More

    ಮೈಶುಗರ್ ಗ್ರಹಚಾರ ಇನ್ನೂ ಸರಿಯಾಗಿಲ್ಲ: ಸಿಎಂ ಏನ್ ಹೇಳ್ತಾರೆ ಅನ್ನೋ ಕುತೂಹಲ ಎಲ್ರಿಗೂ…

    ಬೆಂಗಳೂರು: ರೋಗಗ್ರಸ್ತ ಸಕ್ಕರೆ ಕಾರ್ಖಾನೆ ಮೈಶುಗರ್ ಕಂಪನಿಯ ಗ್ರಹಚಾರ ಇನ್ನೂ ಸರಿಯಾಗಿಲ್ಲ. ಈ ಕಾರ್ಖಾನೆಗೆ ಸಂಬಂಧಿಸಿದವರ ಎಲ್ಲರ ಗಮನವೂ ಈಗ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನೆಟ್ಟಿದೆ. ಅವರೇನು ತೀರ್ಮಾನ ತೆಗೆದುಕೊಳ್ಳುವರು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹಾಗೂ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಇಂದು ಮೈಶುಗರ್ ಸಕ್ಕರೆ ಕಂಪನಿಯ ಕುರಿತ ಸಭೆ ನಡೆಯಿತು. ಅಲ್ಲಿ, ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಸರ್ಕಾರದ ನಿರ್ಣಯ ಚರ್ಚೆಗೊಳಗಾಯಿತು. ಆ ನಿರ್ಣಯವನ್ನು ಹಿಂಪಡೆಯಬೇಕು ಎಂಬುದು ಜಿಲ್ಲೆಯ ಶಾಸಕರು, ರೈತ ಮುಖಂಡರ ಆಗ್ರಹ. ಹೀಗಾಗಿ ಮೈಶುಗರ್ ಸಕ್ಕರೆ ಕಂಪೆನಿ ವಿಚಾರ ಇಂದೂ ಬಗೆಹರಿದಿಲ್ಲ.

    ಇದನ್ನೂ ಓದಿ: VIDEO: ವಿದ್ಯಾರ್ಥಿಗಳೇ ಚಿಂತೆ ಬಿಟ್ಟು ಓದಿನೆಡೆಗೆ ಗಮನಹರಿಸಿ: ವಿಜಯವಾಣಿ ಫೋನ್​ ಇನ್​ ಕಾರ್ಯಕ್ರಮದಲ್ಲಿ ಪ್ರೊ.ಸಿದ್ದು ಅಲಗೂರು

    ಸರ್ಕಾರ ಕೇವಲ 10-12 ಕೋಟಿ ರೂ. ಕೊಟ್ಟರೆ ಸಕ್ಕರೆ ಕಾರ್ಖಾನೆ ಆರಂಭ ಮಾಡಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದ್ರೆ ಕಾರ್ಖಾನೆ ನೂರಾರು ಕೋಟಿ ರೂಪಾಯಿ ನಷ್ಟದಲ್ಲಿದೆ. ಕೇವಲ ಕಾರ್ಖಾನೆಯನ್ನು ಮಾತ್ರ ಖಾಸಗಿಯವರಿಗೆ ನೀಡಲು ತೀರ್ಮಾನ ಮಾಡಲಾಗಿದೆ. ಕಾರ್ಖಾನೆಗೆ ಸಂಬಂಧಿಸಿದ ಇತರ ಯಾವುದೆ ಆಸ್ತಿಯನ್ನ ನೀಡುತ್ತಿಲ್ಲ ಎಂದು ಸಚಿವರು ಸಭೆಗೆ ಮಾಹಿತಿ ನೀಡಿದ್ದಾರೆ. ರೈತರ ಹಿತ ಕಾಪಾಡುವುದು ನಮ್ಮ ಉದ್ದೇಶ. ಆದಷ್ಟು ಬೇಗ ಸಕ್ಕರೆ ಕಾರ್ಖಾನೆ ಆರಂಭವಾಗಬೇಕು. ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತಿಳಿಸಿದ್ದಾರೆ.

    ಇದನ್ನೂ ಓದಿ: ನಿರೀಕ್ಷಿಸಿ.. ಇನ್ನೊಂದು ಹಣಕಾಸಿನ ಪ್ಯಾಕೇಜ್​!

    ಸಭೆಯಲ್ಲಿ ಚರ್ಚಿಸಿದ ವಿಚಾರವನ್ನು ಸಿಎಂ ಗಮನಕ್ಕೆ ತರುತ್ತೇವೆ. ಸಿಎಂ ಈ ಬಗ್ಗೆ ನೀಡುವ ಸೂಚನೆಯನ್ನ ಪಾಲಿಸುತ್ತೇವೆ ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಸಭೆಗೆ ತಿಳಿಸಿದ್ದಾರೆ. ವಿಕಾಸ ಸೌಧದಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಸಂಸದೆ ಸುಮಲತಾ, ಶಾಸಕರಾದ ಅನ್ನದಾನಿ, ರವೀಂದ್ರಶ್ರೀಕಂಠಯ್ಯ, ಎಂ. ಶ್ರೀನಿವಾಸ್, ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿ ಗೌಡ, ಶ್ರೀಕಂಠೇಗೌಡ ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.

    ಎಸ್​ಬಿಐ ಗ್ರಾಹಕರಿಗೊಂದು ಸಿಹಿ ಸುದ್ದಿ: ಸಾಲದ ದರ 15 ಮೂಲಾಂಶ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts