More

    ಮೈಸೂರು- ಬೆಂಗಳೂರು ನಗರ ತಂಡ ಚಾಂಪಿಯನ್

    ಹಿರಿಯೂರು: ರಾಜ್ಯ ಮಟ್ಟದ ಹೊನಲು ಬೆಳಕಿನ ಖೋ ಖೋ ಅಸೋಸಿಯೇಷನ್ ಕಪ್-2022 ಟೂರ್ನಿಯಲ್ಲಿ ಬೆಂಗಳೂರು ನಗರ ಜಿಲ್ಲಾ ಪುರುಷರ ತಂಡ ಹಾಗೂ ಮೈಸೂರಿನ ಮಹಿಳಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

    ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯವಾದ ಖೋಖೋ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪುರುಷರ ಮತ್ತು ಮಹಿಳಾ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟವು.

    ನ್ಯೂ ಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ರಾಜ್ಯ- ಜಿಲ್ಲಾ ಖೋ ಖೋ ಸಂಸ್ಥೆ ಆಶ್ರಯ ಹಾಗೂ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಸಾರಥ್ಯದಲ್ಲಿ 2 ದಿನಗಳ ಕಾಲ ರಾಜ್ಯಮಟ್ಟದ ಪುರುಷರ- ಮಹಿಳೆಯರ ಹೊನಲು ಬೆಳಕಿನ ಖೋ ಖೋ ಟೂರ್ನಿಯನ್ನು ಆಯೋಜಿಸಿತ್ತು.ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಬೆಂಗಳೂರು ನಗರ ಜಿಲ್ಲಾ ತಂಡ ಬಲಿಷ್ಠ ದಕ್ಷಿಣ ಕನ್ನಡ ಜಿಲ್ಲಾ ತಂಡವನ್ನು 17-15 ಅಂಕಗಳ ಅಂತರದಲ್ಲಿ ಬಗ್ಗು ಬಡಿಯಿತು.

    ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ, ಮುನ್ನಡೆ ಕಾಯ್ದುಕೊಂಡ ಬೆಂಗಳೂರು ನಗರ ಹಾಗೂ ಮೈಸೂರು ಮಹಿಳಾ ತಂಡ ಪ್ರಶಸ್ತಿ ಜಯಿಸಿದವು. ಬಹುಮಾನ ವಿತರಣೆ: ಗೆಲುವು ಪಡೆದ ತಂಡಗಳಿಗೆ ಶಾಸಕಿ ಕೆ.ಪೂರ್ಣಿಮಾ ಟ್ರೋಫಿ ವಿತರಿಸಿದರು.

    ರಾಜ್ಯ ಪ್ರವರ್ಗ 1 ರ ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಪಿ.ತಿಪ್ಪೇಸ್ವಾಮಿ, ನ್ಯೂ ಡೈಮಂಡ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಿ.ಮಂಜುನಾಥ್, ಶಿವಪ್ರಸಾದ್, ನಗರಸಭೆ ಸದಸ್ಯರಾದ ಎಂ.ಡಿ.ಸಣ್ಣಪ್ಪ, ಮಹೇಶ್ ಪಲ್ಲವ, ಗಣೇಶ್, ಬಾಲಕೃಷ್ಣ, ಅಪೂರ್ವ, ಜಯವಾಣಿ, ಅಂಬಿಕಾ, ಮಂಜುಳಾ, ಕೇಶವಮೂರ್ತಿ, ಎ.ರಾಘವೇಂದ್ರ, ಎಂ.ವಿ.ಹರ್ಷ, ನಿತ್ಯಾನಂದ, ಮಲ್ಲೇಶ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts