More

    ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳಿಗೆ ದಾಖಲೆ ಸಮೇತ ಸಾಕ್ಷಿ ನೀಡಲು ಸಾರಾ ಮಹೇಶ್​ ಹಾಜರು

    ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮೈಸೂರು ಜಿಲ್ಲಾಧಿಕಾರಿ ಸ್ಥಾನದಿಂದ ಹಿಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆಯಾಗಿ ವರ್ಗಾವಣೆಯಾಗುವ ಮೂಲಕ ಮೈಸೂರನ್ನೇ ಬಿಟ್ಟು ಬೆಂಗಳೂರಿಗೆ ಬಂದಿದ್ದರೂ ಸಿಂಧೂರಿ ವಿರುದ್ಧ ಸಾರಾ ಮಹೇಶ್ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.

    ಅಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ತಾವೂ ಮಾಡಿದ್ದ ಆರೋಪಗಳಿಗೆ ದಾಖಲೆಗಳ ಸಮೇತ ಸಾಕ್ಷಿ ನೀಡಲು ಬೆಂಬಲಿಗರು ಹಾಗೂ ವಕೀಲರೊಂದಿಗೆ ಸಾರಾ ಮಹೇಶ್​ ಅವರು ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. 5 ಪ್ರಕರಣಗಳ ಕುರಿತ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪುಟಗಳ ದಾಖಲೆಯೊಂದಿಗೆ ಡಿಸಿ ಕಚೇರಿಯ ಸಭಾಂಗಣದಲ್ಲಿ ಅಧಿಕಾರಿಗಳ ಮುಂದೆ ಸಾರಾ ಮಹೇಶ್​ ಹಾಜರಾಗಿದ್ದಾರೆ.

    ಚಾಮರಾಜನಗರ ಆಕ್ಸಿಜನ್ ದುರಂತ, ಸ್ವಿಮ್ಮಿಂಗ್ ಪೂಲ್ ನಿರ್ಮಾಣ, ಬಟ್ಟೆ ಬ್ಯಾಗ್ ಹಗರಣ, ಹೆರಿಟೇಜ್ ಬಿಲ್ಡಿಂಗ್ ನವೀಕರಣ ಹಾಗೂ ಕೋವಿಡ್​ನಿಂದ ಮೃತಪಟ್ಟ ಸಾವಿನ ಸಂಖ್ಯೆಯ ತಪ್ಪು ಮಾಹಿತಿ ಬಗ್ಗೆ ಸಾರಾ ಮಹೇಶ್​ ವರದಿ ತಂದಿದ್ದು, ಡಿಸಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗಾಗಿ ಕಾದು ಕುಳಿತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಬೆಂಗಳೂರಲ್ಲಿ ಸರ್ಕಾರಿ ಶಾಲೆಯನ್ನೇ ಮಾರಾಟಕ್ಕಿಟ್ಟ ಸರ್ಕಾರ?

    ಪೊಲೀಸ್​ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಹಾರಿ ಹೋಗಿ ಬಿದ್ದ ಬೈಕ್​ ಸವಾರ: ಸಿಸಿಟಿವಿಯಲ್ಲಿ ವಿಡಿಯೋ ಸೆರೆ

    ಪ್ರಿಯಕರನನ್ನು ನಂಬಿ ಸರ್ವಸ್ವವನ್ನು ಅರ್ಪಿಸಿದ ಪ್ರೇಯಸಿ: ಗರ್ಭಪಾತ ಮಾಡಿಸಿಕೊಳ್ಳುವಾಗ ನಡೆಯಿತು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts