More

    ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!

    ಮಂಡ್ಯ: ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ವಿರುದ್ಧ ಕೆಲ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮೈಷುಗರ್ ಕಾರ್ಖಾನೆಯನ್ನು ಒ ಆ್ಯಂಡ್​ ಎಂಗೆ (ಖಾಸಗಿಗೆ ಕಾರ್ಯಾಚರಣೆ ಮತ್ತು ನಿರ್ವಹಣೆ) ನೀಡುವುದು ಉತ್ತಮ ಎಂದು ರಾಜವಂಶಸ್ಥ ಯದುವೀರ್​ ಇತ್ತೀಚೆಗೆ ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ವಿರುದ್ಧ ಕಿಡಿಕಾರಿರುವ ಕೆಲ ಸಂಘಟನೆಗಳ ಮುಖಂಡರು, ಮಹಾರಾಜರು ಜನರಿಗೆ ಸಾರ್ವಜನಿಕ ಆಸ್ತಿಯಾಗಿ ಕೊಟ್ಟು ಹೋಗಿದ್ದಾರೆ. ಅವರ ಮೊಮ್ಮಗ(ಯದುವೀರ್ ಒಡೆಯರ್) ಮೈಷುಗರ್ ಇತಿಹಾಸವನ್ನು ತಿಳಿದುಕೊಳ್ಳಬೇಕು. ನಿರಾಣಿ ಭೇಟಿ ಬಳಿಕ ಯದುವೀರ್ ನಿರ್ಧಾರ ಬದಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿರಿ ಐಜಿಪಿ, ಎಸ್‌ಪಿ ಕಚೇರಿಗೂ ವಕ್ಕರಿಸಿದ ಕರೊನಾ ?

    ಮೈಷುಗರ್ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಖಾಸಗಿಯವರಿಗೆ ವಹಿಸಲು ರಾಜವಂಶಸ್ಥ ಯದುವೀರ್ ಒಡೆಯರ್ ಬೆಂಬಲ ನೀಡುವುದು ಸರಿಯಲ್ಲ. ಸಾರ್ವಜನಿಕ ಆಸ್ತಿ ಉಳಿಯಬೇಕು ಎನ್ನುವ ಯಾರೊಬ್ಬರೂ ಒ-ಎಂ ಬಯಸುವುದಿಲ್ಲ. ಸ್ವಾರ್ಥ- ರಾಜಕಾರಣ ಮನಸ್ಥಿತಿಯುಳ್ಳವರು ಮಾತ್ರವೇ ಒ-ಎಂ ಬೇಕು ಎನ್ನುತ್ತಿದ್ದಾರೆ ಎಂದು ಸಿಐಟಿಯು ಕಾರ್ಯದರ್ಶಿ ಸಿ.ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ.

    ಸಂಸದೆ ಸುಮಲತಾ ಅವರು ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸಂಸದರ ನಿಧಿ ಬಳಸಿಯೇ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಬಹುದಿತ್ತು. ಸರ್ಕಾರದ ಸ್ವಾಮ್ಯದಲ್ಲೇ ಕಾರ್ಖಾನೆ ಉಳಿಯಬೇಕು ಎನ್ನುವುದು ನಮ್ಮ ಒಕ್ಕೊರಲ ಆಗ್ರಹ ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿರಿ ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

    ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts