More

    ಗುರುವಾರ ಪತ್ತೆಯಾಗಿದ್ದವು ನಾಲ್ಕು ಶವಗಳು, ಶುಕ್ರವಾರ ಇನ್ನೈದು! ನಿಗೂಢವಾಗಿದೆ ವಾರಂಗಲ್​ ಕೃಷಿ ಹೊಂಡದ ರಹಸ್ಯ!

    ವಾರಂಗಲ್​: ಇಲ್ಲಿಗೆ ಸಮೀಪದ ಗೀಸುಕೊಂಡ ಎಂಬಲ್ಲಿರುವ ಕೃಷಿ ಹೊಂಡದಲ್ಲಿ ಗುರುವಾರ ನಾಲ್ಕು ಶವಗಳು ಪತ್ತೆಯಾದರೆ, ಶುಕ್ರವಾರ ಮತ್ತೈದು ಶವ ಪತ್ತೆಯಾಗಿ ಸುತ್ತಮುತ್ತ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಕೃಷಿ ಹೊಂಡದ ರಹಸ್ಯ ಸದ್ಯ ಈ ಊರಲ್ಲಿ ಮನೆಮಾತಾಗಿದ್ದು, ನಿಗೂಢತೆಯ ಪರದೆ ಸರಿಸುವವರಾರು ಎಂಬ ಪ್ರಶ್ನೆ ಕಾಡಿದೆ.

    ಮೃತರ ಪೈಕಿ ಆರು ಮಂದಿ ಪಶ್ಚಿಮಬಂಗಾಳದವರಾದರೆ, ಇನ್ನಿಬ್ಬರು ಬಿಹಾರ, ಮತ್ತೊಬ್ಬರು ತ್ರಿಪುರಾದವರು. ಗುರುವಾರ ಕೃಷಿ ಹೊಂಡದಲ್ಲಿ ನಾಲ್ಕು ಶವ ಪತ್ತೆಯಾದಾಗ ಸಹಜವಾಗಿಯೇ ವಾರಂಗಲ್ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಆದರೆ, ಶುಕ್ರವಾರ ಮತ್ತೆ ಐದು ಶವಗಳು ಪತ್ತೆಯಾದಾಗ ಪೊಲೀಸರೂ ವಿಚಲಿತರಾಗಿದ್ದಾರೆ.

    ಇದನ್ನೂ ಓದಿ: ಹಾವು ಕಚ್ಚಿ ಮೃತಪಟ್ಟ ಮಹಿಳೆಯ ಸಾವಿನ ಸುತ್ತ ಅನುಮಾನದ ಹುತ್ತ: ಚಿನ್ನಾಭರಣವೂ ನಾಪತ್ತೆ!

    ಒಂಭತ್ತು ಮೃತರ ಪೈಕಿ ಆರು ಜನ ಒಂದೇ ಕುಟುಂಬದವರು. ಮೊಹಮ್ಮದ್ ಮಕ್ಸೂದ್​ ಆಲಂ (56) ಕುಟುಂಬದ ಹಿರಿಯನಾಗಿದ್ದು, ಈತ ಸ್ಥಳೀಯ ಬ್ಯಾಗ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ. ಈ ಘಟಕ ಈ ಕೃಷಿ ಹೊಂಡದ ಸಮೀಪವೇ ಇದೆ. ಇನ್ನುಳಿದವರನ್ನು ಆಲಂ ಅವರ ಪತ್ನಿ ನಿಶಾ (48), ಮಗಂದಿರಾದ ಸೊಹೈಲ್ ಆಲಂ (20), ಶಾಬಾದ್ ಆಲಂ(21), ಮಗಳು ಬುಷ್ರಾ (24), ಮೂರು ವರ್ಷದ ಮೊಮ್ಮಗು ಎಂದು ಗುರುತಿಸಲಾಗಿದೆ. ಈ ಆರು ಮಂದಿಯನ್ನು ಬಿಟ್ಟರೆ ತ್ರಿಪುರಾದವರಾದ ಶಕೀಲ್ ಅಹಮದ್​ (40), ಬಿಹಾರದವರಾದ ಶ್ರೀರಾಮ್​(35), ಶ್ಯಾಮ್ (40) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಕ್ವಾರಂಟೈನ್​ನಲ್ಲಿದ್ದ ಗೆಳೆಯನಿಗೆ ಹಲ್ವಾ ತಗೊಂಡು ಹೋದವನನ್ನು ಹುಡುಕುತ್ತಿದ್ದಾರೆ ಪೊಲೀಸರು!

    ಮೂಲಗಳ ಪ್ರಕಾರ, ಕಳೆದ 20 ವರ್ಷಗಳಿಂದ ಆಲಂ ಕುಟುಂಬ ಇಲ್ಲೇ ನೆಲೆ ಇದ್ದು ಕೆಲಸ ಮಾಡುತ್ತಿದೆ. ಅವರು ಪಟ್ಟಣದ ಕರೀಮಾಬಾದ್​ನಲ್ಲಿ ನೆಲೆಸಿದ್ದರು. ಲಾಕ್​ಡೌನ್ ಚಾಲ್ತಿಗೆ ಬಂದ ಮೇಲೆ ಈ ಕುಟುಂಬ ಈ ಉತ್ಪಾದನಾ ಘಟಕದ ಒಂದು ಚಿಕ್ಕ ಕೊಠಡಿಯಲ್ಲಿ ವಾಸವಿತ್ತು. ಆಲಂ ಪುತ್ರಿ ಬುಷ್ರಾ ವಿಚ್ಚೇಧಿತೆಯಾಗಿದ್ದು, ತಂದೆಯ ಜತೆಗೆ ಇದ್ದಳು. ಈ ಕುಟುಂಬಕ್ಕೆ ಹೊರತಾದ ಮೂವರು ಅದೇ ಉತ್ಪಾದನಾ ಘಟಕದ ಬೇರೊಂದು ಕೊಠಡಿಯಲ್ಲಿ ವಾಸವಿದ್ದರು.

    ಇದನ್ನೂ ಓದಿ: PHOTOS/VIDEO| ಯುವತಿಯರ ಹೃದಯಚೋರ ಈ ಲಿಪ್​ಸ್ಟಿಕ್​ ಕಿಂಗ್​- ಈತನ ಸಿಂಗಲ್ಸ್​ ವಹಿವಾಟು 1,100 ಕೋಟಿ ರೂಪಾಯಿ!

    ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತಿಲ್ಲ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂದೇಹವಿದ್ದು, ಆದರೆ ಅದನ್ನು ಖಚಿತ ಪಡಿಸುವ ಸಾಕ್ಷ್ಯಗಳಿಲ್ಲ. ಹಣಕಾಸಿನ ಸಮಸ್ಯೆ ಬಂದ ಕಾರಣ ಹೀಗೆ ಮಾಡಿಕೊಂಡಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದುವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಪ್ರಕರಣದ ನಿಗೂಢತೆ ಹಾಗೆಯೇ ಉಳಿದಕೊಂಡಿದೆ. (ಏಜೆನ್ಸೀಸ್)

    ವಿಮಾನ ಬಿದ್ದಾಗ ಛಿದ್ರಗೊಂಡ ಶರೀರವೊಂದು ನನ್ನ ಕಾರಿನ ಮೇಲೆಯೇ ಬಿತ್ತು: ಪ್ರತ್ಯಕ್ಷದರ್ಶಿಯ ವಿವರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts