More

    ಚೀನಾ ಶಿಬಿರದಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಬೆಂಕಿ ಗಲ್ವಾನ್​ ಘರ್ಷಣೆಗೆ ಕಿಚ್ಚಾಯಿತು

    ನವದೆಹಲಿ: ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ನಡೆದ ಭಾರತ ಮತ್ತು ಚೀನಿ ಯೋಧರ ನಡುವಿನ ರಕ್ತಸಿಕ್ತ ಘರ್ಷಣೆಗೆ ಚೀನಾ ಪಾಳೆಯದ ಶಿಬಿರದಲ್ಲಿ ನಿಗೂಢವಾಗಿ ಕಾಣಿಸಿಕೊಂಡ ಬೆಂಕಿ ಕಾರಣವಾಯಿತು ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್​ ಹೇಳಿದ್ದಾರೆ.

    ಈ ಘರ್ಷಣೆಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿರುವುದಾಗಿ ಪುನರುಚ್ಚರಿಸಿದ ಅವರು, ಕಮಾಂಡರ್​ ಮಟ್ಟದ ಸಭೆಯಲ್ಲಿ ವಾಸ್ತವ ಗಡಿರೇಖೆಯಲ್ಲಿ ಯೋಧರು ಯಾರೂ ಇರಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ, ತಮ್ಮ ಭಾಗದ ಪ್ರದೇಶದಲ್ಲಿ ಭಾರತೀಯ ಯೋಧರು ಇದನ್ನು ಪರಿಶೀಲಿಸಲು ಹೋದಾಗ, ಅಲ್ಲಿ ಚೀನಾ ಯೋಧರು ಇರುವುದು ಪತ್ತೆಯಾಯಿತು. ಜತೆಗೆ, ಅಲ್ಲೊಂದು ಟೆಂಟ್​ ಹಾಕಿರುವುದು ಗೊತ್ತಾಯಿತು ಎಂದು ವಿವರಿಸಿದ್ದಾರೆ.

    ಆ ಟೆಂಟ್​ ಅನ್ನು ತೆಗೆದು ಹಾಕುವಂತೆ ಭಾರತದ ಕಮಾಂಡಿಂಗ್​ ಆಫೀಸರ್​ ಹೇಳಿದ್ದರು. ಅದರಂತೆ ಅವರು ಟೆಂಟ್​ ತೆಗೆಯುವಾಗ ಹಠಾತ್ತನೆ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದು ಉಭಯ ರಾಷ್ಟ್ರದ ಯೋಧರ ನಡುವಿನ ಘರ್ಷಣೆಗೆ ಕಾರಣವಾಯಿತು ಎಂದು ಹೇಳಿದ್ದಾರೆ.

    ‘ಕೊವಿಡ್​-19 ಸೋಂಕನ್ನು ಜಗತ್ತಿಗೆ ಕಳಿಸಿದ್ದು ಭಗವಾನ್​ ಶ್ರೀಕೃಷ್ಣ…’: ಕಾಂಗ್ರೆಸ್​ ಮುಖಂಡನ ವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts