ಪುರಾಣ, ಪುಣ್ಯಕಥೆಗಳ ಶ್ರವಣ ಅಗತ್ಯವಿದ್ದು, ಪುರಾಣದಲ್ಲಿರುವ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಭೂಕೈಲಾಸ ಮೇಲುಗದ್ದುಗೆ ಹಿರೇಮಠ ಸಂಸ್ಥಾನದ ಗುರುಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿವಯೋಗಿ ಮಠದಲ್ಲಿ 35ನೇ ವರ್ಷದ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.ಮನುಷ್ಯ ತನ್ನ ಎಲ್ಲ ಅಗತ್ಯಗಳನ್ನು ಅಂತರ್ಜಾಲದ ಮೂಲಕ ಅಂಗೈಯಲ್ಲಿ ಪೂರೈಸಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಹಿಂದೆ ಹಿರಿಯರು ಮಾನಸಿಕ ಸಮತೋಲನಕ್ಕಾಗಿ ಪುರಾಣ, ಪುಣ್ಯಕಥೆಗಳನ್ನು ರಚಿಸಿದ್ದಾರೆ.ಮೇಲುಮಠದ ಷಡಕ್ಷರಿಸ್ವಾಮಿ ಪುರಾಣ ಪ್ರವಚನ , ಕೊಂಚಿಗೇರಿಯ ನಾಗರಾಜ ಶಿವ ಸಂಗೀತ, ಶೇಖರಯ್ಯಸ್ವಾಮಿ ತಬಲ ಸೇವೆಗೆ ಸಾಥ್ ನೀಡಲಿದ್ದಾರೆ.ಏ.10 ವರೆಗೆ ಪುರಾಣ ಪ್ರವಚನ ನಡೆಯಲಿದೆ ಎಂದರು.

    ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ, ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾ ಮಠದ ಡಾ ಶ್ರೀ ಹೀರಿಶಾಂತವೀರ ಸ್ವಾಮೀಜಿ, ಮೈನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕುರುಗೋಡು ವಿರಕ್ತ ಮಠದ ನಿರಂಜನ ಪ್ರಭುದೇವರು, ಸಿದ್ದರಾಂಪುರ ಮಠದ ಚಿದಾನಂದಯ್ಯ ತಾತ, ಕಲ್ಲುಕಂಭ ರುದ್ರಮುನಿ ತಾತ, ಕ್ಯಾದಿಗೆಹಾಳು ಗಂಗಾಧರ ತಾತ, ಸುಂಕೇಶ್ವರ ಮಾರುತಿ ತಾತ, ಮತ್ತು ಎಚ್.ವೀರಾಪುರ ಜಡೇಶ ತಾತ, ರಾಮನ ಗೌಡ ತಾತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts