More

    ಭಕ್ತರಿಲ್ಲದೆ ಭಣಗುಡುತ್ತಿದ್ದ ಚಾಮುಂಡಿ ಬೆಟ್ಟ

    ಮೈಸೂರು: ಸಡಗರ, ಸಂಭ್ರಮ ಮೇಳೈಸಬೇಕಿದ್ದ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬರೀ ನೀರವ ವೌನ, ಜನಸಾಗರದಿಂದ ಗಿಜಿಗುಡುತ್ತಿದ್ದ ಪ್ರದೇಶದಲ್ಲಿ ಬಿಕೋ ಎನ್ನುವ ಪರಿಸ್ಥಿತಿ. ಒಟ್ಟಿನಲ್ಲಿ ಕರ್ಯ್ೂ, ಬಂದ್‌ನಂತಹ ಭಣಗುಡುವ ಸನ್ನಿವೇಶ….!


    ಆಷಾಢ ಮಾಸದ ಮೊದಲ ಶುಕ್ರವಾರದಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಕಂಡು ಬಂದ ದೃಶ್ಯಾವಳಿಗಳಿವು. ಇದಕ್ಕೆಲ್ಲ ಮತ್ತೆ ಅದೇ ಕರೊನಾ ಎೆಕ್ಟ್.


    ಆಷಾಢ ಶುಕ್ರವಾರದಂದು ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನರು ಇಲ್ಲಿಗೆ ಲಗ್ಗೆಯಿಡುತ್ತಿದ್ದರು. ದೇವಿಯ ದರ್ಶನಕ್ಕೆ ಭಕ್ತರ ಸರದಿ ಸಾಲು ಹನುಮಂತನ ಬಾಲದಂತೆ ಬೆಳೆದಿರುತ್ತಿತ್ತು. ದೇವಸ್ಥಾನದ ಹೊರಾವರಣದ ಒಂದು ಸುತ್ತಿನವರೆಗೆ ಜನರ ಸರದಿ ಸಾಲು ನೆರೆದಿರುತ್ತಿತ್ತು. ಒಟ್ಟಿನಲ್ಲಿ ಚಾಮುಂಡಿಯ ಅಂಗಳದಲ್ಲಿ ಕಣ್ಣು ಹಾಯಿಸಿದಷ್ಟು ದೂರವೂ ಜನಸಾಗರವೇ ಕಾಣುತ್ತಿತ್ತು. ಮಹಿಷಾಸುರ ವಿಗ್ರಹದಿಂದ ದೇವಸ್ಥಾನದವರೆಗೆ, ದೇವಸ್ಥಾನದ ಸುತ್ತಲಿನ ಪ್ರದೇಶವು ಭಕ್ತರಿಂದಲೇ ತುಂಬಿ ಹೋಗಿರುತ್ತಿತ್ತು. ಅಲ್ಲದೆ, ಬೆಟ್ಟದ ಪ್ರತಿ ಅಂಗಡಿ, ವ್ಯಾಪಾರಿ ಮಳಿಗೆ, ಹೋಟೆಲ್‌ಗಳಲ್ಲೂ ಜನದಟ್ಟಣೆ ಗೋಚರವಾಗುತ್ತಿತ್ತು. ಆದರೆ, ಈ ಸಲ ಇಂತಹ ಜಾತ್ರಾ ಸಂಭ್ರಮ, ಹಬ್ಬದ ಸಡಗರದ ಕ್ಷಣಗಳು ಇಲ್ಲಿ ಕಾಣಲಿಲ್ಲ. ಬದಲಿಗೆ ಇದಕ್ಕೆ ವ್ಯತಿರಿಕ್ತ ಸನ್ನಿವೇಶ ಕಂಡು ಬಂತು.


    ಕರೊನಾ ವೈರಾಣು ಹರಡದಂತೆ ತಡೆಯುವ ಸಲುವಾಗಿ ಚಾಮುಂಡೇಶ್ವರಿ ದೇಗುಲಕ್ಕೆ ಈ ಸಲ ಭಕ್ತರಿಗೆ ಪ್ರವೇಶವನ್ನು ನಿಷೇಸಲಾಗಿದೆ. ಮೆಟ್ಟಿಲು ಸೇರಿ ಬೆಟ್ಟದ ಎಲ್ಲ ರಸ್ತೆಗಳಿಗೆ ಪೊಲೀಸರು ನಾಕಾಬಂದಿ ಹಾಕಿ ಜನರ, ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಸಿದ್ದರು. ಬೆಟ್ಟದ ನಿವಾಸಿಗಳನ್ನು ಬಿಟ್ಟು ಯಾರಿಗೂ ಪ್ರವೇಶ ನೀಡಲಿಲ್ಲ. ಹೀಗಾಗಿ, ಭಕ್ತರಿಗೆ ದೇವಿಯ ದರ್ಶನ ಪಡೆದು ಪುನೀತರಾಗುವ ಅವಕಾಶ ಸಿಗಲಿಲ್ಲ. ಇದು ಅನೇಕ ಭಕ್ತರಲ್ಲಿ ನಿರಾಶೆ ಮೂಡಿಸಿತು.


    ಶತಮಾನದ ಬಳಿಕ ಭಕ್ತರ ಅನುಪಸ್ಥಿತಿಯಲ್ಲಿ ತಾಯಿ ಚಾಮುಂಡೇಶ್ವರಿಗೆ ಆಷಾಢ ಶುಕ್ರವಾರದ ವಿಶೇಷ ಪೂಜೆಯನ್ನು ಅರ್ಪಿಸಲಾಯಿತು. ವಿವಿಧ ಬಗೆಯ ಪೂಜಾ ಕೈಂಕರ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು. ಪ್ರತಿ ವರ್ಷದ ಅದ್ದೂರಿತನ ಈ ಬಾರಿ ತೆರೆಮರೆಗೆ ಸರಿಯಿತು.


    ಆವರಣದಲ್ಲೇ ಉತ್ಸವ: ಬೆಳಗ್ಗೆ 4.30ಕ್ಕೆ ಚಾಮುಂಡಿಬೆಟ್ಟದ ದೇವಾಲಯದ ಬಾಗಿಲು ತೆಗೆದು ದೇವಿಗೆ ಮಹಾನ್ಯಾಸ ಪೂರ್ವಕ ಅಭಿಷೇಕ, ರುದ್ರಾಭಿಷೇಕ, ಅರ್ಚನೆ ಸೇರಿ ನಾನಾ ಧಾರ್ಮಿಕ ಕೈಂಕರ್ಯ ನಡೆಸಲಾಯಿತು. ಬೆಳಗ್ಗೆ 7.20ಕ್ಕೆ ದೇಗುಲದ ಆವರಣದಲ್ಲೇ ತಾಯಿಯ ಉತ್ಸವ ಮೂರ್ತಿಯ ಮೆರವಣಿಗೆ ನೆರವೇರಿಸಲಾಯಿತು. ಬಳಿಕ 8ಗಂಟೆಗೆ ದೇಗುಲದ ಬಾಗಿಲು ಹಾಕಲಾಯಿತು.


    ‘ಜಿಲ್ಲಾಡಳಿತ ಆದೇಶದ ಮೇರೆಗೆ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ಆಷಾಢ ಶುಕ್ರವಾರ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದರು. ಕರೊನಾ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರವೇಶ ನೀಡಲಿಲ್ಲ. ಸಂಪ್ರದಾಯದಂತೆ ಪೂಜೆ ಸಲ್ಲಿಸಿ ದೇವಸ್ಥಾನ ಮುಚ್ಚಲಾಯಿತು’ ಎಂದು ಪ್ರಧಾನ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ತಿಳಿಸಿದರು.


    ‘ಚಾಮುಂಡಿ ಬೆಟ್ಟದ ಇತಿಹಾಸದಲ್ಲಿ ಶತಮಾನದ ಬಳಿಕ ಭಕ್ತರಿಲ್ಲದೆ ಪೂಜೆ ಸಲ್ಲಿಸಲಾಗಿದೆ. 130 ವರ್ಷದ ಹಿಂದೆ ಕಾಲರಾ, ಪ್ಲೇಗ್ ಸಮಯದಲ್ಲಿ ಬೆಟ್ಟಕ್ಕೆ ಸಾರ್ವಜನಿಕರು ಬರಲು ಹಿಂದೇಟು ಹಾಕುತ್ತಿದ್ದರು. ಆಗ ಇದೇ ರೀತಿ ಭಕ್ತರ ಗೈರು ಹಾಜರಿಯಲ್ಲಿ ಆಷಾಡ ಶುಕ್ರವಾರದ ಪೂಜೆ ನಡೆಸಲಾಗಿತ್ತು ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಇದನ್ನು ಹೊರತುಪಡಿಸಿ ಬೆಟ್ಟದ ಇತಿಹಾಸದಲ್ಲಿ ಮೊದಲ ಬಾರಿ ಈ ರೀತಿ ಸನ್ನಿವೇಶ ಎದುರಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts