More

    ಮನೋಜವಂ ಆತ್ರೇಯ ಸಾರಥ್ಯದಲ್ಲಿ ‘ಮೈ ನೇಮ್ ಇಸ್ ರಾಜ್’

    ಬೆಂಗಳೂರು: ಡಾ. ರಾಜಕುಮಾರ್​ ಹುಟ್ಟುಹಬ್ಬಕ್ಕೆ ದಿನಗಣನೆ ಪ್ರಾರಂಭವಾಗಿದೆ. ಇದೇ ಏ.24ರಂದು ವರನಟನ ಹುಟ್ಟುಹಬ್ಬವಿದ್ದು, ಈ ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸುವುದಕ್ಕೆ ಮನೋಜವಂ ಆತ್ರೇಯ ತಯಾರಿ ನಡೆಸಿದ್ದಾರೆ. ಈ ಮನೋಜವಂ ಯಾರು ಎಂಬ ಪ್ರಶ್ನೆ ಬೇಡ. ಕೆಲವು ವರ್ಷಗಳ ಹಿಂದೆ ಜೀ ಕನ್ನಡದ ‘ಸರಿಗಮಪ’ ಮೂಲಕ ‘ಮರಿ ಅಣ್ಣಾವ್ರು ಅಂತಲೇ ಹೆಸರಾಗಿದ್ದ ಮನೋಜವಂ‌ ಅತ್ರೇಯ, ಈಗ ಡಾ. ರಾಜಕುಮಾರ್​ ಅವರಿಗೆ ಗೀತನಮನ ಸಲ್ಲಿಸುವುದಕ್ಕೆ ಹೊರಟಿದ್ದಾರೆ.

    ಇದನ್ನೂ ಓದಿ: ಅಜ್ಞಾತವಾಸಿಯಾದ ರಂಗಾಯಣ ರಘು; ಹೇಮಂತ್ ನಿರ್ಮಾಣ, ಜನಾರ್ದನ್ ನಿರ್ದೇಶನ

    ಏಪ್ರಿಲ್ 28ರ ಗರುವಾರ ಸಂಜೆ 6.30ಕ್ಕೆ ರಾಜಕುಮಾರ್ ಅವರ ನೆನಪಿನಲ್ಲಿ ‘ಮೈ ನೇಮ್ ಇಸ್ ರಾಜ್’ ಎಂಬ ಸಂಗೀತ ಸಂಜೆಯನ್ನು ಅವರು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಹಾಡುಗಳ ಮೂಲಕ ರಾಜಕುಮಾರ್​ ಅವರನ್ನು ನೆನಪಿಸಿಕೊಳ್ಳುವ ಕೆಲಸವಾಗುತ್ತಿದೆ.

    ಈ ಕುರಿತು ಮಾತನಾಡುವ ಮನೋಜವಂ, ‘ನಾನು ಮೊದಲಿನಿಂದಲೂ ಅಣ್ಣಾವ್ರ ಅಭಿಮಾನಿ. ‘ಸರಿಗಮಪ’ ಕಾರ್ಯಕ್ರಮದಲ್ಲೂ ನಾನು ಹೆಚ್ಚಾಗಿ ಅವರ ಹಾಡುಗಳನ್ನು ಹಾಡುತ್ತಿದ್ದೆ. ಎಲ್ಲರೂ ‘ಮರಿ ಅಣ್ಣಾವ್ರು’ ಅಂತಲೇ ಕರೆಯುತ್ತಿದ್ದರು. ಈಗ ಅವರ ನೆನಪಿನಲ್ಲಿ ‘ಮೈ ನೇಮ್ ಇಸ್ ರಾಜ್’ ಎಂಬ ಸಂಗೀತ ಕಾರ್ಯಕ್ರಮವನ್ನು ಟೀಮ್ ಆತ್ರೇಯ ಮೂಲಕ ಆಯೋಜಿಸಿದ್ದೇವೆ. ಚೌಡಯ್ಯ ಮೆಮೋರಿಯಲ್ ಹಾಲ್​​ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಹಿತಿ ಕೊಡುತ್ತಾರೆ.

    ರಾಜ್ ಅವರ ಆದರ್ಶಮಯ ವ್ಯಕ್ತಿತ್ವವನ್ನು ಸಂಗೀತದ ಮೂಲಕ ಪ್ರೇಕ್ಷಕರಿಗೆ ಉಣಬಡಿಸುವ ಕಾರ್ಯಕ್ರಮ ಇದಾಗಲಿದ್ದು, ನಾಡಿನ ಜನಪ್ರಿಯ ಗಾಯಕರು ಹಾಗೂ ವಾದ್ಯಗಾರರ ಸಮ್ಮಿಲನದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಿರಿಯ ನಿರ್ದೇಶಕ ಭಗವಾನ್ ಸೇರಿದಂತೆ ಚಿತ್ರರಂಗದ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.

    ಇದನ್ನೂ ಓದಿ: ಕೆಜಿಎಫ್​-2 ಕುರಿತ ಸರಣಿ ಟ್ವೀಟ್​ ಡಿಲೀಟ್​ ಮಾಡಿ ಉಲ್ಟಾ ಹೊಡೆದ ವಿಮರ್ಶಕ ಯಶ್​​ ಬಗ್ಗೆ ಹೇಳಿದ್ದಿಷ್ಟು…

    ಈ ಕಾರ್ಯಕ್ರಮದಿಂದ ಬಂದ ಹಣವನ್ನು ಮೈಸೂರಿನ ಶಕ್ತಿಧಾಮ ಹಾಗೂ ಬೆಂಗಳೂರಿನ ನವಚೇತನ ಸಂಸ್ಥೆಗೆ ನೀಡುತ್ತೇವೆ ಎನ್ನುತ್ತಾರೆ ಮನೋಜವಂ. ಇದೇ ಸಂದರ್ಭದಲ್ಲಿ ತಾವೇ ಬರೆದಿರುವ ಹಾಡೊಂದನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ.

    ಅಲ್ಲು ಅರ್ಜುನ್​ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್​ ಕೇಳಿದ್ರೆ ಫ್ಯಾನ್ಸ್​ ಥ್ರಿಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts