More

    ವಿಧಾನಸಭೆ ಚುನಾವಣೆ: ಕರ್ತವ್ಯ, ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಲು ಮೈಸೂರು ಡಿಸಿ ಸೂಚನೆ

    ವಿಧಾನಸಭೆ ಚುನಾವಣಾ ಪ್ರಕ್ರಿಯೆಯಲ್ಲಿ ಸೆಕ್ಟರ್ ಅಧಿಕಾರಿಗಳ ಕೆಲಸ ಪ್ರಮುಖವಾಗಿದ್ದು ಅವರ ಕರ್ತವ್ಯ ಮತ್ತು ಜವಾಬ್ದಾರಿ ಅರಿತು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ನಿರ್ದೇಶನ ನೀಡಿದರು.

    ವಿಧಾನಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಂಜನಗೂಡು ಕ್ಷೇತ್ರ ಮತ್ತು ವರುಣ ಕ್ಷೇತ್ರಗಳ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಸ್ಟಾಟಿಸ್ಟಿಕ್ ಸರ್ವೇಲೆನ್ಸ್ ತಂಡದ ಸದಸ್ಯರುಗಳು ನಿರ್ವಹಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಕುರಿತು ನಂಜನಗೂಡಿನ ರಿಟರ್ನಿಂಗ್ ಆಫೀಸರ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದರು.

    ಸಮಸ್ಯೆ ಬಗೆ ಹರಿಸಿ

    ಸೆಕ್ಟರ್ ಅಧಿಕಾರಿಗಳು ಬೂತ್‌ಲೆವೆಲ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಏನಾದರೂ ಸಮಸ್ಯೆಗಳು ಕಂಡು ಬಂದಲ್ಲಿ ಪರಿಹರಿಸ ಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಮತ್ತು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರಿಸಲು ಏ.11 ರವರೆಗೆ ಅವಕಾಶವಿದ್ದು, ತಡ ಮಾಡದೆ ಅರ್ಜಿಗಳನ್ನು ಸ್ವೀಕರಿಸಿ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಮತದಾರರ ಪಟ್ಟಿಯಿಂದ ಹೆಸರುಗಳು ಕೈ ಬಿಟ್ಟು ಹೋಗದಂತೆ ಮತ್ತು ಮೃತಪಟ್ಟವರ ಪಟ್ಟಿಯ ಬಗ್ಗೆ ಗಮನಹರಿಸಬೇಕು. 80 ವರ್ಷ ಮೇಲ್ಪಟ್ಟಿದ್ದು ಮತಗಟ್ಟೆಗೆ ಬಂದು ಮತ ಹಾಕಲು ಸಾಧ್ಯವಾಗದವರಿಗೆ 12 ಡಿ ಮೂಲಕ ಮತದಾನ ಮಾಡಲು ಅವಕಾಶವಿದೆ. ಸಿ-ವಿಜಿಲ್ ಮೂಲಕ ದಾಖಲಾದ ದೂರುಗಳಿಗೆ ನೂರು ನಿಮಿಷಗಳಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ವಲ್ನರಬಲ್ ಹಾಗೂ ಕ್ರಿಟಿಕಲ್ ಪೋಲಿಂಗ್ ಸ್ಟೇಷನ್‌ಗಳನ್ನು ಗುರುತಿಸಿದ್ದು, ಅವುಗಳ ಸರಿಯಾದ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಗಮನಹರಿಸ ಬೇಕು ಎಂದರು.

    ಸೌಲಭ್ಯ ಒದಗಿಸಿ

    ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಗೃಹ, ವಿದ್ಯುತ್, ರ‌್ಯಾಂಪ್, ಫ್ಯಾನ್ ಒಳಗೊಂಡಂತೆ ಕನಿಷ್ಠ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು. ಇವಿಎಂ ಮತ್ತು ವಿವಿಪ್ಯಾಟ್‌ಗಳ ನಿರ್ವಹಣೆಯಲ್ಲಿ ಅಥವಾ ಇವುಗಳ ಬಳಕೆಯಲ್ಲಿ ಸಮಸ್ಯೆಯಾದರೆ ರಿಪ್ಲೇಸ್ ಮಾಡಿಕೊಡಲಾಗುವುದು. ಎಫ್‌ಎಸ್‌ಟಿ ಮತ್ತು ಎಸ್‌ಎಸ್‌ಟಿ ತಂಡದವರಿಗೆ ವಾಹನ ಪೂರೈಕೆ ಮಾಡಲು ಆರ್‌ಒ ಹಾಗೂ ಎಆರ್‌ಒ ಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ ಗಾಯತ್ರಿ, ಪ್ರಾಚ್ಯವಸ್ತು ಸಂಗ್ರಹಾಲಯದ ಆಯುಕ್ತ ದೇವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts