More

    ದಸರಾ ವಿಶೇಷ: ಮೈಸೂರು ಗಡಿ ತಲುಪಿವೆ ಗಜಪಡೆ- ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ

    ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಗುರುವಾರ ಆಗಮಿಸಿದೆ. ಆನೆಗಳ ಆಗಮನದೊಂದಿಗೆ ದಸರಾ ಚಟುವಟಿಕೆಗಳು ನಿಧಾನವಾಗಿ ಶುರುವಾಗಿವೆ.

    ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಸರಳ ದಸರಾವನ್ನು ಬಹಳ ಎಚ್ಚರಿಕೆಯಿಂದ ಸುರಕ್ಷಿತವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಹೆಚ್ಚು ಜನಸಂದಣಿ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುವುದು.
    ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ

    ನಾಡಹಬ್ಬ ದಸರಾದ ವಿಶೇಷ ಆಕರ್ಷಣೆ ಜಂಬೂಸವಾರಿ. ಇದರಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪ್ರವೇಶ ದ್ವಾರದ ಬಳಿ ಬರಮಾಡಿಕೊಳ್ಳಲಾಗಿದೆ. ಸಂಪ್ರದಾಯದಂತೆ ತುಲಾ ಲಗ್ನದಲ್ಲಿ ಬೆಳಗ್ಗೆ 10.10ರಿಂದ 11 ಗಂಟೆಯ ಸಮಯದಲ್ಲಿ ದಸರಾ ಆನೆಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪುಷ್ಪಾರ್ಚನೆ ಸಲ್ಲಿಸಿ ಗಜಪಯಣಕ್ಕೆ ಚಾಲನೆ ನೀಡಿದರು. ಜಿಲ್ಲಾ ಎಸ್ಪಿ ರಿಷ್ಯಂತ್, ಜಿಪಂ ಸಿಇಒ ಡಿ.ಭಾರತಿ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್​ರಾಮ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮತ್ತಿತರ ಹಿರಿಯ ಅರಣ್ಯ ಅಧಿಕಾರಿಗಳು ಹಾಜರಿದ್ದರು.

    ಇದನ್ನೂ ಓದಿ: VIDEO | ಐಪಿಎಲ್ ಪಂದ್ಯದ ವೇಳೆ ಚೆಂಡಿಗೆ ಎಂಜಲು ಹಚ್ಚಿ ಎಡವಟ್ಟು ಮಾಡಿದ ರಾಬಿನ್​ ಉತ್ತಪ್ಪ!

    ಕೋವಿಡ್ ಕಾರಣಕ್ಕೆ ಸರಳ ದಸರಾ ಆಯೋಜಿಸುತ್ತಿರುವ ಕಾರಣ ಗಜಪಯಣಕ್ಕೆ ಚಾಲನೆ ನೀಡುವ ಕಾರ್ಯವೂ ಸಾಂಕೇತಿಕವಾಗಿತ್ತು. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಹೊಸ ಸಾರಥಿ ಅಭಿಮನ್ಯು(54) ಸೇರಿ ವಿಜಯ(61), ಕಾವೇರಿ(42), ಗೋಪಿ(38) ಹಾಗೂ ವಿಕ್ರಮ(47) ಆನೆಗಳು ಮಾತ್ರ ಮೈಸೂರಿಗೆ ಪಯಣ ಬೆಳೆಸಿದವು. ಲಾರಿಯಲ್ಲಿ ಬಂದ ಉಳಿದ ಆನೆಗಳು ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟಿವೆ.

    ಇದನ್ನೂ ಓದಿ: ಮನುಷ್ಯರ ಉಳಿವಿಗೆ ಮತ್ಸ್ಯಬಲಿ..! ಐದು ಲಕ್ಷ ಶಾರ್ಕ್​ಗಳಿಗೆ ಡೆಡ್ಲಿ ಶಾಕ್​!?

    ಅರಮನೆ ಆವರಣಕ್ಕೆ ನಾಳೆ ಪ್ರವೇಶ: ಗಜಪಯಣ ಆರಂಭಿಸಿರುವ ಆನೆಗಳು ಮೈಸೂರು ಅರಮನೆ ಅಂಗಳವನ್ನು ಶುಕ್ರವಾರ ಪ್ರವೇಶಿಸಲಿವೆ. ತನ್ನಿಮಿತ್ತ ಮೈಸೂರು ಅರಮನೆ ಮಂಡಳಿ ವತಿಯಿಂದ ದಸರಾ ಗಜಪಡೆಗೆ ಸ್ವಾಗತ ಕಾರ್ಯಕ್ರಮ ಮಧ್ಯಾಹ್ನ 12.18ರಿಂದ 12.40ರ ವರೆಗೆ ಧನುರ್ ಲಗ್ನದಲ್ಲಿ ನೆರವೇರಲಿದೆ. ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಬರಮಾಡಿಕೊಳ್ಳಲಿದ್ದಾರೆ.

    ದೆಹಲಿಯಲ್ಲಿಳಿತು ಗಣ್ಯರ ವಿಮಾನ ಏರ್​ ಇಂಡಿಯಾ ಒನ್ ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts