More

    ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk

    ನವದೆಹಲಿ: ಕರೊನಾ ವೈರಸ್ Covid 19 ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಿದ್ದು, ಭಾರತ ಸರ್ಕಾರ ಇದೀಗ ಜನರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ವಾಟ್ಸ್​ಆ್ಯಪ್ ಚಾಟ್​ಬೋಟನ್ನು ಸಿದ್ಧಪಡಿಸಿದ್ದು, ಚಾಲ್ತಿಗೆ ತಂದಿದೆ. ಇದಕ್ಕೆ MyGov Corona Helpdesk ಎಂಬ ಹೆಸರನ್ನೂ ಕೊಟ್ಟಿದೆ.

    ಈ ವಾಟ್ಸ್​ಆ್ಯಪ್ ಚಾಟ್​ಬೋಟ್​ ಜನರ ಸಂದೇಹಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸುತ್ತ ಅವರ ಸಂಶಯಗಳನ್ನು ನಿವಾರಿಸುವ ಕೆಲಸ ಮಾಡಲಿದೆ. ಸಾಧ್ಯವಾದಷ್ಟು ಫೇಕ್ ನ್ಯೂಸ್​ಗಳು ಹರಡದಂತೆ ತಡೆಯುವಲ್ಲಿ ಇದು ನೆರವಾಗಲಿದೆ. ಈ ಚಾಟ್​ಬೋಟ್​ನ ನಂಬರ್ 9013151515 ಆಗಿದ್ದು, ಎಲ್ಲರೂ ಸೇವ್ ಮಾಡಿ ಇಟ್ಟುಕೊಳ್ಳಬಹುದು ಎಂದು ಸರ್ಕಾರ ಹೇಳಿಕೊಂಡಿದೆ.

    ಈ ಚಾಟ್​ಬೋಟ್​ ಈಗಿರುವ ಸಹಾಯವಾಣಿಗೆ ಹೊರತುಪಡಿಸಿದ್ದಾಗಿದೆ. ಇದನ್ನು ಬಳಸುವುದಕ್ಕೆ ನೀವು ಅನುಸರಿಸಬೇಕಾದ ಸರಳ ಹಂತಗಳಿವು.
    ನಿಮ್ಮ ಸ್ಮಾರ್ಟ್​ಫೋನ್​ ನ ಕಾಂಟ್ಯಾಕ್ಟ್​ ಪಟ್ಟಿಗೆ ‘9013151515’ ಈ ನಂಬರನ್ನು ಸೇರಿಸಿ ಸೇವ್ ಮಾಡಿಕೊಳ್ಳಬೇಕು. ಒಮ್ಮೆ ಈ ನಂಬರ್ ಸೇವ್​ ಆದ ಬಳಿಕ ವಾಟ್ಸ್​ಆ್ಯಪ್ ಓಪನ್ ಮಾಡಬೇಕು. ಬಳಿಕ ಅದಕ್ಕೆ ಮೆಸೇಜ್​ ಕಳುಹಿಸಿದರೆ ಉತ್ತರ ಸಿಗುತ್ತದೆ. ನಿಮ್ಮ ಸಂದೇಹಗಳನ್ನು ಕೇಳಿ ನಿವಾರಿಸಿಕೊಳ್ಳಬಹುದು.

    ಇದರ ಹೊರತಾಗಿ ಭಾರತ ಪೌರರು ಕರೊನಾ ವೈರಸ್ ನ್ಯಾಷನಲ್ ಹೆಲ್ಪ್​ಲೈನ್ ಸಂಖ್ಯೆ +91-11-23978046 ಮತ್ತು ಟೋಲ್ ಫ್ರೀ ನಂಬರ್ 1075ಕ್ಕೆ ಮಾಹಿತಿಗಾಗಿ ಕರೆ ಮಾಡಬಹುದು. ಇದರ ಜತೆಗೆ ನೀವು ‘[email protected]’ ಎಂಬ ಇ-ಮೇಲ್​ ಐಡಿಗೂ ಸಂದೇಹಗಳನ್ನು ಕಳುಹಿಸಿ ಉತ್ತರ ಪಡೆಯಬಹುದಾಗಿದೆ. (ಏಜೆನ್ಸೀಸ್​)

    ಕರೋನಾ ವೈರಸ್​: ರಾಜ್ಯಗಳ ಸಹಾಯವಾಣಿ ಸಂಖ್ಯೆಗಳ ಬಗ್ಗೆ ತಿಳಿದುಕೊಂಡಿರಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts