More

    ಗಿಡ ನೆಟ್ಟು ಹುಟ್ಟುಹಬ್ಬ ಆಚರಿಸಿ

    ಹುಣಸೂರು: ಗಿಡ ನೆಡುವ ಮೂಲಕ ಯುವ ಜನರು ಹುಟ್ಟುಹಬ್ಬ ಆಚರಿಸುವ ಮೂಲಕ ಪ್ರಕೃತಿ ಉಳಿಸುವ ಕೆಲಸ ಮಾಡಲಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸಲಹೆ ನೀಡಿದರು.
    ತಾಲೂಕು ಕಚೇರಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 36 ಶ್ರೀಗಂಧದ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ನಮಗಾಗಿ ಎನ್ನುವ ಮನೋಭಾವನೆ ನಮ್ಮಿಂದ ದೂರಾಗದ ಹೊರತು ಪರಿಸರ ನಾಶ ಮುಂದುವರಿಯಲಿದೆ. ಈ ಪ್ರಕೃತಿಗಾಗಿ ನಾವು ಇದುವರೆಗೆ ಏನನ್ನೂ ನೀಡಿಲ್ಲ. ಇಲ್ಲಿಯವರೆಗೆ ನಾವು ಮಾಡಿದ ತಪ್ಪಿಗೆ ಕ್ಷಮೆಯಾಗಿ ಪ್ರತಿಯೊಬ್ಬರೂ ಸಸಿ ನೆಟ್ಟು ಭೂಮಾತೆಗೆ ತಲೆಬಾಗಬೇಕಿದೆ ಎಂದು ಹೇಳಿದರು.
    ಯುವಕರು ಕೇಕ್ ಕತ್ತರಿಸುವ, ಪಾರ್ಟಿ ನಡೆಸುವ ಮೂಲಕ ಹುಟ್ಟುಹಬ್ಬ ಆಚರಿಸುವ ಬದಲಾಗಿ ಸಸಿ ನೆಡುವ, ನೆಟ್ಟು ಪೋಷಿಸುವ ಕಾರ್ಯ ನಡೆಸಬೇಕು. ಯುವಕರು ಮನಸು ಮಾಡಿದರೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ವಿಶ್ವವನ್ನೇ ಕಾಡುತ್ತಿರುವ ಕರೊನಾದೊಂದಿಗೆ ನಮ್ಮ ಜೀವನ ಸಾಗಬೇಕಿದೆ. ದೈಹಿಕ ಅಂತರ ಕಾಯ್ದುಕೊಳ್ಳುವುದೊಂದೇ ಇದಕ್ಕೆ ದಾರಿ. ಶಿಸ್ತಿನ ಜೀವನದೊಂದಿಗೆ ಕರೊನಾ ತೊಲಗಿಸಬೇಕು ಎಂದು ಹೇಳಿದರು.
    ಉಪವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಸೀಲ್ದಾರ್ ಐ.ಇ.ಬಸವರಾಜ, ಆರ್‌ಎಫ್‌ಒ ರುದ್ರೇಶ್, ಡಿಆರ್‌ಎಫ್‌ಒ ಸಂಪತ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts