More

    ಪರಿಸರ ಮಾಲಿನ್ಯದಿಂದ ಜೀವ ಸಂಕುಲಕ್ಕೆ ತೊಂದರೆ

    ಪಿರಿಯಾಪಟ್ಟಣ: ಪರಿಸರ ಸಂರಕ್ಷಣೆಯಲ್ಲಿ ಹಿನ್ನಡೆ ಉಂಟಾದಲ್ಲಿ ಜೀವ ಸಂಕುಲದ ಮೇಲೆ ಅಗಾಧವಾದ ದುಷ್ಪರಿಣಾಮ ಉಂಟಾಗಲಿದೆ ಎಂದು ಶಾಸಕ ಕೆ.ಮಹದೇವ್ ಆತಂಕ ವ್ಯಕ್ತಪಡಿಸಿದರು.
    ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ಪಟ್ಟಣದ ನೂತನ ಪುರಸಭಾ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರ ಅನೈರ್ಮಲ್ಯದಿಂದ ಮಾನವನು ರೋಗ ನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
    ಜನರು ಹಾಗೂ ರೈತರು ಮನೆ ಅಕ್ಕಪಕ್ಕದ ಜಾಗದಲ್ಲಿ ಮತ್ತು ಜಮೀನುಗಳಲ್ಲಿ ಗಿಡ ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.
    ಪುರಸಭಾ ಸದಸ್ಯರಾದ ಪಿ.ಸಿ.ಕೃಷ್ಣ, ಪ್ರಕಾಶ್ ಸಿಂಗ್, ಭಾರತಿ, ತಹಸೀಲ್ದಾರ್ ಶ್ವೇತಾ.ಎನ್.ರವೀಂದ್ರ, ತಾಪಂ ಇಒ ಡಿ.ಸಿ.ಶ್ರುತಿ, ಬಿಇಒ ಚಿಕ್ಕಸ್ವಾಮಿ, ಪುರಸಭಾ ಮುಖ್ಯಾಧಿಕಾರಿ ಚಂದ್ರಕುಮಾರ್ ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts