More

    ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿ ಸರಳ ವಿವಾಹ

    ಮೈಸೂರು: ಮಹಾಮಾರಿ ಕರೊನಾ ವೈರಸ್​ ವಿರುದ್ಧ ಹೋರಾಡಲು ಸಮರ್ಥ ವೈದ್ಯಕೀಯ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಅದಕ್ಕಿಂತಲೂ ಮಿಗಿಲಾಗಿ ಮಾನವೀಯತೆ ಮುಖ್ಯ. ಅದನ್ನು ಮರೆತರೆ ಇಡೀ ಭೂಮಿ ನರಕವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

    ಖುಷಿಯ ವಿಚಾರವೇನೆಂದರೆ ಮಾನವೀಯತೆ ಸಂಪೂರ್ಣ ಮರೆಯಾಗಿಲ್ಲ. ಕೆಲವರ ರೂಪದಲ್ಲಿ ಇನ್ನು ಜೀವಂತವಾಗಿಯೇ ಇದೆ. ಮಾನವೀಯತೆ ಪ್ರದರ್ಶಿಸಲು ಉದಾರ ಮನಸ್ಸಿರಬೇಕು. ಆ ಉದಾರತೆಯನ್ನು ಪಿರಿಯಾಪಟ್ಟಣ ತಾಲೂಕಿನ ಬಿ.ಜೆ.ದೇವರಾಜು ಎಂಬುವರು ಪ್ರದರ್ಶಿಸಿದ್ದಾರೆ.

    ಹೌದು. ಮದುವೆ ಹಣವನ್ನು ಕೋವಿಡ್ ನಿರ್ವಹಣೆಗೆ ನೀಡಿ ದೇವರಾಜು ಕುಟುಂಬ ಮಾನವೀಯತೆ ಮೆರೆದಿದ್ದಾರೆ. ಮಗನ ಮದುವೆಗೆಂದು ದೇವರಾಜು ಕುಟುಂಬ 2 ಲಕ್ಷ ರೂಪಾಯಿ ಹಣ ಕೂಡಿಟ್ಟಿದ್ದರು. ಇದೀಗ ಆ ಹಣವನ್ನು ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿದೆ.

    ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಅವರಿಗೆ ದೇವರಾಜು ಕುಟುಂಬ ನಿನ್ನೆ ನಡೆದ ಸರಳ ವಿವಾಹ ಸಮಾರಂಭದ ವೇಳೆ ಹಸ್ತಾಂತರಿಸಿದೆ. ಬಿ.ಡಿ. ರತನ್ ಗೌಡ ಹಾಗೂ ಸೋನುಗೌಡ ಅವರ ಸರಳ ವಿವಾಹ ನಿನ್ನೆ ಸರಳವಾಗಿ ಜರುಗಿದೆ.

    ಈ ವೇಳೆ ಮಾತನಾಡಿದ ಶಾಸಕ ಕೆ. ಮಹದೇವ್​, ಶ್ರೀಮಂತರೆಲ್ಲ ಇದೇ ಮಾದರಿಯನ್ನು ಅನುಸರಿಸಲಿ ಎಂದರು. ಅಲ್ಲದೆ, ನವಜೋಡಿಗೆ ಶುಭ ಹಾರೈಸಿದರು. (ದಿಗ್ವಿಜಯ ನ್ಯೂಸ್​)

    ‘ಮೂರ್ಖ ವಿಜ್ಞಾನ’ ವಿವಾದದಿಂದ ಕ್ರೈಸ್ತ ಧರ್ಮದ ಪ್ರಚಾರದವರೆಗೆ…

    ಕರೊನಾದಿಂದ ತಾಯಿ ಮೃತಪಟ್ಟ ಸುದ್ದಿ ಕೇಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಮಗ!

    ಧೋನಿಯೊಂದಿಗಿನ ಬಾಂಧವ್ಯವನ್ನು ಎರಡೇ ಪದದಲ್ಲಿ ವಿವರಿಸಿದ ಕೊಹ್ಲಿಗೆ ನೆಟ್ಟಿಗರ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts