More

    ಮೈಸೂರು ನಗರದಲ್ಲಿ ಮಳೆರಾಯನ ಆರ್ಭಟ

    ಧರೆಗುರುಳಿದ ಮರಗಳು, 4 ದ್ವಿಚಕ್ರ ವಾಹನಗಳು ಜಖಂ

    ಮೈಸೂರು: ಬಿರು ಬಿಸಲಿಗೆ ತಂಪೆರೆದ ಮಳೆರಾಯನ ಆರ್ಭಟಕ್ಕೆ ಹಲವೆಡೆ ಮರಗಳು ಧರೆಗುರುಳಿವೆ. ಮಹಿಳಾ ಹೋಂಗಾರ್ಡ್ ಒಬ್ಬರು ಗಾಯಗೊಂಡಿದ್ದು, ನಾಲ್ಕು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
    ಭಾನುವಾರ ರಾತ್ರಿ ಸುರಿದ ಮಳೆಯಿಂದ ನಗರದ ಹಾರ್ಡಿಂಜ್ ವೃತ್ತದಲ್ಲಿ ಬೃಹತ್ ಗಾತ್ರದ ಗುಲ್‌ಮೊಹರ್ ಮರ ಬುಡಸಮೇತ ಉರುಳಿ ಬಿದ್ದಿದೆ. ಈ ವೇಳೆ ಮರದ ಬಳಿಯೇ ಕುಳಿತಿದ್ದ ಹೋಂ ಗಾರ್ಡ್‌ಗಳಾದ ಛಾಯಾದೇವಿ, ನರಸಮ್ಮ ಅವರು ಮರ ಬೀಳುವ ಶಬ್ಧ ಕೇಳಿ ಅಲ್ಲಿಂದ ದೂರ ಓಡಿದ್ದಾರೆ. ಆದರೂ ಛಾಯಾದೇವಿ ಅವರ ಬೆನ್ನಿಗೆ ಮರದ ರೆಂಬೆ ತಾಗಿ ಸ್ವಲ್ಪ ಗಾಯವಾಗಿದೆ.
    ಮರ ಬಿದ್ದ ರಭಸಕ್ಕೆ ಮರದ ಕೆಳಗೆ ನಿಲ್ಲಿಸಿದ್ದ ದೇವರಾಜ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಮಹೇಶ್, ಪೇದೆ ಆನಂದ್ ಬಿ.ವಾಲಿ, ಹೋಂ ಗಾರ್ಡ್‌ಗಳಾದ ಛಾಯಾದೇವಿ, ನರಸಮ್ಮ ಅವರಿಗೆ ಸೇರಿದ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಸ್ಥಳಕ್ಕಾಗಮಿಸಿದ ಪಾಲಿಕೆಯ ಅಭಯ ತಂಡ ಮರ ತೆರವುಗೊಳಿಸಿತು.
    ನಗರ ಬಸ್ ನಿಲ್ದಾಣದ ಆವರಣದಲ್ಲಿಯೂ ಮರದ ರೆಂಬೆ ಬಿದ್ದಿದೆ. ಆದರೆ ನಿಲ್ದಾಣದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ. ಸಿದ್ದಾರ್ಥ ಬಡಾವಣೆ 8ನೇ ಕ್ರಾಸ್ ಸನ್ಮಾರ್ಗ, ಮಾನಸಗಂಗೋತ್ರಿಯ ಎಸ್‌ಜೆಸಿಇ (ಚದುರಂಗ) ರಸ್ತೆಯಲ್ಲಿಯೂ ಮರದ ರೆಂಬೆ, ಕೊಂಬೆಗಳು ಮುರಿದು ಬಿದ್ದು, ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಕುವೆಂಪುನಗರ, ವಿವೇಕಾನಂದನಗರ, ರಾಮಕೃಷ್ಣನಗರ, ಅಶೋಕಪುರಂ ಸೇರಿದಂತೆ ಹಲವು ಕಡೆಗಳಲ್ಲಿ ಬಿರುಗಾಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಸೆಸ್ಕ್, ನಗರಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ಬಳಿಕ ವಿದ್ಯುತ್ ಸಂಪರ್ಕ ದೊರೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts